ಭಾರತದಲ್ಲಿ ಪರಮಾಣು ಶಕ್ತಿ : ಪ್ರಧಾನಿ ಮೋದಿ ಶ್ಲಾಘನೆ
ನವದೆಹಲಿ, 31 ಮಾರ್ಚ್ (ಹಿ.ಸ.) : ಆ್ಯಂಕರ್ : ಇಂಧನ ಸ್ವಾವಲಂಬನೆ ಮತ್ತು ಸುಸ್ಥಿರತೆಯತ್ತ ಭಾರತದ ಪ್ರಯಾಣದಲ್ಲಿ ಪರಮಾಣು ಶಕ್ತಿಯ ಪ್ರಮುಖ ಪಾತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರ ಪರಮಾಣು ಇಂಧನ ಕುರಿತು ಮಾಡಿದ ಟ್ವೀಟ್‌ಗೆ ಪ್ರ
Pm


ನವದೆಹಲಿ, 31 ಮಾರ್ಚ್ (ಹಿ.ಸ.) :

ಆ್ಯಂಕರ್ : ಇಂಧನ ಸ್ವಾವಲಂಬನೆ ಮತ್ತು ಸುಸ್ಥಿರತೆಯತ್ತ ಭಾರತದ ಪ್ರಯಾಣದಲ್ಲಿ ಪರಮಾಣು ಶಕ್ತಿಯ ಪ್ರಮುಖ ಪಾತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರ ಪರಮಾಣು ಇಂಧನ ಕುರಿತು ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಮೋದಿ ಪರಮಾಣು ಶಕ್ತಿಯ ಮಹತ್ವವನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

2024ರ ಕೇಂದ್ರ ಬಜೆಟ್‌ನಲ್ಲಿ ಪರಮಾಣು ಇಂಧನ ವಲಯವನ್ನು ಖಾಸಗಿ ಹೂಡಿಕೆದಾರರಿಗೆ ತೆರೆಯಲು ನಿರ್ಧರಿಸಲಾಗಿದೆ. ಈ ಕ್ರಮದಿಂದ ಪರಮಾಣು ಶಕ್ತಿಯ ಸಾಮರ್ಥ್ಯವು 2013-14ರ 4,780 ಮೆಗಾವ್ಯಾಟ್‌ನಿಂದ 8,180 ಮೆಗಾವ್ಯಾಟ್‌ಗೆ ಹೆಚ್ಚಾಗಿದೆ. ಅಂದಾಜು 21 ಹೊಸ ರಿಯಾಕ್ಟರ್‌ಗಳು 15,300 ಮೆಗಾವ್ಯಾಟ್ ಸಾಮರ್ಥ್ಯವನ್ನು ಹೊಂದಿದ್ದು, ಭವಿಷ್ಯದಲ್ಲಿ ಪರಮಾಣು ಶಕ್ತಿಯು ಹೆಚ್ಚುವರಿ ಕೊಡುಗೆ ನೀಡಲಿದೆ.

2023-24ರಲ್ಲಿ ಗುಜರಾತ್‌ನ ಕಾಕ್ರಾಪರ್‌ನಲ್ಲಿ ಭಾರತದ ಮೊದಲ 700 ಮೆಗಾವ್ಯಾಟ್ ಒತ್ತಡದ ಭಾರಿ ಜಲ ರಿಯಾಕ್ಟರ್ ಯಶಸ್ವಿಯಾಗಿ ಕಾರ್ಯಾರಂಭಗೊಂಡಿದ್ದು, ಇದು ಸ್ವಾವಲಂಬನೆಯತ್ತ ಪ್ರಮುಖ ಹೆಜ್ಜೆಯಾಗಿದೆ. ಫಾಸ್ಟ್ ಬ್ರೀಡರ್ ರಿಯಾಕ್ಟರ್ ತಂತ್ರಜ್ಞಾನವೂ ಪ್ರಗತಿಯಲ್ಲಿದ್ದು, 500 ಮೆಗ್ಯಾ ವ್ಯಾಟ್ ಮಾದರಿಯ ಪ್ರಾಯೋಗಿಕ ರಿಯಾಕ್ಟರ್ ಪೂರ್ಣಗೊಳ್ಳುವ ಹಂತದಲ್ಲಿದೆ.

ಪರಮಾಣು ವಿದ್ಯುತ್ ಅಭಿವೃದ್ಧಿಗಾಗಿ 2047ರ ಗುರಿಯೊಂದಿಗೆ 100 ಗಿಗಾವ್ಯಾಟ್ ಸಾಮರ್ಥ್ಯವನ್ನು ಹೊಂದುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದೆ. ಅಲ್ಲದೆ, ಪರಮಾಣು ಶಕ್ತಿ ಕಾಯ್ದೆ ಮತ್ತು ಪರಮಾಣು ಹಾನಿ ಹೊಣೆಗಾರಿಕೆ ಕಾಯ್ದೆಗೆ ತಿದ್ದುಪಡಿ ಮಾಡುವ ಯೋಜನೆಯೂ ಸರ್ಕಾರದ ಮುಂದಿದೆ. ದೇಶೀಯ ಸಾಮರ್ಥ್ಯಗಳ ಹೆಚ್ಚಳ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಬಲಪಡಿಸಲು ಭಾರತ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande