ಬಾಗಲಕೋಟೆ, 06 ಮೇ (ಹಿ.ಸ.) :
ಆ್ಯಂಕರ್ : ಯಾವುದೇ ಸರ್ಕಾರ ಇರಲಿ. ಜಾತಿ ಸಮೀಕ್ಷೆಗೆ ಕೈ ಹಾಕಿದರೆ ಅದು ಜೇನುಗೂಡಿಗೆ ಕೈ ಹಾಕಿದಂತೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಈ ಕುರಿತು ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾತಿ ಜನಗಣತಿ ಮಾಡುತ್ತಿವೆ. ಒಂದು ವರ್ಗದ ಜನರು ಒಂದೆ ಮಕ್ಕಳು ಸಾಕು ಅಂತಾರೆ. ಇನ್ನೊಂದು ವರ್ಗದ ಜನರು ನಾಲ್ಕೈದು ಮಕ್ಕಳನ್ನ ಹೆರುತ್ತಾರೆ. ಇದು ಸಮೀಕ್ಷೆಯಲ್ಲಿ ಎರಡು ವರ್ಗಗಳ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಲಿಂಗಾಯತರು 1 ಕೋಟಿ 10 ಲಕ್ಷ ಜನರಿದ್ದಾರೆ. ಆದರೆ ಸಮೀಕ್ಷೆಯಲ್ಲಿ ಲಿಂಗಾಯತ ಉಪಜಾತಿ ಬೇರ್ಪಡಿಸಲಾಗಿದೆ.ಇದ್ರಿಂದ ಸಮೀಕ್ಷೆಯಲ್ಲಿ ಲಿಂಗಾಯತ ಸಂಖ್ಯೆ ಕಡಿಮೆ ಆಗಿದೆ ಎಂದರು
ಇದಕ್ಕಾಗಿ ಸಮಾಜದಲ್ಲಿ ಜಗಳ ಶುರುವಾಗುತ್ತದೆ. ಜಾತಿಸಮೀಕ್ಷೆ ಮಾಡುವುದರಿಂದ ಯಾರಿಗೆ ಲಾಭ ಅನ್ನೋದು ನನಗಂತೂ ತಿಳಿದಿಲ್ಲ.ಕೇಂದ್ರ ಸರ್ಕಾರ ಜಾತಿ ಜನಗಣತಿ ಮಾಡುತ್ತಿದೆ.ಇದರ ಫಲಿತಾಂಶ ಅಷ್ಟು ಸುಲಭವಾಗಿ ತಣ್ಣಗ ಆಗೋದಿಲ್ಲ ಎಂದರು.
ಜಾತಿ ಗಣತಿ ಅವಶ್ಯಕವಲ್ಲ ಅನ್ನೋದು ನನ್ನ ಅಭಿಪ್ರಾಯ. ಜಾತಿ ಜನಗಣತಿ ಸಮೀಕ್ಷೆ ಪೂರ್ವ ದೇಶದಲ್ಲಿ ನೆಮ್ಮದಿ ಇತ್ತು. ಇದೀಗ ಮತ್ತೆ ಜಾತಿ ಜನಗಣತಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.ಜಾತಿ ಜನಗಣತಿ ಪ್ರತಿಫಲ ಮಾತ್ರ ಒಳ್ಳೆಯದಿರೋದಿಲ್ಲವೆಂದು ಬಸವರಾಜ್ ಹೊರಟ್ಟಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande