ನವದೆಹಲಿ, 29 ಮಾರ್ಚ್ (ಹಿ.ಸ.) :
ಆ್ಯಂಕರ್ : ಭಾರತದಿಂದ ಮೊದಲ ಕಂತಿನ ಮಾನವೀಯ ನೆರವು ಮ್ಯಾನ್ಮಾರ್‌ನ ಯಾಂಗೋನ್ ವಿಮಾನ ನಿಲ್ದಾಣವನ್ನು ತಲುಪಿದೆ ವಿದೇಶಾಂಗ ಸಚಿವ ಎಸ್.ಜೈ ಶಂಕರ್ ತಿಳಿಸಿದ್ದಾರೆ.
ಭಾರತೀಯ ವಾಯುಸೇನೆ ವಿಮಾನವು ಕಂಬಳಿಗಳು, ಟಾರ್ಪಾಲಿನ್, ನೈರ್ಮಲ್ಯ ಕಿಟ್‌ಗಳು, ಮಲಗುವ ಚೀಲಗಳು, ಸೌರ ದೀಪಗಳು, ಆಹಾರ ಪೊಟ್ಟಣ ಮತ್ತು ಅಡುಗೆಮನೆ ಸಾಮಗ್ರಿಗಳನ್ನು ಹೊತ್ತಿದೆ. ಈ ವಿಮಾನದೊಂದಿಗೆ ಶೋಧ ಮತ್ತು ರಕ್ಷಣಾ ತಂಡ ಮತ್ತು ವೈದ್ಯಕೀಯ ತಂಡವೂ ಇದೆ.
ಈ ಕುರಿತಾದ ಬೆಳವಣಿಗೆಗಳ ಮೇಲ್ವಿಚಾರಣೆ ನಡೆಸುತ್ತಿದ್ದು ಹೆಚ್ಚಿನ ನೆರವನ್ನು ನಂತರ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ..
ಹಿಂದೂಸ್ತಾನ್ ಸಮಾಚಾರ್ / Rakesh Mahadevappa