ವಿಜಯಪುರ, 15 ಜುಲೈ (ಹಿ.ಸ.) :
ಆ್ಯಂಕರ್ : ಪೊಲೀಸರ ಮೇಲೆ ಆರೋಪಿಗಳು ಫೈರಿಂಗ್ ಮಾಡಲು ಯತ್ನ ಮಾಡಿದ್ದಾರೆ. ಅದಕ್ಕಾಗಿ ಪೊಲೀಸರು ಆರೋಪಿಗಳ ಕಾಲಿಗೆ ಗುಂಡೇಟು ನೀಡಿದ್ದಾರೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.
ವಿಜಯಪುರ ನಗರದ ಇಟ್ಟಂಗಿಹಾಳನಲ್ಲಿ ಮಾತನಾಡಿದ ಅವರು, ಖಚಿತ ಮಾಹಿತಿ ಆಧರಿಸಿ ಗಾಂಧಿಚೌಕ್ ಪೊಲೀಸರು ಆರೋಪಿಗಳ ಬಂಧನಕ್ಕೆ ಬಂದಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ನಾಡ ಪಿಸ್ತೂಲ್‌ನಿಂದ ಫೈರಿಂಗ್ ಯತ್ನಿಸಿದ್ದಾರೆ ಎಂದರು.
ಅಲ್ಲದೇ, ಮೂರು ಸುತ್ತು ಫೈರಿಂಗ್ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಒಂದು ಕಂಟ್ರಿ ಪಿಸ್ತೂಲ್, ಕಳ್ಳತನ ಆಗಿರುವ ಬೈಕ್ ವಶಕ್ಕೆ ಪಡೆಯಲಾಗಿದೆ. ಮುಂದಿನ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande