ಪಂಜಾಬ್ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ
ಚಂಡೀಗಡ, 31 ಮಾರ್ಚ್ (ಹಿ.ಸ.) : ಆ್ಯಂಕರ್ : ಪಂಜಾಬ್‌ ರೈತರು ರಾಜ್ಯ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಸೋಮವಾರ, ಕಿಸಾನ್ ಮಜ್ದೂರ್ ಮೋರ್ಚಾ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ನೇತೃತ್ವದಲ್ಲಿ ರೈತರು ಮುಖ್ಯಮಂತ್ರಿ, ಸಂಪುಟ ಸಚಿವರು ಹಾಗೂ ಶಾಸಕರ ನಿವಾಸಗಳ ಬಳಿ ಪ್ರತಿಭ
Protest


ಚಂಡೀಗಡ, 31 ಮಾರ್ಚ್ (ಹಿ.ಸ.) :

ಆ್ಯಂಕರ್ : ಪಂಜಾಬ್‌ ರೈತರು ರಾಜ್ಯ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಸೋಮವಾರ, ಕಿಸಾನ್ ಮಜ್ದೂರ್ ಮೋರ್ಚಾ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ನೇತೃತ್ವದಲ್ಲಿ ರೈತರು ಮುಖ್ಯಮಂತ್ರಿ, ಸಂಪುಟ ಸಚಿವರು ಹಾಗೂ ಶಾಸಕರ ನಿವಾಸಗಳ ಬಳಿ ಪ್ರತಿಭಟನೆ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ, ರಾಜ್ಯದ ಹಲವೆಡೆ ರೈತರ ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ.

ಮಾರ್ಚ್ 19ರಂದು ಕೇಂದ್ರ ಸರ್ಕಾರದೊಂದಿಗೆ ಏಳನೇ ಸುತ್ತಿನ ಮಾತುಕತೆಯ ಬಳಿಕ, ಪಂಜಾಬ್ ಪೊಲೀಸರು ಪ್ರಮುಖ ರೈತ ನಾಯಕರಾದ ಜಗಜಿತ್ ಸಿಂಗ್ ದಲ್ಲೆವಾಲ್, ಸರ್ವಾನ್ ಸಿಂಗ್ ಪಂಧೇರ್ ಮತ್ತು ಇತರರನ್ನು ಬಂಧಿಸಿದ್ದರು. ಈ ಬಂಧನದ ನಂತರ, ಬಿಗುವಿನ ಪರಿಸ್ಥಿತಿ ಉಂಟಾಗಿದೆ.

ಮಾರ್ಚ್ 20 ಮತ್ತು 21ರಂದು ಗಡಿ ಭಾಗದಲ್ಲಿ ವಾಹನ ಸಂಚಾರ ಪುನಾರಂಭವಾಗಿದೆ.

ಈ ವಿದ್ಯಮಾನದಿಂದ ಕೋಪಗೊಂಡ ರೈತರು ಸೋಮವಾರ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದರು.

ಜಲಂಧರ್‌ನಲ್ಲಿ ಸಂಪುಟ ಸಚಿವ ಮಹೇಂದ್ರ ಭಗತ್ ಅವರ ನಿವಾಸದತ್ತ ರೈತರು ಮೆರವಣಿಗೆ ನಡೆಸಿದಾಗ, ಪೊಲೀಸರು ಅವರನ್ನು ತಡೆದು ಲಾಠಿಚಾರ್ಜ್ ನಡೆಸಿದರು.

ಇದೇ ರೀತಿಯಾಗಿ ಅಮೃತಸರ, ತರಣ್ ತರಣ್, ಹೋಶಿಯಾರ್‌ಪುರ, ಗುರುದಾಸ್ಪುರ್, ಪಠಾಣ್‌ಕೋಟ್, ಫಿರೋಜ್‌ಪುರ್, ಮೋಗಾ, ಬಟಿಂಡಾ, ಲುಧಿಯಾನ, ಪಟಿಯಾಲ, ಮಾನ್ಸಾ ಮತ್ತು ಸಂಗ್ರೂರ್ ಸೇರಿದಂತೆ ಜಿಲ್ಲೆಗಳಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande