ಪುಸ್ತಕ ಸಂಸ್ಕೃತಿ ಬೆಳೆಸಿಕೊಳ್ಳಬೇಕು : ಅಶ್ವಿನಿ ಬಳಿಗೇರ
ಗದಗ, 03 ಮೇ (ಹಿ.ಸ.) : ಆ್ಯಂಕರ್ : ಪುಸ್ತಕಗಳು ನಮ್ಮ ಸಹಾಯಕ್ಕೆ ಸದಾ ಸಿದ್ಧವಾಗಿರುತ್ತವೆ. ಅಪಾರವಾದ ಜ್ಞಾನ ಕೋಶದ ಪ್ರಾಪ್ತಿ ಪುಸ್ತಕಗಳಲ್ಲಿದೆ. ಆದ್ದರಿಂದ ಪುಸ್ತಕಗಳು ದೇವ ಮಂದಿರದ ಚಿನ್ನದ ಪಾತ್ರೆಗಳು. ಪುಸ್ತಕ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಅಶ್ವಿನಿ .ಕೆ. ಬಳಿಗೇರ ಮಾತನಾಡಿದರು. ಗದಗ ನಗರದ
ಪೋಟೋ


ಗದಗ, 03 ಮೇ (ಹಿ.ಸ.) :

ಆ್ಯಂಕರ್ : ಪುಸ್ತಕಗಳು ನಮ್ಮ ಸಹಾಯಕ್ಕೆ ಸದಾ ಸಿದ್ಧವಾಗಿರುತ್ತವೆ. ಅಪಾರವಾದ ಜ್ಞಾನ ಕೋಶದ ಪ್ರಾಪ್ತಿ ಪುಸ್ತಕಗಳಲ್ಲಿದೆ. ಆದ್ದರಿಂದ ಪುಸ್ತಕಗಳು ದೇವ ಮಂದಿರದ ಚಿನ್ನದ ಪಾತ್ರೆಗಳು. ಪುಸ್ತಕ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಅಶ್ವಿನಿ .ಕೆ. ಬಳಿಗೇರ ಮಾತನಾಡಿದರು.

ಗದಗ ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನೆಡೆದ 2743 ನೇ ಶಿವಾನುಭವದಲ್ಲಿ ಉಪನ್ಯಾಸಕರಾಗಿ ಹಾವೇರಿಯ ಕಡಕೋಳ ಎಂ.ಪಿ.ಎಸ್ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಅಶ್ವಿನಿ .ಕೆ. ಬಳಿಗೇರ ಮಾತನಾಡಿದರು, ಗ್ರಂಥಾಲಯಗಳಲ್ಲಿ ಹೋಗಿ ಕೂತು ಕೊಂಡಾಗ ನಮ್ಮ ಮುಂದೆ ವಿಶಾಲವಾದ ಪುಸ್ತಕಗಳ ರಾಶಿಯೇ ಬೀಳುತ್ತವೆ. ಉತ್ತಮ ಪುಸ್ತಕಗಳಿಂದ ಬದುಕಿಗೆ ಬೆಳಕು, ಸಮಾಧಾನ, ಸಂತೋಷ ದೊರೆಯುತ್ತದೆ. ಸಮಸ್ಯೆಗಳಿಗೆ ಪರಿಹಾರ, ನೊಂದ ಮನಸ್ಸಿಗೆ ಸಾಂತ್ವನ ನೀಡುತ್ತವೆ. ಗಾಂಧೀಜಿ, ಕಲಾಂ, ಅಂಬೇಡ್ಕರ್ ಮುಂತಾದ ಮಹಾನ್‍ವ್ಯಕ್ತಿಗಳ ಅಧ್ಯಯನದಿಂದ ಪುಸ್ತಕಗಳು ಪರಿಣಾಮ ಬೀರಿದ ಬಗ್ಗೆ ಹಾಗೂ ಬೇರೆ ದೇಶಗಳ ಪುಸ್ತಕಗಳಿಗೆ ಮಹತ್ವ ನೀಡುವ ಬಗ್ಗೆ ಮನೋಜ್ಞವಾಗಿ ತಿಳಿಸಿದರು.

ಶಿವಾನುಭವ ಕಾರ್ಯಕ್ರಮದ ಸಮ್ಮುಖ ವಹಿಸಿಕೊಂಡ ಪರಮ ಪೂಜ್ಯ ಶ್ರೀ ಚಂದ್ರಶೇಖರ ದೇವರು ಮಾತನಾಡಿ ಪುಸ್ತಕಗಳು ಜ್ಞಾನದ ಕೊಡಗಳು. ಕೊಡದಲ್ಲಿ ನೀರು ತುಂಬಿಕೊಂಡಂತೆ, ಪುಸ್ತಕಗಳ ಜ್ಞಾನವನ್ನು ಮನದಲ್ಲಿ ತುಂಬಿಕೊಂಡಾಗ ಬದುಕು, ಪಾತ್ರವಾಗುತ್ತದೆ ಎಂದು ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದಗ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ. ಎ. ಬಳಿಗೇರವರು ವಿಶ್ವ ಪುಸ್ತಕ ದಿನದ ಮಹತ್ವವನ್ನು ಔಚಿತ್ಯಪೂರ್ಣವಾಗಿ ಮಾತನಾಡುತ್ತಾ ಪುಸ್ತಕಗಳಿಗೆ ಎಂದೂ ಸಾವಿಲ್ಲ ಎಂದರು.

ಶ್ರೀಮತಿ ಪಾರ್ವತಿ ಬಳಿಗೇರ ಶಿಕ್ಷಕಿಯರು ಶಿರಹಟ್ಟಿ, ಹಾಗೂ ವಿರೇಶ ಬಾದಾಮಿ, ಬೆಂಗಳೂರು ಇವರು ಉಪಸ್ಥಿತರಿದ್ದರು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿದರು. ಧರ್ಮಗ್ರಂಥ ಪಠಣವನ್ನು ಕುಮಾರ ಶಿವನಾಗರಾಜ್ .ಎ. ಆಸಂಗಿ, ವಚನಚಿಂತನವನ್ನು ಶಿವಾನಿ .ಎ. ಆಸಂಗಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಮಲ್ಲಪ್ಪ ದ್ಯಾಮಪ್ಪ ಕಾಬಳ್ಳಿ, ಪ್ರಭು ಮೆಡಿಕಲ್ಸ್ ಗದಗ ಇವರು ವಹಿಸಿಕೊಂಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷರಾದ ಡಾ ಉಮೇಶ್ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ ಕೋಶಾಧ್ಯಕ್ಷರಾದ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳರವರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ. ಬಿ. ಬೆನಕೊಪ್ಪ ಸ್ವಾಗತಿಸಿದರು. ಶ್ರೀಮತಿ ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande