ವಿಠ್ಠಲಾಪುರದ ಯುವತಿ ಕಾಣೆ : ಪತ್ತೆಗೆ ಮನವಿ
ಸಂಡೂರು, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : ಸಂಡೂರು ತಾಲ್ಲೂಕಿನ ವಿಠಲಾಪುರ ಗ್ರಾಮದ 2 ನೇ ವಾರ್ಡ್ ನ ಅಂಬೇಡ್ಕರ್ ಕಾಲೋನಿಯ ಹುಲಿಗೆಮ್ಮ ದೇವಸ್ಥಾನದ ಹತ್ತಿರ ನಿವಾಸಿಯಾದ ರೇಣುಕ (20) ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ತೋರಣಗಲ್ಲು ಪೊಲೀಸರು ಕೋರಿದ್ದಾರೆ. ಚಹರೆ ಗುರುತು: ಅಂದಾಜು 5.1 ಅ
ವಿಠ್ಠಲಾಪುರದ ಯುವತಿ ಕಾಣೆ: ಪತ್ತೆಗೆ ಮನವಿ


ಸಂಡೂರು, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಸಂಡೂರು ತಾಲ್ಲೂಕಿನ ವಿಠಲಾಪುರ ಗ್ರಾಮದ 2 ನೇ ವಾರ್ಡ್ ನ ಅಂಬೇಡ್ಕರ್ ಕಾಲೋನಿಯ ಹುಲಿಗೆಮ್ಮ ದೇವಸ್ಥಾನದ ಹತ್ತಿರ ನಿವಾಸಿಯಾದ ರೇಣುಕ (20) ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ತೋರಣಗಲ್ಲು ಪೊಲೀಸರು ಕೋರಿದ್ದಾರೆ.

ಚಹರೆ ಗುರುತು: ಅಂದಾಜು 5.1 ಅಡಿ ಎತ್ತರ, ಕೋಲು ಮುಖ, ಗೋದಿ ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಹಳದಿ ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ.

ಯುವತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ತೋರಣಗಲ್ಲು ಪೊಲೀಸ ಠಾಣೆ ದೂ.08392-258100 ಮತ್ತು ಪಿಎಸ್‍ಐ ಮೊ.9480803062 ಗೆ ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande