ಬೆಂಗಳೂರು, 15 ಜುಲೈ (ಹಿ.ಸ.) :
ಆ್ಯಂಕರ್ : ವಿಮಾನ ಕಾರ್ಖಾನೆ ಬಸವ ಸಮಿತಿಯು ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಹಾಗೂ ಸಮಿತಿಯ 41 ನೇ ವಾರ್ಷಿಕೋತ್ಸವ ಅಂಗವಾಗಿ ಜುಲೈ 20, ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಕೊಪ್ಪಳದ ಗವಿಮಠದ ಇದುವರೆಗಿನ ಪೀಠಾಧಿಪತಿಗಳ ಕುರಿತು ಈಶ್ವರ ಹತ್ತಿ ಅವರು ರಚಿಸಿರುವ ಅಟ್ಟಣಿಕೆಗಳು ಹದಿನೆಂಟು ನಾಟಕ ಪ್ರದರ್ಶನ ಆಯೋಜಿಸಿದೆ.
ಅಂದು ಬೆಳಿಗ್ಗೆ 8.30 ರಿಂದ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು ರಂಗೋಲಿ ಸ್ಪರ್ಧೆ,ವಚನ ಗಾಯನ,ಮಕ್ಕಳಿಂದ ಶರಣ,ಶರಣೆಯರ ವೇಷ ಭೂಷಣ ಪ್ರದರ್ಶನ ಮತ್ತಿತರ ಸ್ಪರ್ಧೆಗಳು ಜರುಗಲಿವೆ.
ಬೆಳಿಗ್ಗೆ 10 ಗಂಟೆಗೆ ಕೊಪ್ಪಳದ ಸಂಸ್ಥಾನ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಉದ್ಘಾಟನೆ ಕಾರ್ಯಕ್ರಮ ಜರುಗವುದು.ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರ ತಾಲ್ಲೂಕಿನ ಅಶೋಕ ಸಿದ್ದಾಪುರದ ಶ್ರೀ ಸೋಮಶೇಖರ ಮಹಾಸ್ವಾಮಿಗಳಿಗೆ ಬಸವ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಮಿತಿಯ ಅಧ್ಯಕ್ಷರಾದ ಓ.ಬೇಲೂರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 2.30 ಕ್ಕೆ ಹೆಚ್‌ಎಎಲ್ ಕಲಾವಿದರು ಕೊಪ್ಪಳದ ಹೆಸರಾಂತ ಗವಿಮಠದ ಐತಿಹ್ಯ ಕುರಿತು ಈಶ್ವರ ಹತ್ತಿ ಅವರು ರಚಿಸಿರುವ ಅಟ್ಟಣಿಕೆಗಳು ಹದಿನೆಂಟು ನಾಟಕವು ಪ್ರದರ್ಶಿಸಲಿದ್ದಾರೆ.ಮಂಜುನಾಥ ನಾಗನೂರ ಅವರು ನಾಟಕ ನಿರ್ದೇಶಿಸಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಿದೆ
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್