ಬೇಸಿಗೆ ಬಿಸಿಲಿಗೆ ಕ್ಯಾರೆಟ್ ಜ್ಯೂಸ್
ಹುಬ್ಬಳ್ಳಿ, 16 ಮಾರ್ಚ್ (ಹಿ.ಸ.) : ಆ್ಯಂಕರ್ : ಬೇಸಿಗೆಯಲ್ಲಿ ದೇಹವನ್ನು ಉಷ್ಣದಿಂದ ರಕ್ಷಿಸಿಕೊಳ್ಳಲು ಕ್ಯಾರೆಟ್ ಜ್ಯೂಸ್ ಉತ್ತಮ ಆಯ್ಕೆಯಾಗಿದೆ. ಮಾಡುವ ವಿಧಾನ ಇಲ್ಲಿದೆ... ಕ್ಯಾರೆಟ್ ಜ್ಯೂಸ್ ಮಾಡುವ ವಿಧಾನ. ಮೂರು ಕ್ಯಾರೆಟ್ ಚೆನ್ನಾಗಿ ತೊಳೆದು ಅದರ ಸಿಪ್ಪೆಯನ್ನು ತೆಗೆದು, ಕ್ಯಾರೆಟ್ ಸಣ್ಣದಾಗಿ ಹ
Drink


ಹುಬ್ಬಳ್ಳಿ, 16 ಮಾರ್ಚ್ (ಹಿ.ಸ.) :

ಆ್ಯಂಕರ್ : ಬೇಸಿಗೆಯಲ್ಲಿ ದೇಹವನ್ನು ಉಷ್ಣದಿಂದ ರಕ್ಷಿಸಿಕೊಳ್ಳಲು ಕ್ಯಾರೆಟ್ ಜ್ಯೂಸ್ ಉತ್ತಮ ಆಯ್ಕೆಯಾಗಿದೆ. ಮಾಡುವ ವಿಧಾನ ಇಲ್ಲಿದೆ...

ಕ್ಯಾರೆಟ್ ಜ್ಯೂಸ್ ಮಾಡುವ ವಿಧಾನ.

ಮೂರು ಕ್ಯಾರೆಟ್ ಚೆನ್ನಾಗಿ ತೊಳೆದು ಅದರ ಸಿಪ್ಪೆಯನ್ನು ತೆಗೆದು, ಕ್ಯಾರೆಟ್ ಸಣ್ಣದಾಗಿ ಹೆಚ್ಚಿ ಮಿಕ್ಸಿ ಜಾರಿಗೆ ಹಾಕಿ ಇದರ ಜೊತೆಗೆ ಪುದಿನಾ ಎಲೆ ಸೇರಿಸಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಆನಂತರ ಇದನ್ನು ಸೋಸಿಕೊಂಡು ಬಂದಿರುವ ರಸಕ್ಕೆ ಚಿಟಿಕೆ ಕಾಳು ಮೆಣಸಿನ ಪುಡಿ ರುಚಿಗೆ ಸ್ವಲ್ಪ( ಚಿಟಿಕೆ) ಉಪ್ಪು ಸೇರಿಸಿಕೊಂಡು ಐಸ್ ತುಂಡುಗಳನ್ನು ಸೇರಿಸಿ ಲೋಟದಲ್ಲಿ ಹಾಕಿ ಕುಡಿಯಿರಿ. ಈ ಬಿಸಿಲಿಗೆ ಒಳ್ಳೆಯ ಪಾನೀಯ,ಆರೋಗ್ಯಕ್ಕೂ ಉತ್ತಮ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande