ಬಳ್ಳಾರಿ, 15 ಜುಲೈ (ಹಿ.ಸ.) :
ಆ್ಯಂಕರ್ : ಕರ್ನಾಟಕ ಸರ್ಕಾರ ಸ್ವಾಧೀನ ಮಾಡಿಕೊಂಡಿದ್ದ ಬಲವಂತದ ಹಾಗೂ ಅನ್ಯಾಯದ ಭೂ ಸ್ವಾಧೀನ ವಿರುದ್ಧ ನಿರ್ಣಾಯಕ ಗೆಲುವಿಗೆ ಕುಡತಿನಿ ಭೂ ಸಂತ್ರಸ್ತ ಹೋರಾಟ ಸಮಿತಿ ಮತ್ತು ವಿವಿಧ ರೈತಪರ ಸಂಘಟನೆಗಳು ನಗರದಲ್ಲಿ ಮಂಗಳವಾರ ಸಂಜೆ ಸಂಭ್ರಮಾಚರಣೆ ನಡೆಸಿವೆ.
ಬಲವಂತ ಹಾಗೂ ಅನ್ಯಾಯದ ಕೆಐಎಡಿಬಿ ಭೂ ಸ್ವಾಧೀನದ ವಿರುದ್ಧ ಅಪಪ್ರಚಾರ,ದೌರ್ಜನ್ಯ, ಪೆÇಲೀಸ್ ದಬ್ಬಾಳಿಕೆ, ಸುಳ್ಳು ಮೊಕದ್ದಮೆ ಇನ್ನಿತರೆ ಬೆದರಿಕೆಗಳಿಗೆ ಭಯ ಬೀಳದೇ 1198 ದಿನಗಳ ಹೋರಾಟ ನಡೆಸಿ ಸಂಪೂರ್ಣ ಜಯಗಳಿಸಿರುವ ಚನ್ನರಾಯಪಟ್ಟಣ ಹೋಬಳಿ ರೈತರನ್ನು ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ಸಮಿತಿ ಹಾರ್ದಿಕವಾಗಿ ಅಭಿನಂದಿಸಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ ರೈತರು ಮತ್ತು ರೈತ ಸಂಘಟನೆಯ ಮುಖಂಡರು, ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿ, ಹೋರಾಟದಲ್ಲಿ ಪಾಲ್ಗೊಂಡಿದ್ದವರಿಗೆ ಕೃತಜ್ಞತೆಗಳನ್ನು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್