ಕಾಂಗ್ರೆಸ್ ಸರ್ಕಾರದ ಸಾಧನಾ‌ ಸಮಾವೇಶದ ವಿರುದ್ಧ ಸಂಸದ‌ ಲೇವಡಿ
ವಿಜಯಪುರ, 06 ಮೇ (ಹಿ.ಸ.) : ಆ್ಯಂಕರ್ : ಕೇರಳ ರಾಜ್ಯದ ವೈಯನಾಡ್ ಉಪಚುನಾವಣೆ ಸಂದರ್ಭದಲ್ಲಿ ಎಐಸಿಸಿ ಧುರೀಣೆ ಪ್ರಿಯಾಂಕಾ ಗಾಂಧೀ ಅವರು ನಾಮಪತ್ರ ಸಲ್ಲಿಸುವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೊರಗಡೆ ನಿಂತು ಕಿಡಕಿಯಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ವೀಕ್ಷಿಸುತ್ತಿದ್ದರು. ಇದು
ಕಾಂಗ್ರೆಸ್ ಸರ್ಕಾರದ ಸಾಧನಾ‌ ಸಮಾವೇಶದ ವಿರುದ್ಧ ಸಂಸದ‌ ಲೇವಡಿ


ವಿಜಯಪುರ, 06 ಮೇ (ಹಿ.ಸ.) :

ಆ್ಯಂಕರ್ : ಕೇರಳ ರಾಜ್ಯದ ವೈಯನಾಡ್ ಉಪಚುನಾವಣೆ ಸಂದರ್ಭದಲ್ಲಿ ಎಐಸಿಸಿ ಧುರೀಣೆ ಪ್ರಿಯಾಂಕಾ ಗಾಂಧೀ ಅವರು ನಾಮಪತ್ರ ಸಲ್ಲಿಸುವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೊರಗಡೆ ನಿಂತು ಕಿಡಕಿಯಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ವೀಕ್ಷಿಸುತ್ತಿದ್ದರು.

ಇದು ಕಾಂಗ್ರೆಸ್ ಸಾಧನೆಯೇ? ದಲಿತರ ಶ್ರೇಯೋಭಿವೃದ್ಧಿಗಾಗಿ ಇರುವ ಎಸ್‌ಇಪಿ ಟಿಎಸ್‌ಪಿ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿದ್ದು ಕಾಂಗ್ರೆಸ್ ಸಾಧನೆಯೇ ಎಂದು ಸಂಸದ ರಮೇಶ ಜಿಗಜಿಣಗಿ ಕಾಂಗ್ರೆಸ್ ಸರ್ಕಾರದ ಸಾಧನೆಗಳ ಬಗ್ಗೆ ಲೇವಡಿ ಮಾಡಿದ್ದಾರೆ.

ವಿಜಯಪುರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಜಿಗಜಿಣಗಿ, ಕಾಂಗ್ರೆಸ್ ಸರ್ಕಾರ ಯಾವ ಸಾಧನೆಯನ್ನೂ ಮಾಡಿಲ್ಲ, ಕೇವಲ ಜನರಿಗೆ ಮೋಸ ಮಾಡಿದೆ, ಜನರಿಗೆ ಮೋಸ ಮಾಡಿ ಅವರಿಗೆ ಬೆಲೆ ಏರಿಕೆಯ ಬಿಸಿ ಅನುಭವಿಸುವಂತೆ ಮಾಡಿದ್ದು ಮಾತ್ರ ಕಾಂಗ್ರೆಸ್ ಸಾಧನೆ.

ಕಾಂಗ್ರೆಸ್ ನಾಯಕರು ಈ ಎಲ್ಲ ವಾಸ್ತವ ಸಂಗತಿಯನ್ನು ಬದಿಗಿಟ್ಟು ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ಳುವ ರೀತಿಯಲ್ಲಿ ಸರ್ಕಾರದ ಸಾಧನಾ ಸಮಾವೇಶ ಸಂಘಟಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಜಿಗಜಿಣಗಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇರಳ ರಾಜ್ಯದ ವೈಯನಾಡ್ ಉಪಚುನಾವಣೆ ಸಂದರ್ಭದಲ್ಲಿ ಎಐಸಿಸಿ ಧುರೀಣೆ ಪ್ರಿಯಾಂಕಾ ಗಾಂಧೀ ಅವರು ನಾಮಪತ್ರ ಸಲ್ಲಿಸುವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೊರಗಡೆ ನಿಂತು ಕಿಡಕಿಯಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ವೀಕ್ಷಿಸುತ್ತಿದ್ದರು.

ಇದು ಕಾಂಗ್ರೆಸ್ ಸಾಧನೆಯೇ? ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವಂತೆ ಮಾಡಿ ಜನಸಾಮಾನ್ಯರ ಜೇಬಿಗೆ ಹೊರೆ ಮಾಡಿದ್ದು ಕಾಂಗ್ರೆಸ ಸರ್ಕಾರದ ಸಾಧನೆಯೇ? ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಬಳಸಬೇಕಾದ ಎಸ್.ಇ.ಪಿ.-ಟಿಎಸ್‌ಪಿ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿದ್ದು ಕಾಂಗ್ರೆಸ್ ಸಾಧನೆಯೇ? ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮಹರ್ಷಿ ವಾಲ್ಮೀಕಿ ನಿಗಮದ ಹಣವನ್ನು ಬಳಸಬೇಕಾದ ಸರ್ಕಾರ ಅದನ್ನು ತೆಲಂಗಾಣ ಚುನಾವಣೆಗೆ ಬಳಸಿಕೊಂಡಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ನನ್ನ ಇಡೀ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಆಡಳಿತ ವ್ಯವಸ್ಥೆಯನ್ನು ನಾನು ನೋಡಿಲ್ಲ, ಸಾಧನೆಯನ್ನು ದುರ್ಬಿನು ಹಾಕಿ ಹುಡುಕಿದರೂ ಸಿಗುತ್ತಿಲ್ಲ, ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನರು ವೇದನೆ ಅನುಭವಿಸುತ್ತಿದ್ದಾರೆ ಹೊರತು ಸರ್ಕಾರದ ಸಾಧನೆಯಂತೂ ದೂರದ ಮಾತು.

ಒಟ್ಟಾರೆ ಈ ಸರ್ಕಾರ ಜನರಿಗೆ ನಿತ್ಯ ಮೋಸ ಮಾಡುತ್ತಿದೆ, ನಿತ್ಯ ಒಂದೊಂದು ಸಮಸ್ಯೆಯ ಬರೆ ಎಳೆಯುತ್ತಿದೆ ಎಂದು ಜಿಗಜಿಣಗಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande