ಮಾನ್ವಿ, 29 ಮಾರ್ಚ್ (ಹಿ.ಸ.) :
ಆ್ಯಂಕರ್ : ಪವಿತ್ರ ಯುಗಾದಿ, ರಂಜಾನ್ ಹಬ್ಬ ಹಾಗೂ ಯುಗಾದಿ ಹಬ್ಬದ ನಿಮಿತ್ಯ ಪಟ್ಟಣದಾದ್ಯಂತ ಕತ್ತಲಿರುವ ಪ್ರದೇಶದಲ್ಲಿ ಶೀಘ್ರ ಬಲ್ಬ್ ಗಳನ್ನು ಅಳವಡಿಸಬೇಕು. ಮಾನ್ವಿ ಪಟ್ಟಣದಲ್ಲಿ ಕುಡಿಯುವ ನೀರಿನ ತೊಂದರೆಯಿರುವ ಬಡಾವಣೆಗಳಿಗೆ ಇಂದಿನಿಂದಲೇ ಖಾಸಗಿ ಬೋರ್ವೆಲ್ ಗಳಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಅಧಿಕಾರಿಗಳು ನೀರಿನ ವಿಷಯದಲ್ಲಿ ಜನರಿಗೆ ಶೀಘ್ರ ಸ್ಪಂದಿಸಬೇಕು ಇಲ್ಲವಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಾನ್ವಿ ಪ್ರವಾಸಿ ಮಂದಿರದಲ್ಲಿ ಮಾನ್ವಿ ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಾಲೂಕಿನಾದ್ಯಂತ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆ ನಡೆಸಿದರು.
ಅಮೃತ-2 ಯೋಜನೆ ವರದಿ ಪಡೆದ ಸಚಿವರು:
ಪಟ್ಟಣಕ್ಕೆ 24*7 ನಿರಂತರ ಕುಡಿಯುವ ನೀರು ಪೂರೈಸುವ ಅಮೃತ-2 ಯೋಜನೆಯ ಪೈಪ್ ಲೈನ್ ನ ನೀಲ ನಕ್ಷೆಯನ್ನು ವೀಕ್ಷಿಸಿದರು. ಈ ಕುಡಿಯುವ ನೀರಿನ ಯೋಜೆನೆಯ ಕಾಮಗಾರಿಯನ್ನು ನೀವೆಲ್ಲರು ಗುಣಮಟ್ಟದೊಂದಿಗೆ ನಿರ್ವಹಿಸಬೇಕು. ನಾನು ಖುದ್ದಾಗಿ ಕಾಮಗಾರಿ ಸ್ಥಳಕ್ಕೆ ಬಂದು ಪೈಪ್ ಗಳ ಗುಣಮಟ್ಟ ಪರಿಶೀಲಿಸುತ್ತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಬೇಸಿಗೆಯಿದ್ದರಿಂದ ಮೊದಲು ಮಾನ್ವಿ ಪಟ್ಟಣದಲ್ಲಿರುವ ಕುಡಿಯುವ ನೀರಿನ ಟ್ಯಾಂಕರ್ ಗಳನ್ನು, ಶುದ್ಧ ಕುಡಿಯುವ ಟ್ಯಾಂಕಗಳನ್ನು ಭರ್ತಿ ಮಾಡಬೇಕು. ಅಲ್ಲದೆ ನದಿಯಲ್ಲಿ ಶಾಲೋ ಬೋರ್ವೆಲ್ (ಕೈ ಬೋರ್) ಕೊರೆಯಬೇಕು ಎಂದರು.
ಪಟ್ಟಣದ ಎಲ್ಲಾ ವಾರ್ಡ್‌ಗಳಿಗೆ 2-3 ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿರುವುದಾಗಿ ಸ್ಥಳೀಯ ಆರೋಪಿಸುತ್ತಿದ್ದಾರೆ. ವಾರ್ಡ್ ನಂ 7, 8, 9, 10, 11, 13, 17ರ ವ್ಯಾಪ್ತಿಯ ಕೋನಾಪುರಪೇಟೆ, ಸೋನಿಯಾ ಗಾಂಧಿ ನಗರ, ಜನತಾ ಕಾಲೊನಿ, ಜುಮ್ಮಲದೊಡ್ಡಿ, ಬೆಳಗಿನಪೇಟೆ ಸೇರಿ ಮತ್ತಿತರ ಕಡೆ ಹೆಚ್ಚಿನ ನೀರಿನ ತೊಂದರೆಯಿದೆ ಶೀಘ್ರ ಈ ಬಡಾವಣೆಗಳಿಗೆ ಭೇಟಿ ನೀಡಿ ನೀರಿನ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕೆಂದು ಅಧಿಕಾರಿಗಳಿಗೆ ಹಾಗೂ ಪುರಸಭೆ ಸದಸ್ಯರುಗಳಿಗೆ ಸೂಚಿಸಿದರು.
ತುಂಗಭದ್ರ ನದಿಯಿಂದ ಕುಡಿಯುವ ನೀರಿಗಾಗಿ ಕಾಲುವೆಗೆಗಳಿಗೆ ನೀರು ಬಿಡಲು ಚರ್ಚಿಸಲಾಗುತ್ತಿದೆ. ಕುಡಿಯುವ ನೀರಿನ ಕೆರೆಗಳು ತುಂಬಿಸಲು ಪ್ರತ್ಯೇಕವಾಗಿ ತುಂಗಭದ್ರ ಎಡದಂಡೆ ಕಾಲುವೆಯ ನೀರು ಸರಬರಾಜು ಸಂದರ್ಭದಲ್ಲಿ ಪೋಲೀಸ್ ಸಿಬ್ಬಂದಿಗಳು, ಪುರಸಭೆ ಅಧಿಕಾರಿಗಳು ಸೂಕ್ತ ಬಂದೋಬಸ್ತ ಮೂಲಕ ಕುಡಿಯುವ ನೀರಿನ ಕೆರೆಗಳು ತುಂಬಿಸಲು ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಾಜು ಪಿರಂಗಿ, ಮಾನ್ವಿ ಪುರಸಭೆ ಮುಖ್ಯಾಧಿಕಾರಿ, ಆರ್ ಡಬ್ಲ್ಯೂಎಸ್ ಅಧಿಕಾರಿ ಚೌಹಾಣ್, ಇಇ ಗುರುರಾಜ್, ಸತೀಶ್, ಸಹಾಯಕ ಅಭಿಯಂತರಾದ ಧನ್ಯಶ್ರೀ, ಟಿಎಂಸಿ ಜೆಇ ಚೇತನಾ, ಪಿಡಿಎಂಸಿ ಅಕೀಬ್, ಪುರಸಭೆ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರುಗಳು ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್