ಸಾಮಾಜಿಕ ನ್ಯಾಯದ ಹೋರಾಟಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಸ್ಪೂರ್ತಿ
ಸಾಮಾಜಿಕ ನ್ಯಾಯದ ಹೋರಾಟಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಸ್ಪೂರ್ತಿ
ಕೋಲಾರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಆಯೋಜಿಸಿದ್ದ ಮಹಾಡ್ ಸತ್ಯಾಗ್ರಹದ ನೆನಪಿನ ಶೋಷಿತರ ಸಂಘರ್ಷ ದಿನಾಚರಣೆ ಕಾರ್ಯಕ್ರಮ ನಡೆಯಿತು.


ಕೋಲಾರ, ೨೯ ಮಾರ್ಚ್ (ಹಿ.ಸ) ಆಂಕರ್ : ಮಹಾಡ್ ಕೆರೆಯ ಹೋರಾಟದ ೯೮ ವರ್ಷಗಳ ನಂತರವೂ ಅಸ್ಪಶ್ಯತೆ ಎನ್ನುವುದು ಪ್ರತ್ಯಕ್ಷವಾಗಿ ಕಾಣಿಸದಿದ್ದರೂ, ಪರೋಕ್ಷವಾಗಿ ಎಲ್ಲೆಡೆ ಚಾಲ್ತಿಯಲ್ಲಿದೆ, ಆದ್ದರಿಂದಲೇ ಭಾರತ ದೇಶವು ಜಾಗತಿಕ ಸಂತೃಪ್ತ ದೇಶಗಳ ಪಟ್ಟಿಯಲ್ಲಿ ೧೧೮ ನೇ ಸ್ಥಾನದಲ್ಲಿರುವಂತಾಗಿದೆ. ಅಂಬೇಡ್ಕರ್ ರವರು ಸಾಮಾಜಿಕ ನ್ಯಾಯಾಕ್ಕಾಗಿ ನಡೆಸಿದ ಹೋರಾಟ ಇಂದಿನ ಕಾಲಘಟ್ಟದಲ್ಲಿ ದಮನಿತ ಸಮುದಾಯಗಳಿಗೆ ಸ್ಪೂರ್ತಿಯಾಗಿದೆ ಎಂದು ಅಂಬೇಡ್ಕರ್‌ರ ಮಹಾಡ್ ಹೋರಾಟ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಡಾ.ನಾರಾಯಣಸ್ವಾಮಿ ತಿಳಿಸಿದರು

ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ಆಯೋಜಿಸಿದ್ದ ಭಾರತದ ಅಸ್ಪ÷Èಶ್ಯರ ಮೊದಲ ಪ್ರತಿರೋಧ ಚಳವಳಿ ಮಹಾಡ್ ಸತ್ಯಾಗ್ರಹದ ನೆನಪಿನ ಶೋಷಿತರ ಸಂಘರ್ಷ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ ಅಸಮಾನತೆಯ ವಿರುದ್ಧ ಸಾಮಾಜಿಕ ನ್ಯಾಯದ ಹೋರಾಟ ನಡೆಸುವವರಿಗೆ ಅಂಬೇಡ್ಕರ್ ೯೮ ವರ್ಷಗಳ ಹಿಂದೆ ನಡೆಸಿದ ಮಹಾಡ್ ಕೆರೆ ಹೋರಾಟ ಧರ್ಮಗ್ರಂಥವಾಗಿದೆ ಎಂದು ಅಭಿಪ್ರಾಯಪಟ್ಟರು.

ಅಂಬೇಡ್ಕರ್ ತಮ್ಮ ಜೀವನವನ್ನೇ ಶೋಷಿತರು ಮತ್ತು ದಮನಿತರಿಗೆ ಸಮಾನ ಹಕ್ಕುಗಳನ್ನು ಕೊಡಿಸಲು ತ್ಯಾಗ ಮಾಡಿದ್ದಾರೆ, ಇಂತ ಅಂಬೇಡ್ಕರ್ ಮೊಟ್ಟ ಮೊದಲ ಬಾರಿಗೆ ಚೌಡರ್ ಕೆರೆಯಲ್ಲಿ ಸಾರ್ವತ್ರಿಕವಾಗಿ ಅಪಾರವಾದ ಬೆಂಬಲಿಗರೊAದಿಗೆ ತೆರಳಿ ನೀರು ಕುಡಿದಿದ್ದು ಐತಿಹಾಸಿಕ ಹೋರಾಟವಾಗಿದೆ, ಆದರೆ, ಈ ಹೋರಾಟದ ನಂತರ ಅಂಬೇಡ್ಕರ್ ಸುಮಾರು ಐದÀತ್ತು ವರ್ಷಗಳ ಕಾಲ ಕಾನನಾತ್ಮಕವಾಗಿ ಹೋರಾಟ ಮಾಡಿ ಅಂತಿಮವಾಗಿ ನ್ಯಾಯಾಲಯದಿಂದ ನ್ಯಾಯ ಪಡೆದುಕೊಳ್ಳುತ್ತಾರೆ. ಹೋರಾಟವನ್ನು ಆರಂಭಿಸಿದಾಗ ಇದ್ದ ಉತ್ಸಾಹ ತಾರ್ಕಿಕ ಅಂತ್ಯ ಕೊಡಿಸುವವರೆವಿಗೂ ಇರಬೇಕಾಗುತ್ತದೆ ಎಂಬ ಬದ್ಧತೆಯನ್ನು ಮಹಾಡ್ ಕೆರೆ ಹೋರಾಟ ಪ್ರತಿಯೊಬ್ಬ ಹೋರಾಟಗಾರನಿಗೂ ಪಠ್ಯವಾಗಿದೆ, ಆದ್ದರಿಂದ ಯಾವುದೇ ಹೋರಾಟ ಆರಂಭಕ್ಕೆ ಮುನ್ನ ಮಂಚೂಣಿ ನಾಯಕರು ಮಹಾಡ್ ಕೆರೆ ಹೋರಾಟ ಓದಬೇಕು ಎಂದರು.

ನಿವೃತ್ತ ಪ್ರಾಂಶುಪಾಲ ಡಾ.ಟಿ.ಜಯರಾಮ್ ಮಾತನಾಡಿ, ಅಂಬೇಡ್ಕರ್ ನೀಡಿದ ಹೋರಾಟದ ಫಲದಿಂದಲೇ ಇಂದು ಕೋಟ್ಯಾಂತರ ಮಂದಿ ಸುರಕ್ಷಿತ ಸ್ಥಳಗಳಲ್ಲಿ ಉನ್ನತಾಕಾರವನ್ನು ಅನುಭವಿಸುತ್ತಿದ್ದಾರೆ. ಆದರೆ, ಹೀಗೆ ಇರುವವರು ಕೈಲಾದಷ್ಟು ಮಟ್ಟಿಗೆ ಶೋಷಿತರ, ದಲಿತ ದಮನಿತರ ಸೇವೆಗೆ ಮಾಡಲು ಮುಂದಾದರೆ ಅಂಬೇಡ್ಕರ್‌ರ ನೈಜ ಆಶಯಗಳು ಈಡೇರಿದಂತಾಗುತ್ತದೆ ಎಂದರು.

ನಗರಸಭೆ ಸದಸ್ಯ ಎನ್.ಅಂಬರೀಶ್ ಮಾತನಾಡಿ, ಅಂಬೇಡ್ಕರ್ ಹೋರಾಟದ ಅಂತಿಮ ಗುರಿ ರಾಜ್ಯಾಕಾರವನ್ನು ಪಡೆಯುವುದೇ ಆಗಿದೆ, ಆದರೆ, ಈ ಗುರಿಯನ್ನು ಮರೆತ ದಲಿತ ಸಮುದಾಯವು ಒಳ ಪಂಗಡಗಳ ರಾಜಕಾರಣದಲ್ಲಿ ಒಗ್ಗಟ್ಟು ಮರೆತು ಬಲಹೀನವಾಗುತ್ತಿದೆ. ಪಕ್ಷ ರಾಜಕಾರಣದಲ್ಲಿರುವವರು ಸಹ ಬಿ.ರಾಚಯ್ಯö, ಬಿ.ಬಸವಲಿಂಗಪ್ಪರ ರ ರೀತಿ ನಿಷ್ಠೂರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

ದಸಂಸ ಅಂಬೇಡ್ಕರ್ ವಾದ ಬೆಂಗಳೂರು ವಿಭಾಗೀಯ ಸಂಚಾಲಕ ಮಣಿಪಾಲ್ ರಾಜಪ್ಪ ಮಾತನಾಡಿ, ದಸಂಸ ಅಂಬೇಡ್ಕರ್ ವಾದ ಅಂಬೇಡ್ಕರ್ ಆಶಯಗಳಂತೆ ಸಾಮಾಜಿಕ ಚಳವಳಿ ನಡೆಸುತ್ತಿದ್ದುö, ಸಂಘಟನೆಯನ್ನು ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ನಾಯಕತ್ವದಲ್ಲಿ ಬಲಪಡಿಸಿ ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ, ಅಂಬೇಡ್ಕರ್ ಅಧ್ಯಯನ ಶಿಬಿರಗಳ ಮೂಲಕ ಚಳವಳಿಯನ್ನು ಸೈದ್ಧಾಂತಿಕವಾಗಿ ಗಟ್ಟಿಗೊಳಿಸಲಾಗುತ್ತಿದೆ, ಹೊಸ ಪೀಳಿಗೆಯ ಯುವ ಜನತೆ ಅಂಬೇಡ್ಕರ್ ವಾದಕ್ಕೆ ಸೇರಬೇಕೆಂದು ವಿನಂತಿಸಿದರು.

ದಸAಸ ಅಂಬೇಡ್ಕರ್ ವಾದ ರಾಜ್ಯ ಸಮಿತಿ ಸದಸ್ಯ ಎ.ಪಿ.ಎಲ್.ರಂಗನಾಥ್, ವಕೀಲ ಹಿರಿಯ ದಲಿತ ಮುಖಂಡ ಪಿ.ಸಿ.ನಾರಾಯಣಸ್ವಾಮಿ ಹಾಗೂ ಜಿಲ್ಲಾ ಮತ್ತು ತಾಲೂಕು ಪದಾಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚಿತ್ರ : ಕೋಲಾರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಆಯೋಜಿಸಿದ್ದ ಮಹಾಡ್ ಸತ್ಯಾಗ್ರಹದ ನೆನಪಿನ ಶೋಷಿತರ ಸಂಘರ್ಷ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande