ಬಳ್ಳಾರಿ : ತಾಯಿ, ಮಗು ಕಾಣೆ
ಬಳ್ಳಾರಿ, 02 ಏಪ್ರಿಲ್ (ಹಿ.ಸ.) : ಆ್ಯಂಕರ್ : ನಗರದ ತಾಳೂರು ರಸ್ತೆಯ ರೇಣುಕಾ ನಗರದ 9ನೇ ಕ್ರಾಸ್‍ನ ಲಲಿತಾ (25) ಮಗಳು ಭವಾನಿ (03) ಕಾಣೆಯಾಗಿರುವ ಕುರಿತು ಮಹಿಳಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಲಲಿತಾ: ಎತ್ತರ 5.2 ಅಡಿ, ದು
ಬಳ್ಳಾರಿ : ತಾಯಿ, ಮಗು ಕಾಣೆ


ಬಳ್ಳಾರಿ, 02 ಏಪ್ರಿಲ್ (ಹಿ.ಸ.) :

ಆ್ಯಂಕರ್ : ನಗರದ ತಾಳೂರು ರಸ್ತೆಯ ರೇಣುಕಾ ನಗರದ 9ನೇ ಕ್ರಾಸ್‍ನ ಲಲಿತಾ (25) ಮಗಳು ಭವಾನಿ (03) ಕಾಣೆಯಾಗಿರುವ ಕುರಿತು ಮಹಿಳಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಲಲಿತಾ: ಎತ್ತರ 5.2 ಅಡಿ, ದುಂಡು ಮುಖ, ಗೋಧಿ ಮೈಬಣ್ಣ, ಸಾಧರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಹಳದಿ ಬಣ್ಣದ ಸೀರೆ ಧರಿಸಿರುತ್ತಾಳೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾಳೆ.

ಭವಾನಿ: ಸುಮಾರು 2.5 ಅಡಿ ಎತ್ತರ, ಉದ್ದ ಮುಖ, ಗೋಧಿ ಮೈಬಣ್ಣ, ದಪ್ಪ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಗೌನ್ ಧರಿಸಿರುತ್ತಾಳೆ. ಕನ್ನಡ ಮಾತನಾಡುತ್ತಾಳೆ.

ಮೇಲ್ಕಂಡ ಚಹರೆ ಗುರುತುಗಳುಳ್ಳ ಮಹಿಳೆ ಮತ್ತು ಮಗುವಿನ ಬಗ್ಗೆ ಮಾಹಿತಿ ದೊರೆತಲ್ಲಿ ಮಹಿಳಾ ಪೆÇಲೀಸ್ ಠಾಣೆಯ ದೂ.08392-268108 ಅಥವಾ ಬಳ್ಳಾರಿ ಎಸ್‍ಪಿ ಅವರ ಕಚೇರಿ ದೂ.08392-258400, ಬಳ್ಳಾರಿ ಡಿಎಸ್‍ಪಿ ಅವರ ಕಚೇರಿ ದೂ.08392-272322, ಮೊ.9480803020, ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande