ಕೋಲಾರ, ೨೯ ಮಾರ್ಚ್ (ಹಿ.ಸ) ಆಂಕರ್ ಹಿಂದೂಗಳ ಹೊಸ ವರ್ಷ, ಸಂವತ್ಸರ ಆರಂಭದ ಮೊದಲ ಹಬ್ಬ ಯುಗಾದಿಗೆ ಜನತೆಯಲ್ಲಿ ಎಲ್ಲೆಲ್ಲಿದ ಉತ್ಸಾಹ ಬೆಲೆ ಏರಿಕೆ ಮತ್ತು ಸುಡು ಬಿಸಿಲಲ್ಲೂ ಬಟ್ಟೆ, ಹೂ ಹಣ್ಣು ಖರೀದಿಗೆ ಮುಗಿಬಿದ್ದ ಜನತೆ, ಹಬ್ಬದ ಮುನ್ನಾದಿನ ಶನಿವಾರ ಮಾರುಕಟ್ಟೆಯಲ್ಲಿ ಜನರು ಮುಗಿಬಿದ್ದಿದ್ದರು.
ಹಿಂದೆAದೂ ಕಾಣದ ಬಿಸಿಲಿನ ತಾಪದ ನಡುವೆಯೂ ಜನತೆ ಹಬ್ಬದ ಖರೀದಿಗೆ ಮುಗಿಬಿದ್ದಿದ್ದು, ನಗರದ ಯಾವುದೇ ರಸ್ತೆಗೆ ಹೋದರೂ ಟ್ರಾಫಿಕ್ ಜಾಮ್ ಸಮಸ್ಯೆ ಕಾಡುತ್ತಿತ್ತು. ಜತೆಯಲ್ಲೇ ರಂಜಾನ್ ಬಂದಿರುವುದರಿ0ದ ಬಟ್ಟೆ ಅಂಗಡಿಗಳಲ್ಲಿ ಜನಜಂಗುಳಿ ಕಂಡು ಬಂತು.
ಮಾವಿನ ಎಲೆ, ಹಣ್ಣು, ಹೂವು, ಎಲೆ ಅಡಿಕೆ, ತರಕಾರಿಗಳ ಅಂಗಡಿಗಳು ತುಂಬಿ ತುಳುಕುತ್ತಿದ್ದರೆ ದಿನಸಿ ಅಂಗಡಿಗಳಲ್ಲಿ ಬೆಲ್ಲ, ಬೇಳೆ ವ್ಯಾಪಾರವೂ ಜೋರಾಗಿಯೇ ನಡೆದಿದೆ. ಯುಗಾದಿಗೆ ಹೊಸ ಬಟ್ಟೆ ಹಾಕಲೇಬೇಕು ಎಂಬ ಸಂಪ್ರದಾಯದ ಹಿನ್ನಲೆಯಲ್ಲಿ ನಗರದ ದೊಡ್ಡಪೇಟೆ, ಎಂಜಿ ರಸ್ತೆ, ಕಾಳಮ್ಮ ಗುಡಿ ರಸ್ತೆಯ ಬಟ್ಟೆ ಅಂಗಡಿಗಳಲ್ಲಿ ಬಟ್ಟೆ ಖರೀದಿಗೆ ಜನ ಮುಗಿಬಿದ್ದಿದ್ದು ಕಂಡು ಬಂತು.
ಬೆಲೆ ಏರಿಕೆ ಸಂಕಷ್ಟ ಬಡ ಜನತೆಗೆ ಕಷ್ಟ ತರಿಸಿದ್ದರೂ, ಇರುವ ಮಟ್ಟಿಗಾದರೂ ಹಬ್ಬ ಆಚರಿಸುವ ಅವರ ಉತ್ಸಾಹ ಮಾತ್ರ ಕುಂದಿರುವAತೆ ಕಂಡು ಬರಲಿಲ್ಲ.
ರಸ್ತೆ ಬದಿಯ ಅಂಗಡಿಗಳಲ್ಲಿ ಹೂ ಮತ್ತು ಹಣ್ಣು ಮತ್ತಿತರ ಪೂಜಾ ಸಾಮಗ್ರಿಗಳ ಖರೀದಿ ಎಡೆಬಿಡದೇ ಸಾಗಿತ್ತು.ಗ್ರಾಮೀಣ ಭಾಗದಲ್ಲಿ ಕೇಳುವವರಿಲ್ಲದ ಹಸಿರು ಮಾವಿನ ಎಲೆ ನಗರದಲ್ಲಿ ಒಂದು ಸಣ್ಣಕಟ್ಟು ೧೦ ಮತ್ತು ೨೦ ರೂಗಳಿಗೆ ಮಾರಾಟವಾಗುತ್ತಿತ್ತು.
ಹಬ್ಬದ ಸಂಭ್ರದ ನಡುವೆ ಜನತೆಗೆ ಹೂ ಹಣ್ಣಿನ ಬೆಲೆ ಗಗನಮುಖಿಯಾಗಿದ್ದರೂ, ತರಕಾರಿ ಬೆಲೆ ಸ್ವಲ್ಪ ಕಡಿಮೆಯಾಗಿತ್ತು. ತಾಪಮಾನ ತಲೆ ಸುಡುತ್ತಿದ್ದರೆ ಬೆಲೆ ಏರಿಕೆ ಜೇಬು ಸುಡುವಂತಿತ್ತು.
ಕೆಜಿ ಸೇಬು ೨೫೦ ರಿಂದ ೩೦೦ ರೂ, ದಾಳಿಂಬೆ ೨೦೦ರಿಂದ ೨೫೦ ರೂ, ಬಾಳೆ ಹಣ್ಣು ಕೆಜಿ ಒಂದಕ್ಕೆ ೮೦ ರೂಗೆ ಮಾರಾಟವಾಗುತ್ತಿದ್ದರೂ ಹಬ್ಬಕ್ಕೆ ಹಣ್ಣುಗಳು ಅಗತ್ಯವಾದ ಕಾರಣ ಜನತೆ ಖರೀದಿಗೆ ಮುಗಿಬಿದ್ದಿದ್ದರು.
ಹೂವಿನ ಬೆಲೆಯೂ ಗಗನ ಮುಖಿಯಾಗಿದೆ, ಹಬ್ಬ ಹಾಗೂ ತಾಪಮಾನ ೩೬ ಡಿಗ್ರಿ ಮುಟ್ಟಿರುವುದರಿಂದ ತೋಟಗಳಿಂದ ಕಿತ್ತು ತರುವ ಹೂ ಬೇಗ ಬಾಡುತ್ತಿದ್ದುದರಿಂದ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿತ್ತು.
ಸಣ್ಣ ರೋಸ್, ಸೇವಂತಿ ಹೂ ಕೆಜಿಗೆ ೨೦೦ ರಿಂದ ೨೫೦ ರೂಗೆ ಮಾರಾಟವಾಗುತ್ತಿತ್ತು. ಕಾಕಡಾ ಕೆಜಿಗೆ ೧೦೦೦ರೂ, ಕನಕಾಂಬರ ೧೨೦೦ ರೂ, ಮಲ್ಲಿಗೆ ೧೦೦೦ ರೂ, ಸೇವಂತಿಗೆ೩೦೦, ಚೆಂಡುಹೂ ೧೫೦ ರೂ ಕೆಜಿ ಬೆಲೆ ಏರಿಸಿಕೊಂಡು ಮಾರಾಟವಾಗುತ್ತಿದ್ದು, ನಗರದ ಹಳೆ ಬಸ್ ನಿಲ್ದಾಣದಲ್ಲಿನ ಹೂವಿನ ಮಾರುಕಟ್ಟೆ ತುಂಬಿ ತುಳುಕುತ್ತಿತ್ತು.
ಹೂ ಮಾರಾಟಗಾರರು ಬಿಸಿಲಿನ ಬೇಗೆ ತಾಳಲಾರದೇ ತಮ್ಮ ಅಂಗಡಿಗಳ ಮುಂದೆ ಬೃಹತ್ ಪೆಂಡಾಲ್ ಹಾಕಿಸಿ ಸಾರ್ವಜನಿಕರು ನೆರಳಲ್ಲಿ ಹೂ ಖರೀದಿಸಲು ವ್ಯವಸ್ಥೆ ಮಾಡಿದ್ದು ಈ ಬಾರಿಯ ವಿಶೇಷವಾಗಿತ್ತು.
ಹೊಸ ವರ್ಷಕ್ಕೆ ಹೊಸ ಬಟ್ಟೆ ಹಾಕಲೇಬೇಕು ಎಂಬುದು ಹಿಂದೂಗಳ ಯುಗಾದಿಯ ಸಂಪ್ರದಾಯವಾದ ಕಾರಣ ನಗರದ ಬಟ್ಟೆ ಅಂಗಡಿಗಳಿರುವ ಎಂ.ಜಿ.ರಸ್ತೆ ಹಾಗೂ ದೊಡ್ಡಪೇಟೆಗಳಲ್ಲಿ ಬಟ್ಟೆ ಅಂಗಡಿಗಳಲ್ಲಿ ಜನಜಂಗುಳಿ ನೆರೆದಿದ್ದು ಕಂಡು ಬಂತು.
ಈ ನಡುವೆ ಜತೆಯಲ್ಲೇ ರಂಜಾನ್ ಬಂದಿರುವುದರಿAದ ಮುಸ್ಲೀಂ ಬಾಂಧವರೂ ಸಹಾ ಬಟ್ಟೆ ಖರೀದಿಗೆ ಮುಗಿಬಿದ್ದ ಕಾರಣ ಎಂ.ಜಿ.ರಸ್ತೆಯಲ್ಲಿ ಎಲ್ಲಿ ನೋಡಿದರೂ ಜನರ ಗುಂಪು ಕಂಡು ಬಂತು. ಪೊಲೀಸರು ಟ್ರಾಫಿಕ್ ಸಮಸ್ಯೆ ಪರಿಹರಿಸಲು ಪರದಾಡುತ್ತಿದ್ದುದು ಕಂಡು ಬಂತು.
ಒಟ್ಟಾರೆ ಬೆಲೆ ಏರಿಕೆಯ ಬಿಸಿಯ ನಡುವೆಯೂ ಹಬ್ಬ ಆಚರಣೆಯ ಆಶಯಕ್ಕೆ ಮಾತ್ರ ಧಕ್ಕೆ ಬಂದಿಲ್ಲವೆAಬುದನ್ನು ನಗರದ ಪೇಟೆ ಬೀದಿಯಲ್ಲಿನ ಜನ ಸಂದಣಿಯ ವಹಿವಾಟು ಸಾಕ್ಷಿಕರಿಸಿತ್ತು.
ಚಿತ್ರ : ಯುಗಾದಿ ಹಿನ್ನಲೆಯಲ್ಲಿ ಕೋಲಾರದ ಹಳೆ ಬಸ್ ನಿಲ್ದಾಣದ ಹೂವಿನ ಮಾರುಕಟ್ಟೆಯಲ್ಲಿ ಯುಗಾದಿ ಹಬ್ಬಕ್ಕಾಗಿ ಹೂ, ಹಣ್ಣು ಖರೀದಿ ಮಾಡಲು ಜನ ಮುಗಿಬಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್