ಕೋಲಾರದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ
ಕೋಲಾರದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ
ಡಿ.ಎಂ.ಆರ್ ಫೌಂಡೇಶನ್ ವತಿಯಿಂದ ನಡೆದ ಯುಗಾಧಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಡಿಸಿಪಿ ದೇವರಾಜ್ ಉದ್ಘಾಟಿಸಿದರು.


ಕೋಲಾರ, 31 ಮಾರ್ಚ್ (ಹಿ.ಸ) :

ಆ್ಯಂಕರ್ : ದ್ಯಾವೀರಪ್ಪ ಮತ್ತು ರತ್ನಮ್ಮ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಡಿಸಿಪಿ ದೇವರಾಜ್ ಅವರ ಡಿ.ಎಂ.ಆರ್ ಫೌಂಡೇಶನ್‌ನಿಂದ ಕೋಲಾರದಲ್ಲಿ ನಡೆದ ಅದ್ದೂರಿ ಯುಗಾದಿ ಸಂಭ್ರಮದಲ್ಲಿ ನಟ ಧ್ರುವಸರ್ಜಾ, ಖ್ಯಾತ ಗಾಯಕ ವಿಜಯ್‌ಪ್ರಕಾಶ್ ಅವರ ಅಭೂತಪೂರ್ವ ಗಾಯನಕ್ಕೆ ೨೦ ಸಾವಿರಕ್ಕೂ ಹೆಚ್ಚು ಮಂದಿ ಪ್ರೇಕ್ಷಕರು ಸಾಕ್ಷಿಯಾದರು.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಯುಗಾದಿಯಂದು ಸಂಜೆ ನಡೆದ ಯುಗಾದಿ ಸಂಭ್ರಮದ ಈ ಕಾರ್ಯಕ್ರಮದಲ್ಲಿ ಖ್ಯಾತಗಾಯಕ ವಿಜಯ್ ಪ್ರಕಾಶ್, ಖ್ಯಾತ ನಿರೂಪಕಿ ಅನುಶ್ರೀ, ಗಾಯಕಿ ಲಕ್ಷ್ಮೀ ನಾಗರಾಜ್, ಅಕ್ಬರ್ ಮತ್ತಿತರರಿದ್ದ ತಂಡ ನೀಡಿದ ಸಾಂಸ್ಕೃತಿಕ ಸಂಭ್ರಮವನ್ನು ರಾತ್ರಿ ೧೨ ಗಂಟೆಯವರೆಗೂ ಜನತೆ ವೀಕ್ಷಿಸಿದ್ದು, ೨೦ ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಗೆ ಬೇವು,ಬೆಲ್ಲದ ಜತೆ ಸಂಗೀತದ ರಸದೌತಣ ಉಣಬಡಿಸಲಾಯಿತು.

ಕಾರ್ಯಕ್ರಮವನ್ನು ಆಯೋಜಿಸಿದ್ದ ಡಿಎಂಆರ್ ಫೌಂಡೇಷನ್‌ನ ನೇತೃತ್ವ ವಹಿಸಿರುವ ಹಿರಿಯ ಐಎಎಸ್ ಅಧಿಕಾರಿ ಡಿಸಿಪಿ ದೇವರಾಜ್ ಈ ಸಂದರ್ಭದಲ್ಲಿ ಮಾತನಾಡಿ, ನಗರದಲ್ಲಿ ಯುಗಾದಿ ಉತ್ಸವವನ್ನು ಮುಂದಿನ ವರ್ಷಗಳಲ್ಲಿ ಮತ್ತಷ್ಟು ಅದ್ದೂರಿಯಾಗಿ ಆಚರಿಸುವ ಮೂಲಕ ಕೋಲಾರವನ್ನು ಸಾಂಸ್ಕೃತಿಕ ಕೇಂದ್ರವಾಗಿ ಹೊರಹೊಮ್ಮಿಸುವ ಪ್ರಯತ್ನ ನನ್ನದಾಗಿದೆ ಎಂದು ಘೋಷಿಸಿದರು.

ಕಳೆದ ೨೦೨೧ ರಲ್ಲಿ ಕೋಲಾರದ ಎಸ್ಪಿಯಾಗಿದ್ದ ತಾವು ಅಂದಿನ ಡಿಸಿಯಾಗಿದ್ದ ವೆಂಕಟರಾಜ್ ಹಾಗೂ ಜಿಪಂ ಸಿಇಒ ಯುಕೇಶ್‌ಕುಮಾರ್ ಅವರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಿದ್ದಾಗ ಕೋಲಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೇ ನೀರಸವಾಗಿದೆ, ಇಲ್ಲಿ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಸೋಣ ಎಂದು ಪ್ರಸ್ತಾಪಿಸಿದಾಗ ಜಿಲ್ಲಾಡಳಿತ ಒಪ್ಪಿ ಅಂದು ಯುಗಾದಿ ಸಂಭ್ರಮದ ಈ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು ಎಂದರು.

ಅAದು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ಅದರ ಹಿಂದೆ ಜಿಲ್ಲಾಡಳಿತದ ನೆರವು ಸಹಕಾರ ಇತ್ತು ಎಂದ ಅವರು, ಯಾವುದೇ ಇಂತಹ ಪ್ರಯತ್ನಗಳು ಸಫಲಗೊಳ್ಳಲು ಜಿಲ್ಲಾಡಳಿತದ ಸಹಕಾರ ಅಗತ್ಯ ಎಂದು ತಿಳಿಸಿ, ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಧನ್ಯವಾದ ಸಲ್ಲಿಸಿದರು.

ಆದರೆ ಈ ಕಾರ್ಯಕ್ರಮ ನಿರಂತರವಾಗಿ ನಡೆಯುವುದೇ ಎಂಬ ಹಲವರ ಪ್ರಶ್ನೆಗೆ ನಾನು ಬೇರೆಲ್ಲೇ ಕೆಲಸ ಮಾಡುತ್ತಿದ್ದರೂ ಯುಗಾದಿಯಂದು ಕೋಲಾರಕ್ಕೆ ಬಂದು ಯುಗಾದಿ ಸಂಭ್ರಮ ಕಾರ್ಯಕ್ರಮ ನಡೆಸುವ ಭರವಸೆ ನೀಡಿದ್ದೆ ಎಂದು ಸ್ಮರಿಸಿದ ಅವರು ಕಳೆದ ವರ್ಷ ಚುನಾವಣಾ ನೀತಿಸಂಹಿತೆಯಿAದ ಮಾತ್ರ ಕಾರ್ಯಕ್ರಮ ನಡೆಸಲಿಲ್ಲ ಎಂದರು.

ಈ ವರ್ಷದ ಕಾರ್ಯಕ್ರಮ ಗಮನಿಸಿ ಮತ್ತಷ್ಟು ಉತ್ತಮಪಡಿಸುವ ಪ್ರಯತ್ನ ಮುಂದುವರೆಸುವುದಾಗಿ ತಿಳಿಸಿದ ಅವರು, ಈ ನೆಲದ ಸಂಸ್ಕೃತಿಯ ಕಲೆಗಳಿಗೆ ತವರಾದ ಕೋಲಾರವನ್ನು ರಾಜ್ಯದಲ್ಲೇ ಅತ್ಯುತ್ತಮ ಸಾಂಸ್ಕೃತಿಕ ಕೇಂದ್ರವನ್ನಾಗಿಸುವ ಹೆಬ್ಬಯಕೆ ನನ್ನದು ಎಂದರು.

ಮುಖ್ಯಮAತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಡಿಸಿಪಿ ದೇವರಾಜ್ ಅವರು ಕೋಲಾರದ ಜನತೆಗೆ ಬೇವು-ಬೆಲ್ಲದ ಜತೆಗೆ ಸಂಗೀತದ ಸಿಹಿಯನ್ನು ನೀಡಿದ್ದು, ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿ, ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಕೊರತೆ ನೀಗಿಸುವಲ್ಲಿ ಡಿಸಿಪಿ ದೇವರಾಜ್ ಅವರ ಪ್ರಯತ್ನಕ್ಕೆ ಜಿಲ್ಲಾಡಳಿತ ಕೈಜೋಡಿಸಲಿದೆ, ಅವರ ಪ್ರಯತ್ನ ಯಶಸ್ವಿಯಾಗಲಿ ಎಂದು ತಿಳಿಸಿ, ಜಿಲ್ಲೆಯ ಜನತೆಗೆ ಯುಗಾದಿ ಶುಭಾಷಯಗಳನ್ನು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಮಾತನಾಡಿ, ಕೋಲಾರ ಜಿಲ್ಲೆಯ ಜನತೆ ಅತ್ಯಂತ ಶ್ರಮ ಜೀವಿಗಳು, ಇಲ್ಲಿನ ಜನತೆಗೆ ತಮ್ಮ ಶ್ರಮದ ಜತೆಗೆ ಸ್ವಲ್ಪಮಟ್ಟಿಗೆ ಮನರಂಜನೆ ಒದಗಿಸುವ ಪ್ರಯತ್ನವಾಗಿ ಯುಗಾದಿ

ಸಂಭ್ರಮದAತಹ ಮಹತ್ವದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಇಲ್ಲಿ ನೆರದಿರುವ ಅಭೂತಪೂರ್ವ ಜನಸ್ತೋಮವೇ ಸಾಕ್ಷಿಯಾಗಿದೆ ಎಂದು ತಿಳಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಗಾಯನಕ್ಕೆ ಜನ ಮನಸೋತರು, ಇಡೀ ಕಾರ್ಯಕ್ರಮದುದ್ದಕ್ಕೂ ಹರ್ಷೋದ್ಘಾರ ಮುಗಿಲು ಮುಟ್ಟಿದ್ದು, ನಿರೂಪಕಿ ಅನುಶ್ರೀ ಅವರ ನಿರೂಪಣೆ, ಗಾಯಕಿ ಲಕ್ಷಿö್ಮನಾಗರಾಜ್, ಅಕ್ಬರ್ ತಂಡದ ಗೀತೆಗಳು ಜನಮನಸೂರೆಗೊಂಡಿತು.

ಯುಗಾದಿ ಉತ್ಸವದ ನಂತರ ಬಾಣಬಿರುಸುಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಅತ್ಯಂತ ಅದ್ದೂರಿ ಹಾಗೂ ಆಕರ್ಷಣೀಯವಾಗಿ ಮೂಡಿ ಬಂತು.ಇದೇ ಸಂದರ್ಭದಲ್ಲಿ ರಾಷ್ಟಿçÃಯ ಈಜು ಪಟು ಡಿಂಪಲ್ ಸೋನಾಕ್ಷಿ ಎಂ.ಗೌಡ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ನಾಗರಾಜ್, ಸುನಿಲ ಎಸ್.ಹೊಸಮನಿ, ವಸತಿ ಸಚಿವರ ಮಾಧ್ಯಮ ಸಲಹೆಗಾರ ಲಕ್ಷಿö್ಮನಾರಾಯಣ, ಕೆಜಿಎಫ್ ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜು, ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ವಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಟಿವಿ೯ ಕ್ರೆö ವರದಿಗಾರ ಕಿರಣ್, ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ವಿ.ಮುನಿರಾಜು, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‌ಕುಮಾರ್, ನಾಗರೀಕ ವೇದಿಕೆಯ ಕುರುಬರಪೇಟೆ ವೆಂಕಟೇಶ್, ಡಾ.ಶಂಕರ್ ಮತ್ತಿತರರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande