ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಹಾವೇರಿ, 05 ಜುಲೈ (ಹಿ.ಸ.) : ಆ್ಯಂಕರ್ : ಧಾರವಾಡ ಲೋಕ ಸಭಾ ಕ್ಷೇತ್ರದ ಶಿಗ್ಗಾಂವ - ಸವಣೂರ ವಿಧಾನಸಭಾ ಕ್ಷೇತ್ರದ ಕೇಂದ್ರ ಪುರಸ್ಕೃತ ಯೋಜನೆಗಳಾದ ಪಿ.ಎಮ್. ವಿಶ್ವಕರ್ಮ, ಅಮೃತ ಯೋಜನೆ ಮತ್ತು ಪಿ.ಎಂ.ಇ.ಜಿ.ಪಿ ( ಪ್ರಧಾನಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ) ಪ್ರಗತಿ ಪರಿಶೀಲನಾ ಸಭೆಯನ್ನು ಕೇಂದ್ರ ಸಚ
Meeting


ಹಾವೇರಿ, 05 ಜುಲೈ (ಹಿ.ಸ.) :

ಆ್ಯಂಕರ್ : ಧಾರವಾಡ ಲೋಕ ಸಭಾ ಕ್ಷೇತ್ರದ ಶಿಗ್ಗಾಂವ - ಸವಣೂರ ವಿಧಾನಸಭಾ ಕ್ಷೇತ್ರದ ಕೇಂದ್ರ ಪುರಸ್ಕೃತ ಯೋಜನೆಗಳಾದ ಪಿ.ಎಮ್. ವಿಶ್ವಕರ್ಮ, ಅಮೃತ ಯೋಜನೆ ಮತ್ತು ಪಿ.ಎಂ.ಇ.ಜಿ.ಪಿ ( ಪ್ರಧಾನಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ) ಪ್ರಗತಿ ಪರಿಶೀಲನಾ ಸಭೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಡೆಸಿದರು.

ಪರಿಶೀಲನೆಯ ಸಂದರ್ಭದಲ್ಲಿ ಈ ಯೋಜನೆಗಳ ನಿರ್ವಹಣೆ ತೃಪ್ತಿದಾಯಕವಾಗಿಲ್ಲದ್ದನ್ನು ಮನಗಂಡು ತಕ್ಷಣವೇ ಈ ಯೋಜನೆಗಳ ನಿರ್ವಹಣೆಯನ್ನು ಸುಧಾರಿಸಿ ಕಾರ್ಯರೂಪಕ್ಕೆ ತಂದು ಜನರನ್ನು ತಲುಪವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಮತ್ತೊಮ್ಮೆ ವಿಸ್ತೃತವಾಗಿ ಈ ಯೋಜನೆಗಳ ಪ್ರಗತಿ ಪರಿಶೀಲನಾ (ದೀಶಾ) ಸಭೆಯನ್ನು ನಡೆಸಲಾಗುವದು ಎಂದು ಜೋಶಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande