ಕಠ್ಮಂಡು, 29 ಮಾರ್ಚ್ (ಹಿ.ಸ.) :
ಆ್ಯಂಕರ್ : ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಲಾ ಅವರನ್ನು ಮುಂದಿನ ಎರಡು ವರ್ಷಗಳ ಕಾಲ ನೇಪಾಳ ಪುರುಷರ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರನ್ನಾಗಿ ಆಗಿ ನೇಮಕ ಮಾಡಲಾಗಿದೆ ಎಂದು ನೇಪಾಳ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ.
1994-99ರ ನಡುವೆ ಆಸ್ಟ್ರೇಲಿಯಾ ಪರ ಕ್ರಿಕೆಟ್ ಆಡಿದ 56 ವರ್ಷದ ಲಾ, ನಂತರ ಶ್ರೀಲಂಕಾ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ ಹಾಗೂ ಅಮೆರಿಕ ತಂಡಗಳಿಗೆ ಮಾರ್ಗದರ್ಶನ ನೀಡಿದ್ದರು. ಅವರ ಮುನ್ನಡೆಯಲ್ಲಿ ಯುಎಸ್ಎ ತಂಡವು 2024ರ ಟಿ೨೦ ವಿಶ್ವಕಪ್‌ನಲ್ಲಿ ಐತಿಹಾಸಿಕ ಪ್ರದರ್ಶನ ನೀಡಿತ್ತು.
ನೇಪಾಳ ತಂಡದ ಹಿಂದಿನ ಕೋಚ್ ಮಾಂಟಿ ದೇಸಾಯಿಯವರ ಅಧಿಕಾರ ಅವಧಿ ಫೆಬ್ರವರಿಯಲ್ಲಿ ಮುಕ್ತಾಯಗೊಂಡಿದ್ದು, ಇದೀಗ ಲಾ ಅವರ ಅನುಭವದಿಂದ ತಂಡಕ್ಕೆ ಹೊಸ ಉತ್ಸಾಹ ಮತ್ತು ದಿಕ್ಕು ದೊರೆಯುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa