ಬಳ್ಳಾರಿ ವಲಯದ ಐಜಿಪಿಯಾಗಿ ವರ್ತಿಕಾ ಕಟಿಯಾರ್
ಬಳ್ಳಾರಿ, 15 ಜುಲೈ (ಹಿ.ಸ.) : ಆ್ಯಂಕರ್ : ಬಳ್ಳಾರಿ ಪೊಲೀಸ್ ವಲಯದ ನೂತನ ಡಿಐಜಿಪಿಯಾಗಿ ವರ್ತಿಕಾ ಕಟಿಯಾರ್ ಅವರು ವರ್ಗವಾಗಿದ್ದು, ಮಂಗಳವಾರ ರಾತ್ರಿ 8 ಗಂಟೆಯ ನಂತರ ಅಥವಾ ಬುಧವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಲಿದ್ದಾರೆ. ಮೂಲಗಳ ಪ್ರಕಾರ, ವರ್ತಿಕ ಕಟಿಯಾರ್ ಅವರು ಮಂಗಳವಾರ ಸಂಜೆ 4 ಗಂಟೆ ಸ
ಬಳ್ಳಾರಿ ವಲಯದ ಐಜಿಪಿಯಾಗಿ ವರ್ತಿಕಾ ಕಟಿಯಾರ್


ಬಳ್ಳಾರಿ, 15 ಜುಲೈ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಪೊಲೀಸ್ ವಲಯದ ನೂತನ ಡಿಐಜಿಪಿಯಾಗಿ ವರ್ತಿಕಾ ಕಟಿಯಾರ್ ಅವರು ವರ್ಗವಾಗಿದ್ದು, ಮಂಗಳವಾರ ರಾತ್ರಿ 8 ಗಂಟೆಯ ನಂತರ ಅಥವಾ ಬುಧವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಲಿದ್ದಾರೆ.

ಮೂಲಗಳ ಪ್ರಕಾರ, ವರ್ತಿಕ ಕಟಿಯಾರ್ ಅವರು ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಬೆಂಗಳೂರನ್ನು ಬಿಟ್ಟಿದ್ದು, ರಾತ್ರಿ 8 ಗಂಟೆಯ ಸುಮಾರಿಗೆ ಕಚೇರಿ ತಲುಪುವ ಸಾಧ್ಯತೆಗಳಿವೆ.

2010ನೇ ಬ್ಯಾಚಿನ ಐಪಿಎಸ್ ಅಧಿಕಾರಿ ಆಗಿರುವ ವರ್ತಿಕಾ ಕಟಿಯಾರ್ ಅವರು ಈವರೆಗೆ ಡಿಐಜಿ ಅಡಿಷನಲ್ ಕಮಾಂಡೆಂಟ್ ಆಫ್ ಹೋಂಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಬಳ್ಳಾರಿ ವಲಯ ಐಜಿಪಿ ಹುದ್ದೆಯಲ್ಲಿದ್ದ ಲೋಕೇಶ್ ಅವರು ನಿವೃತ್ತಿ ಆದಾಗಿನಿಂದ ಈ ಹುದ್ದೆ ಖಾಲಿಯಾಗಿತ್ತು. ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆ ಈ ವೃತ್ತದ ವ್ಯಾಪ್ತಿಗೆ ಬರಲಿವೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande