ಲಕ್ಕುಂಡಿ ಗ್ರಾಮ ಶಿಲ್ಪ ಕಲಾಕೃತಿಗಳ ಬೀಡು
ಗದಗ, 16 ಮೇ (ಹಿ.ಸ.) : ಆ್ಯಂಕರ್ : ಒಂದೇ ಊರಿನಲ್ಲಿ 101 ಗುಡಿಗಳು, 101 ಬಾವಿಗಳು ನೋಡುವುದಕ್ಕೆ ಸಿಕ್ಕರೆ ಹೇಗಿರಬೇಡ. ಶಿಲ್ಪ ಕಲಾಕೃತಿಗಳ ಆಗರವೇ ಆಗಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಒಂದು ಸುತ್ತು ಹಾಕಿದರೆ ಹಲವು ದೇವಾಲಯಗಳನ್ನು ಈಗಲೂ ನೋಡಬಹುದು. ಶಿವಶರಣರಾದ ವಚನಕಾರ ಅಜಗಣ್ಣ ಹಾಗೂ ಈತನ
ಪೋಟೋ


ಗದಗ, 16 ಮೇ (ಹಿ.ಸ.) :

ಆ್ಯಂಕರ್ : ಒಂದೇ ಊರಿನಲ್ಲಿ 101 ಗುಡಿಗಳು, 101 ಬಾವಿಗಳು ನೋಡುವುದಕ್ಕೆ ಸಿಕ್ಕರೆ ಹೇಗಿರಬೇಡ. ಶಿಲ್ಪ ಕಲಾಕೃತಿಗಳ ಆಗರವೇ ಆಗಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಒಂದು ಸುತ್ತು

ಹಾಕಿದರೆ ಹಲವು ದೇವಾಲಯಗಳನ್ನು ಈಗಲೂ ನೋಡಬಹುದು. ಶಿವಶರಣರಾದ ವಚನಕಾರ ಅಜಗಣ್ಣ ಹಾಗೂ ಈತನ ತಂಗಿ ಮುಕ್ತಾಯಕ್ಕನ ತವರೂರು ಗದಗ ಜಿಲ್ಲೆಯ ಲಕ್ಕುಂಡಿ. ಈ ಗ್ರಾಮವು ಪರಮ ಜಿನಭಕ್ತೆ ದಾನಚಿಂತಾಮಣಿ ಅತ್ತಿಮಬ್ಬೆಯ ತಪೋಭೂಮಿ. ಪೂಜ್ಯ ಅಲ್ಲಮಪ್ರಭು ನಡೆದಾಡಿದ ಗ್ರಾಮವಿದು. ನಾಗಲಿಂಗಯ್ಯನ ಹರಕೆಯ ಗ್ರಾಮ ಎಂದು ಕರೆಯಲಾಗುತ್ತದೆ.

ಈ ಗ್ರಾಮಕ್ಕೆ ಪಾರಂಪರಿಕ ಮಹತ್ವವೂ ಇದೆ.

ಲಕ್ಕುಂಡಿಯ ಪ್ರಾಚ್ಯ ವಸ್ತು ಸಂಗ್ರಹಾಲಯ, ಕಾಶಿ ವಿಶ್ವನಾಥ, ನನ್ನೇಶ್ವರ, ಸೋಮೇಶ್ವರ, ಬ್ರಹ್ಮ ಜಿನಾಲಯ, ಮಾಣಿಕೇಶ್ವರ, ಹಾಲುಗುಂಡಿ ಬಸವಣ್ಣ ದೇಗುಲಗಳನ್ನು ಒಳಗೊಂಡಂತೆ ಅಲ್ಲಿನ

ಪಾರಂಪರಿಕ ವೈಭವವನ್ನು ನೋಡಲು ಒಂದು ದಿನವಾದರೂ ಬೇಕು.

ಹನ್ನೆರಡನೇ ಶತಮಾನದ ಐತಿಹಾಸಿಕ ದೇವಸ್ಥಾನ. ಇದು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಈ ದೇವಾಲಯದ ಮುಂಭಾಗದಲ್ಲಿ ಒಂದು ಭವ್ಯವಾದ ಸುಂದರವಾದ ಮುಸ್ಕಿನ ಕಲ್ಯಾಣಿ (ಭಾವಿ) ಇದೆ. ಇದು ಹಿಂದೂ ರಾಜರ ಭವ್ಯತೆ, ವಾಸ್ತುಶಿಲ್ಪದ ಚತುರತೆ ಮತ್ತು

ಕಲಾತ್ಮಕ ಶ್ರೇಷ್ಠತೆಯನ್ನು ತೋರಿಸುತ್ತದೆ. ಬಾಹ್ಯ ಗೋಡೆಗಳಲ್ಲಿ ಆಸಕ್ತಿದಾಯಕ ಕೆತ್ತನೆಗಳು, ಮಂಗಳಕರವಾದ ಹಿಂದೂ ಪ್ರತಿಮಾಶಾಸ್ತ್ರ, ಪುನರಾವರ್ತಿತ ಅಂಶಗಳು ಮತ್ತು ಚಿಕಣಿ ಗೂಡುಗಳು ಕಂಡುಬರುತ್ತವೆ.

ಒಳಗಿನ ಗೋಡೆಗಳು ಗೂಡು ಅಲಂಕಾರಳಿಂದ ತುಂಬಿದೆ. ಆದರೆ ಅಲ್ಲಿ ಯಾವುದೇ ಶಿಲ್ಪಗಲಿಲ್ಲ. ದಕ್ಷಿಣ ಭಾರತದ ವೈಶಿಷ್ಟ್ಯವೆಂದರೆ ಜಾಲಿ ರಂದ್ರ

ಕಲ್ಲಿನ ಫಲಕಗಳು ಪ್ರಕಾಶಮಾನವಾಗಿ ಕಾಣಿಸುತ್ತವೆ. ದೇವಾಲಯದಲ್ಲಿನ ಸರಳ ವಿನ್ಯಾಸ ಮತ್ತು ಮುಂಭಾಗದಲ್ಲಿರುವ ಕಲ್ಯಾಣಿಯ ವಿಹಂಗಮ ನೋಟವು ನೋಡಲು ಸುಂದರವಾದ ದೃಶ್ಯವಾಗಿದೆ. ಬ್ರಹ್ಮ ಜಿನಾಲಯ ದೇವಸ್ಥಾನದ

ಬ್ರಹ್ಮನ ಪ್ರತಿಮೆಯನ್ನು ಹೊಂದಿದೆ. ಇದು ಲಕ್ಕುಂಡಿಯಲ್ಲಿರುವ ಅತ್ಯಂತ ಹಳೆಯ ಜೈನ ದೇವಾಲಯವಾಗಿದ್ದು ಭಗವಾನ್ ಮಹಾವೀರನಿಗೆ ಸಮರ್ಪಿತವಾಗಿದೆ.

ಲಕ್ಕುಂಡಿಯ ದೇವಾಲಯಗಳಲ್ಲೇ ದೊಡ್ಡದಾದ ಮತ್ತು ಸುಂದರ ದೇವಾಲಯ ಕಾಶಿ ವಿಶ್ವನಾಥ ದೇವಾಲಯ. ಇದನ್ನು ಕಟ್ಟಿದ ಶಿಲ್ಪಿಯ ಹೆಸರು ಬಮ್ಮೋಜ. ಸಾಮಾನ್ಯವಾಗಿ ಶಿವನ ದೇವಾಲಯದ

ಎದಿರು ನಂದಿಯ ಗುಡಿ ಇರುವುದು. ಆದರಿಲ್ಲಿ ಸೂರ್ಯದೇವನ ಗುಡಿಯಿದೆ. ಈಗ ಇಲ್ಲಿನ ಸೂರ್ಯನ ಮೂರ್ತಿಯನ್ನು ಮ್ಯೂಸಿಯಂನಲ್ಲಿ ಇಡಲಾಗಿದೆ. ಸಿಡಿಲಿಗೂ ಈ ವಿಶ್ವನಾಥನ ದೇವಾಲಯಕ್ಕೂ ಏನೋ ನಂಟು. ಸಿಡಿಲು ಬಡಿದು ದೇವಾಲಯದ ಗೋಪುರ ನಾಶವಾಗಿದೆ. ಆದರೂ

ದೇವಾಲಯ ಗಟ್ಟಿಯಾಗಿ ನಿಂತಿದೆ. ಈಗಲೂ ಸಿಡಿಲಿನ ಭೀತಿ ಇರುವುದರಿಂದ ದೇವಾಲಯಕ್ಕೆ ಅರ್ಥಿಂಗ್ ವ್ಯವಸ್ಥೆ ಮಾಡಲಾಗಿದೆ.

ಶಿವನ ದೇವಾಲಯಗಳೇ ಪ್ರಧಾನವಾಗಿರುವ ಲಕ್ಕುಂಡಿಯಲ್ಲಿ, ಹರಿಗೂ ಸ್ಥಾನವಿದೆ.ಲಕ್ಷ್ಮೀ ನಾರಾಯಣ ದೇವಾಲಯ ಇಲ್ಲಿ ಆಕರ್ಷಕವಾಗಿದೆ.

ಶಿಲ್ಪಕಲೆಯ ತೊಟ್ಟಿಲಾದ ಲಕ್ಕುಂಡಿಯಲ್ಲಿ ಶೈವ, ಜೈನ ಮತ್ತು ವೈಷ್ಣವ ದೇವಾಲಯಗಳಿವೆ. ಕಲಾತ್ಮಕತೆಯಿಂದ ಕಂಗೊಳಿಸುವ ಇಲ್ಲಿನ ದೇವಾಲಯಗಳು ಈ ಬಾರಿಯ ಗಣರಾಜ್ಯೋತ್ಸದ ಸ್ತಬ್ಧಚಿತ್ರದ ರೂಪ ಪಡೆದಿದ್ದುಇತಿಹಾಸ ದೇವಾಲಯವೇ ಮರುಜೀವ ತಳೆದಂತೆಯೇ ಇದ್ದು

ಕರ್ನಾಟಕದ ಸಾರ್ವಜನಿಕ ಸಂಪರ್ಕ

ಹಾಗೂ ಪ್ರಚಾರ ಇಲಾಖೆಯ ಶ್ರಮ ಮೆಚ್ಚುಗೆಯನ್ನೂ ಪಡೆದಿತ್ತು.

ಲಕ್ಕುಂಡಿಯ ಈ ಎಲ್ಲಾ ದೇಗುಲಗಳು, ಪಾರಂಪರಿಕ ತಾಣಗಳನ್ನು ಭಾರತೀಯ ಪುರಾತತ್ವ ಇಲಾಖೆ, ಕರ್ನಾಟಕದ ಪಾರಂಪರಿಕ ಹಾಗೂ ಪುರಾತತ್ವ

ಇಲಾಖೆಯಿಂದ ಸಂರಕ್ಷಿಸಲಾಗಿದೆ. ಈ ತಾಣವನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿ ಸೇರಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ಈಗ ತಾತ್ಕಾಲಿಕ ಪಟ್ಟಿಗೆ

ಸೇರಲಿದೆ. ಆನಂತರ ಕಾಯಂ ಪಟ್ಟಿಗೆ ಸೇರಲಿದೆ ಎನ್ನುವುದು ಅಧಿಕಾರಿಗಳ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande