ಕೋಲಾರ ತಾಲ್ಲೂಕು ಸೀತಿ ಬ್ರಹ್ಮರಥೋತ್ಸವ ಪ್ರಯುಕ್ತ ಏಪ್ರಿಲ್ ೨ ರಂದು ಸಂಗೀತೋತ್ಸವ
ಕೋಲಾರ ತಾಲ್ಲೂಕು ಸೀತಿ ಬ್ರಹ್ಮರಥೋತ್ಸವ ಪ್ರಯುಕ್ತ ಏಪ್ರಿಲ್ ೨ ರಂದು ಸಂಗೀತೋತ್ಸವ
ಸೀತಿಹೊಸೂರು ಮುರಳಿಗೌಡ


ಕೋಲಾರ, ೩೧ ಮಾರ್ಚ್ (ಹಿ.ಸ) :

ಆ್ಯಂಕರ್ : ತಾಲ್ಲೂಕಿನ ವೇಮಗಲ್ ಹೋಬಳಿಯ ಸೀತಿ ಗ್ರಾಮದ ಶ್ರೀ ಪತೇಶ್ವರ ಹಾಗೂ ಶ್ರೀ ಬೈರವೇಶ್ವರಸ್ವಾಮಿ ಜಾತ್ರೆಯ ಬ್ರಹ್ಮರಥೋತ್ಸವದ ಪ್ರಯುಕ್ತ ಏಪ್ರಿಲ್ ೨ ರಂದು ಬುಧವಾರ ಸಂಜೆ ೬:೩೦ ಕ್ಕೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸೀತಿಹೊಸೂರು ಮುರಳಿಗೌಡ ನೇತೃತ್ವದಲ್ಲಿ ಸಂಗೀತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ,

ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರೀಕ ಸಚಿವ ಕೆ.ಹೆಚ್ ಮುನಿಯಪ್ಪ, ಶಿಡ್ಲಘಟ್ಟ ರಾಜೀವ್ ಗೌಡ ಭಾಗವಹಿಸಲಿದ್ದಾರೆ, ರಸಮಂಜರಿಗೆ ಖ್ಯಾತಿ ನಟಿ ಮಾಲಾಶ್ರಿ, ನಟಿ ಆರಾದನಾ, ಬಿಗ್ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ, ಪೋಲೀಸ್ ಸುಬ್ರಮಣಿ, ಗಾಯಕಿ ವೈ.ಜಿ ಉಮಾ, ಕಾಮಿಡಿ ಕಲಾಡಿಗಳಾದ ಗಿಲ್ಲಿನಟ, ಕೆ.ಆರ್ ಪೇಟೆ ಶಿವರಾಜ್ ಸೇರಿದಂತೆ ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಸೀತಿ ಹೊಸೂರು ಮುರಳಿಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿತ್ರ : ಸೀತಿಹೊಸೂರು ಮುರಳಿಗೌಡ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande