ರಾಜಸ್ಥಾನ ರಾಯಲ್ಸ್‌ಗೆ ಮೊದಲ ಗೆಲುವು
ಗುವಾಹಟಿ, 31 ಮಾರ್ಚ್ (ಹಿ.ಸ.) : ಆ್ಯಂಕರ್ : ಐಪಿಎಲ್ 2025ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ತನ್ನ ಮೊದಲ ಜಯ ದಾಖಲಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ರನ್ ಜಯ ಸಾಧಿಸಿತು. ಟಾಸ್ ಗೆದ್ದು ಚೆನ್ನೈ ಮೊದಲು ಬೌಲಿಂಗ್ ಆಯ್ದುಕೊಂಡಿತು. ರಾಜಸ್ಥಾನ ಪರ ನಿತೀಶ್ ರಾಣಾ (8
Ipl


ಗುವಾಹಟಿ, 31 ಮಾರ್ಚ್ (ಹಿ.ಸ.) :

ಆ್ಯಂಕರ್ : ಐಪಿಎಲ್ 2025ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ತನ್ನ ಮೊದಲ ಜಯ ದಾಖಲಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ರನ್ ಜಯ ಸಾಧಿಸಿತು.

ಟಾಸ್ ಗೆದ್ದು ಚೆನ್ನೈ ಮೊದಲು ಬೌಲಿಂಗ್ ಆಯ್ದುಕೊಂಡಿತು. ರಾಜಸ್ಥಾನ ಪರ ನಿತೀಶ್ ರಾಣಾ (81) ಮತ್ತು ರಿಯಾನ್ ಪರಾಗ್ (37) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ 182/6 ಸ್ಕೋರ್ ಒದಗಿಸಿದರು. ಚೆನ್ನೈ ಪರ ನೂರ್ ಅಹ್ಮದ್, ಪತಿರಾನ ಮತ್ತು ಖಲೀಲ್ ತಲಾ 2 ವಿಕೆಟ್ ಪಡೆದರು.

183 ರನ್ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ, ಗಾಯಕ್ವಾಡ್ (63) ಮತ್ತು ಜಡೇಜಾ (32*) ಗಳಿಸಿದರು. 176/6 ರನ್‌ಗಳಿಗೆ ಸೀಮಿತವಾಯಿತು. ಕೊನೆಯ ಓವರ್‌ನಲ್ಲಿ 20 ರನ್ ಅಗತ್ಯವಿದ್ದರೂ, ಧೋನಿ ಔಟಾದ ಬಳಿಕ ಪಂದ್ಯ ರಾಜಸ್ಥಾನದ ಪರ ವಾಲಿತು. ವನಿಂದು ಹಸರಂಗ 4 ವಿಕೆಟ್ ಕಬಳಿಸಿ ಮಿಂಚಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande