ಕುಡಿಯುವ ನೀರಿನ ಸಮಸ್ಯೆ, ಜನರ‌ ಪರದಾಟ
ವಿಜಯಪುರ, 06 ಮೇ (ಹಿ.ಸ.) : ಆ್ಯಂಕರ್ : ವಿಜಯಪುರ ತಾಲೂಕಿನ ಮಡಸನಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರ ಹಾಹಾಕಾರ ತಾರಕಕ್ಕೆ ಏರಿದೆ. ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಹೆಣ್ಣು ಮಕ್ಕಳು ಮನೆ ಕೆಲಸ ಬಿಟ್ಟು ನೀರಿಗಾಗಿ ನಳದ ಎದುರು‌ ಕಾಯುವಂತಾಗಿದೆ. ನಮ್ಮ ಭಾಗದ ಶಾಸಕರು ಮಂತ್ರಿಗಳು
ನೀರಿನ ಸಮಸ್ಯೆ


ವಿಜಯಪುರ, 06 ಮೇ (ಹಿ.ಸ.) :

ಆ್ಯಂಕರ್ : ವಿಜಯಪುರ ತಾಲೂಕಿನ ಮಡಸನಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರ ಹಾಹಾಕಾರ ತಾರಕಕ್ಕೆ ಏರಿದೆ. ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಹೆಣ್ಣು ಮಕ್ಕಳು ಮನೆ ಕೆಲಸ ಬಿಟ್ಟು ನೀರಿಗಾಗಿ ನಳದ ಎದುರು‌ ಕಾಯುವಂತಾಗಿದೆ.

ನಮ್ಮ ಭಾಗದ ಶಾಸಕರು ಮಂತ್ರಿಗಳು ಇದ್ದಾರೋ ಇಲ್ಲವೋ ಗೊತ್ತಿಲ್ಲ.ಬನಮ್ಮ ಮಡಸನಾಳ ಗ್ರಾಮದಲ್ಲಿ ಮತ್ತು ಹತ್ತಿರದ 20 ವಸತಿಗಳ ಸಾರ್ವಜನಿಕರು ಸೈಕಲ್ ಮತ್ತು ಮೋಟರ್ ಸೈಕಲ್‍ಗಳ ಮೇಲೆ ಕೊಡ ಹಿಡಿದುಕೊಂಡು ನೀರಿಗಾಗಿ ಓಡಾಡುತ್ತ ಪರಿತಪಿಸುತ್ತಿದ್ದಾರೆ.

ಈ ಕುರಿತು ರಸ್ತೆ ರೋಕೊ, ಪ್ರತಿಭಟನೆಗಳು ನಡೆಯುತ್ತಿವೆ. ಶಾಸಕರು, ಮಂತ್ರಿಗಳು ಮತ್ತು ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಸಾಕಾಗುವಷ್ಟು ನೀರಿನ ಸಂಗ್ರಹವಿದೆಯೆಂದು ಹೇಳಿಕೆ ನೀಡುತ್ತಿದ್ದಾರೆ.

ಸರಬರಾಜು ಏಕೆ ಮಾಡುತ್ತಿಲ್ಲ ಅಂತ ಕೇಳಿದರೆ ಒಬ್ಬರು ಮೇಲೆ ಒಬ್ಬರು ಜವಾಬ್ದಾರಿ ಹಾಕಿ ಜಾರಿ ಕೊಳ್ಳುತ್ತಿದ್ದಾರೆ ಆದರೆ ಸರ್ಕಾರ ಮಧ್ಯಸ್ಥಿಕೆ ವಹಿಸಿದರೆ ಲಿಫ್ಟ್ ಮಾಡಿ ನೀರು ಪೂರೈಕೆ ಮಾಡಲು ಕ್ಯಾನಾಲ್ ದಿಂದ ಕೆರೆಗೆ 2 ಕಿಲೋ ಮೀಟರ್ ಅಂತರವಿದ್ದು ಅದಕ್ಕೆ ಪೈಪಲೈನ್ ಮಾಡಿದರೆ ಶಾಶ್ವತ ಪರಿಹಾರ ಆಗುವುದು.

ಇಂತಹ ಭೀಕರ ನೀರಿನ ಪರಿಸ್ಥಿತಿ ಇದ್ದಾಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಹಾರಾಷ್ಟ್ರದ ಹಲವು ಹಳ್ಳಿಗಳಿಗೆ ನೀರು ಪೈಪಲೈನ್ ಮುಖಾಂತರ ಹರಿದು ಹೋಗಲು ಸಹಕರಿಸಿ ನಮ್ಮ ಜನತೆಗೆ ಸಮಸ್ಯೆ‌‌ ಎದುರಿಸುವಂತೆ ಮಾಡಿದ್ದಾರೆ. ಜನರು ಆಕ್ರೋಶಕ್ಕೆ ಏಳುವ ಮೊದಲು ಸೂಕ್ತ ನೀರಿನ ಸರಬರಾಜು ಮಾಡಿ ನಿಮ್ಮ ಜವಾಬ್ದಾರಿಗೆ ಗೌರವ ತಂದುಕೊಳ್ಳಿರಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಜಿಲ್ಲಾಡಳಿತ ಇದ್ದ ಪರಿಸ್ಥಿತಿಯನ್ನು ಜನತೆಗೆ ತಿಳಿಸಬೇಕು. ಇಂದು ನಾಳೆ ಅಂತ ಕುಂಟು ನೆಪ ಹೇಳಬಾರದು. ಜಿಲ್ಲಾಡಳಿತ ಜನರಿಗೆ ನೀರಿನ ಕುರಿತು ಜನರ ಜೊತೆ ಚೆಲ್ಲಾಟ ಆಡಬಾರದು. ಇದೇ ಸ್ಥಿತಿ ಮುಂದುವರಿದಲ್ಲಿ ಪಕ್ಷಾತೀತವಾಗಿ ಅನೇಕ ಸಂಘಟನೆಗಳು ಸೇರಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande