ಪ್ರಥಮ ದರ್ಜೆ ಕ್ರಿಕೆಟ್‌ಗೆ ಮೊಯಿಸಸ್ ಹೆನ್ರಿಕ್ಸ್ ವಿದಾಯ
ಸಿಡ್ನಿ, 28 ಮಾರ್ಚ್ (ಹಿ.ಸ.) : ಆ್ಯಂಕರ್ : ನ್ಯೂ ಸೌತ್ ವೇಲ್ಸ್ ನಾಯಕ ಮೊಯಿಸಸ್ ಹೆನ್ರಿಕ್ಸ್ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷದ ಹೆನ್ರಿಕ್ಸ್, 2024–25 ಶೆಫೀಲ್ಡ್ ಶೀಲ್ಡ್ ಸೀಸನ್‌ನ ಮಧ್ಯದಲ್ಲಿ ಈ ನಿರ್ಧಾರ ತೆಗೆದುಕೊಂಡರು. ಆಸ್ಟ್ರೇಲಿಯಾದ ಪರ 4 ಟೆಸ್ಟ್ ಪಂದ್ಯಗಳಲ್ಲ
Retired


ಸಿಡ್ನಿ, 28 ಮಾರ್ಚ್ (ಹಿ.ಸ.) :

ಆ್ಯಂಕರ್ : ನ್ಯೂ ಸೌತ್ ವೇಲ್ಸ್ ನಾಯಕ ಮೊಯಿಸಸ್ ಹೆನ್ರಿಕ್ಸ್ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷದ ಹೆನ್ರಿಕ್ಸ್, 2024–25 ಶೆಫೀಲ್ಡ್ ಶೀಲ್ಡ್ ಸೀಸನ್‌ನ ಮಧ್ಯದಲ್ಲಿ ಈ ನಿರ್ಧಾರ ತೆಗೆದುಕೊಂಡರು.

ಆಸ್ಟ್ರೇಲಿಯಾದ ಪರ 4 ಟೆಸ್ಟ್ ಪಂದ್ಯಗಳಲ್ಲಿದ ಅವರು, ನ್ಯೂ ಸೌತ್ ವೇಲ್ಸ್ ಪರ ಏಕದಿನ ಕಪ್‌ನಲ್ಲಿ ಮುಂದುವರಿಯಲಿದ್ದಾರೆ. ಹಾಗೆಯೇ, ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡದ ನಾಯಕತ್ವ ನಿರ್ವಹಿಸಲಿದ್ದಾರೆ.

ತಮ್ಮ ವೃತ್ತಿಜೀವನದಲ್ಲಿ 6830 ರನ್ ಮತ್ತು 127 ವಿಕೆಟ್ ಪಡೆದ ಹೆನ್ರಿಕ್ಸ್, ರಾಜ್ಯ ತಂಡವನ್ನು ಮುನ್ನಡೆಸುವುದು ಗೌರವದ ವಿಷಯ. ಆದರೆ ಯುವ ಆಟಗಾರರಿಗೆ ಅವಕಾಶ ನೀಡಲು ಇದು ಸರಿಯಾದ ಸಮಯ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande