ನವೋದಯ ಶಾಲೆ ಪ್ರವೇಶಪರೀಕ್ಷೆ : ಮನೀಷ್‌ಗೌಡ ಮುಳಬಾಗಿಲು ತಾಲ್ಲೂಕಿಗೆ ಪ್ರಥಮ
ನವೋದಯ ಶಾಲೆ ಪ್ರವೇಶಪರೀಕ್ಷೆ : ಮನೀಷ್‌ಗೌಡ ಮುಳಬಾಗಿಲು ತಾಲ್ಲೂಕಿಗೆ ಪ್ರಥಮ
ಮನೀಷ್ ಗೌಡ


ಕೋಲಾರ, ೩೧ ಮಾರ್ಚ್ (ಹಿ.ಸ) :

ಆ್ಯಂಕರ್ : ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ -೨೦೨೫ ರ ಫಲಿತಾಂಶ ಪ್ರಕಟವಾಗಿದ್ದು, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಜ್ಞಾನಜ್ಯೋತಿ ಶಾಲೆಯ ವಿದ್ಯಾರ್ಥಿ ಮನೀಷ್ ಗೌಡ ತಾಲ್ಲೂಕಿಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.

ಜ್ಞಾನಜ್ಯೋತಿ ಶಾಲೆಯಲ್ಲಿ ೫ನೇ ತರಗತಿಯಲ್ಲಿ ಓದುತ್ತಿರುವ, ಅಂಗೊ0ಡಹಳ್ಳಿ ಗ್ರಾಮದ ಶಿಕ್ಷಕರಾದ ಮಂಜುನಾಥ್ ಎನ್ ಹಾಗೂ ಸುನೀತ ದಂಪತಿಗಳ ಮಗನಾದ ಮನೀಷ್ ಗೌಡ .ಎಂ ಎಂಬ ವಿದ್ಯಾರ್ಥಿ ಮುಳಬಾಗಿಲು ತಾಲ್ಲೂಕಿಗೆ ಪ್ರಥಮಹಾಗೂ ಕೋಲಾರ ಜಿಲ್ಲೆಗೆ ೪ನೇ ಸ್ಥಾನವನ್ನು ಪಡೆದಿದ್ದಾರೆ.

ಈ ವಿದ್ಯಾರ್ಥಿಯ ಉತ್ತಮ ಸಾಧನೆಗೆ ಜ್ಞಾನಜ್ಯೋತಿ ಶಾಲೆಯ ಆಡಳಿತ ಮಂಡಳಿ,ಶಿಕ್ಷಕರ ವೃಂದ ಮತ್ತು ಪೋಷಕರು , ಪ್ರೇರಣಾ ಕೋಚಿಂಗ್ ಸೆಂಟರ್‌ನ ಶಿಕ್ಷಕರ ವೃಂದ ಹಾಗೂ ಮುಳಬಾಗಿಲು ತಾಲ್ಲೂಕಿನ ಸಮಸ್ತ ಜನತೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande