ವಿಜಯಪುರ, 06 ಮೇ (ಹಿ.ಸ.) :
ಆ್ಯಂಕರ್ : ಸದಾ ಹಿಂದುತ್ವ, ಹಿಂದೂಗಳ ಪರವಾಗಿ ಗಟ್ಟಿಯಾಗಿ ನಿಲ್ಲುವ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಮಂಗಳೂರಿನಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿ, ರೂ.5 ಲಕ್ಷ ಸಹಾಯ ಧನ ಘೋಷಿಸಿದರು. ಮಂಗಳವಾರ ಶಾಸಕರ ಆಪ್ತ ಸಹಾಯಕರು ಬಂಟ್ವಾಳ ತಾಲ್ಲೂಕಿನ ಕಾರಿಂಜ ಗ್ರಾಮದ ತೋಟದ ಮನೆಗೆ ಭೇಟಿ ನೀಡಿ, ಸುಹಾಸ್ ಶೆಟ್ಟಿ ಅವರ ತಂದೆ-ತಾಯಿಗೆ ಸಾಂತ್ವನ ಹೇಳಿ ರೂ.5 ಲಕ್ಷ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕರಾದ ಪಿ.ಜಿ.ಕೆಂಗನಾಳ, ಉಮೇಶ ಕೋರೆ, ಯಲಗೊಂಡ ಬಾಗಾದಿ, ಮುಖಂಡರಾದ ದಾದಾಸಾಹೇಬ ಬಾಗಾಯತ, ಸಚಿನ ಕೋರಿ ಸೇರಿದಂತೆ ಸ್ಥಳೀಯ ಹಿಂದೂ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande