ಗದಗ, 03 ಮೇ (ಹಿ.ಸ.) :
ಆ್ಯಂಕರ್ : ಸಾರ್ವಜನಿಕರ ಸೇವೆಗೆ ಸಮರ್ಪಿತವಾಗಿರಬೇಕಾದ ಸಾರಿಗೆ ಇಲಾಖೆ (ಆರ್‌ಟಿಒ) ಕಚೇರಿ ಗದಗದಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯತೆ ಮತ್ತು ಜವಾಬ್ದಾರಿಯ ಕೊರತೆ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಮಧ್ಯಾಹ್ನದ ಸಮಯದಲ್ಲಿ ಕೆಲಸಕ್ಕೆ ಬದಲಾಗಿ ಎಲ್ಲರೂ ಕಚೇರಿ ಬಿಟ್ಟು ಪಾರ್ಟಿಗೆ ಹಾಜರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಧ್ಯಾಹ್ನ ಒಂದು ಗಂಟೆಯಲ್ಲೇ ಕೆಲವರು ಕಚೇರಿ ಬಿಟ್ಟು ಹೋಗಿದ್ದರೆ, ನಾಲ್ಕು ಗಂಟೆಯ ತನಕ ಹಾಜರಾಗಲಿಲ್ಲ. ಲೈಸನ್ಸ್, ವಾಹನ ರಿಜಿಸ್ಟ್ರೇಷನ್ ಹಾಗೂ ಫಿಟ್ನೆಸ್ ಸೆರ್ಟಿಫಿಕೆಟ್‌ಗಾಗಿ ಬರುವ ಸಾರ್ವಜನಿಕರು ಖಾಲಿ ಟೇಬಲ್ ಮತ್ತು ಖರ್ಚಿಗಳನ್ನು ನೋಡುತ್ತ ವಾಪಸ್ ಹೋಗುತ್ತಿದ್ದಾರೆ.
ಸ್ಥಳಕ್ಕೆ ಬಂದಿರುವವರು ಎರಡು ಗಂಟೆಗಳ ಕಾಲ ಕಾಯಿದ್ದರೂ, ಯಾವುದೇ ಸಿಬ್ಬಂದಿ ಹಾಜರಾಗಲಿಲ್ಲ. ಎಷ್ಟೋ ಮಂದಿ ಬೇಸತ್ತ ವಾಪಸು ಹೋಗಿದ್ದಾರೆ ಎಂದು ಆರ್ ಟಿ ಓ ಕಚೇರಿ ಕೆಲಸಕ್ಕೆ ಬಂದವರು ಹೇಳಿದ್ದಾರೆ. ಸಾರ್ವಜನಿಕರ ಬೇಸರಗೊಂಡು “ನಾವು ದೂರದ ಊರಿನಿಂದ ಬಂದಿದ್ದೇವೆ, ಕೆಲಸವೇ ಆಗದಿದ್ದರೆ ಹೇಗೆ.? ಕಚೇರಿಯ ಸಮಯವನ್ನಾದರೂ ಪಾಲಿಸಬೇಕು” ಎಂಬ ಜನರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
4 ಗಂಟೆ ನಂತರ ಬಂದ ಅಧಿಕಾರಿಗಳು ನಮ್ಮ ಸಿಬ್ಬಂದಿ ಕಾರ್ಯಕ್ರಮ ಇತ್ತು. ಹೀಗಾಗಿ ಎಲ್ಲರೂ ಊಟಕ್ಕೆ ಹೋಗಿದ್ದೇವು ಎಂದು ಹೇಳಿದ್ದಾರೆ. ಹೀಗಾಗಿ ಹಿರಿಯ ಅಧಿಕಾರಿಗಳು ಸಿಬ್ಬಂದಿ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP