ನವದೆಹಲಿ, 31 ಮಾರ್ಚ್ (ಹಿ.ಸ.) :
ಆ್ಯಂಕರ್ : ವಕ್ಫ್ ತಿದ್ದುಪಡಿ ಮಸೂದೆಗೆ ಕೇರಳ ಕ್ಯಾಥೋಲಿಕ್ ಬಿಷಪ್‌ಗಳ ಮಂಡಳಿ (ಕೆಸಿಬಿಸಿ) ಬೆಂಬಲ ವ್ಯಕ್ತಪಡಿಸಿದೆ. ಈ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿದ್ದು, ಮಸೂದೆಯ ವಿರುದ್ಧತೆಯನ್ನು ಸಮರ್ಥಿಸಿಕೊಳ್ಳುವವರಿಗೆ ಇದು ತಕ್ಕ ಉತ್ತರವಾಗಿದೆ ಎಂದು ಹೇಳಿದೆ.
ಈ ಕುರಿತು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಮಾತನಾಡಿ , ವಕ್ಫ್ ನಿಯಮಗಳು ಕ್ರಿಶ್ಚಿಯನ್ ಸಮುದಾಯದ ಭೂಮಿಯನ್ನೂ ಕಬಳಿಸುವ ಸಾಧ್ಯತೆಯನ್ನು ಹುಟ್ಟಿಸಿವೆ. ಕೇರಳದ ಮುನಂಬಮ್ ಪ್ರದೇಶದ ಬಡ ಕುಟುಂಬಗಳು ಭೂಸ್ವಾಮ್ಯದ ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ಕೆಸಿಬಿಸಿ ಸ್ಪಷ್ಟ ನಿಲುವು ತೆಗೆದುಕೊಂಡಿದೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa