ಸುಕೋ ಬ್ಯಾಂಕಿನ 32ನೆಯ ಸಂಸ್ಥಾಪನಾ‌ ದಿನಾಚರಣೆ
ಬಳ್ಳಾರಿ, 03 ಮೇ (ಹಿ.ಸ.) : ಆ್ಯಂಕರ್ : ಸುಕೋ ಬ್ಯಾಂಕಿನ ಮೂವತ್ತೆರಡನೆಯ ಸಂಸ್ಥಾಪನಾ‌ ದಿನಾಚರಣೆಯ ಅಂಗವಾಗಿ ಕ್ಯು ಆರ್ ಕೋಡ್ ಆಧಾರಿತ ಡಿಜಿಟಲ್‌ ಪೇಮೆಂಟ್ ತಂತ್ರಜ್ಞಾನದ ವ್ಯವಸ್ಥೆಯನ್ನು ಶನಿವಾರ ಲೋಕಾರ್ಪಣೆ ಮಾಡಿದೆ. ಸುಕೋ ಬ್ಯಾಂಕಿನ ವ್ಯವಸ್ಥಾಪಕ‌ ನಿರ್ದೇಶಕ‌ ಜಿ.ಎಸ್.‌ ರವಿ ಸುಧಾಕರ ಅವರು,‌
ಸುಕೋ ಬ್ಯಾಂಕಿನ 32ನೆಯ ಸಂಸ್ಥಾಪನಾ‌ ದಿನಾಚರಣೆ : ಕ್ಯು ಆರ್ ಕೋಡ್ ಪೇಮೆಂಟ್ ಪ್ರಾರಂಭ


ಬಳ್ಳಾರಿ, 03 ಮೇ (ಹಿ.ಸ.) :

ಆ್ಯಂಕರ್ : ಸುಕೋ ಬ್ಯಾಂಕಿನ ಮೂವತ್ತೆರಡನೆಯ ಸಂಸ್ಥಾಪನಾ‌ ದಿನಾಚರಣೆಯ ಅಂಗವಾಗಿ ಕ್ಯು ಆರ್ ಕೋಡ್ ಆಧಾರಿತ ಡಿಜಿಟಲ್‌ ಪೇಮೆಂಟ್ ತಂತ್ರಜ್ಞಾನದ ವ್ಯವಸ್ಥೆಯನ್ನು ಶನಿವಾರ ಲೋಕಾರ್ಪಣೆ ಮಾಡಿದೆ.

ಸುಕೋ ಬ್ಯಾಂಕಿನ ವ್ಯವಸ್ಥಾಪಕ‌ ನಿರ್ದೇಶಕ‌ ಜಿ.ಎಸ್.‌ ರವಿ ಸುಧಾಕರ ಅವರು,‌ ಬ್ಯಾಂಕಿನ ಸಂಸ್ಥಾಪನಾ ದಿನದ ಅಂಗವಾಗಿ ಕ್ಯು ಆರ್ ಕೋಡ್ ಪೇಮೆಂಟ್ ಪ್ರಾರಂಭಿಸಲಾಗಿದೆ. ಅಲ್ಲದೇ, ಸ್ವಾಮಿ ವಿವೇಕಾನಂದ ಚಾರಿಟೆಬಲ್ ಬ್ಲಡ್ ಬ್ಯಾಂಕ್ ನ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಗಿದೆ ಎಂದರು.

ಸುಕೋ ಬ್ಯಾಂಕಿನ ಆಡಳಿತ ಮಂಡಳಿಯ ಕಾರ್ಯದರ್ಶಿ ವೆಂಕಟಶಿವಯ್ಯ ಅವರು, ಬ್ಯಾಂಕಿನ ಸಿಬ್ಬಂದಿಯು ದಾನವಾಗಿ ನೀಡಿರುವ ರಕ್ತವನ್ನು ತುರ್ತು ಅಗತ್ಯ ಇರುವವರಿಗೆ ಉಚಿತವಾಗಿ ನೀಡಲು ಕೋರಲಾಗಿದೆ ಎಂದರು.

ಸುಕೋ‌ ಬ್ಯಾಂಕಿನ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾದ ಪಿ.ಎಂ. ಸತೀಶ್ ಅವರು, ಬ್ಯಾಂಕಿನ ಕ್ಯು ಆರ್ ಕೋಡ್ ಆಧಾರಿತ ಡಿಜಿಟಲ್‌ ಪೇಮೆಂಟ್ ತಂತ್ರಜ್ಞಾನದ ವ್ಯವಸ್ಥೆಯನ್ನು ಗ್ರಾಹಕರು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಬ್ಯಾಂಕಿನ‌ ಪ್ರಧಾನ ವ್ಯವಸ್ಥಾಪಕ ಟಿ.ಎನ್. ಈಶ್ವರನ್ ಅವರು ಸ್ವಾಗತಿಸಿದರು. ರಿಕವರಿ ವಿಭಾಗದ ಮುಖ್ಯಸ್ಥ ಇ. ಆನಂದ್ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪಕ ಯು.‌ ಗಾದಿಲಿಂಗಪ್ಪ ಅವರು ವಂದನಾರ್ಪಣೆ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande