ಸಂಜೀವಿನಿ ಗುಡ್ಡದಲ್ಲಿ ಅಪಾರ ಪ್ರಮಾಣದ ಚಿನ್ನದ ನಿಧಿ
ಗದಗ, 17 ಫೆಬ್ರವರಿ (ಹಿ.ಸ.) : ಆ್ಯಂಕರ್ : ಐತಿಹಾಸಿ ಲಕ್ಕುಂಡಿಯಲ್ಲಿ ಚಿನ್ನದನಿಧಿ ಸಿಕ್ಕ ಬಳಿಕ, ಒಂದೊಂದು ರಹಸ್ಯಗಳು ಬಯಲಾಗ್ತಾಯಿವೆ. ಹೌದು ಲಕ್ಕುಂಡಿ ಚಿನ್ನದ ಸಂಪತ್ತು ಆಯ್ತು, ಈವಾಗ ಕಪ್ಪತ್ತಗುಡ್ಡದ ಚಿನ್ನದ ಗುಹೆಗಳ ರೋಚಕ ರಹಸ್ಯಗಳನ್ನು ಬಿಚ್ಚಿಡ್ತಾಯಿವೆ. ಕಪ್ಪತ್ತಗುಡ್ಡದ ಸಂಜೀವಿನಿ ಗುಡ್ಡದಲ್ಲ
ಫೋಟೋ


ಫೋಟೋ


ಪೋಟೋ


ಗದಗ, 17 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಐತಿಹಾಸಿ ಲಕ್ಕುಂಡಿಯಲ್ಲಿ ಚಿನ್ನದನಿಧಿ ಸಿಕ್ಕ ಬಳಿಕ, ಒಂದೊಂದು ರಹಸ್ಯಗಳು ಬಯಲಾಗ್ತಾಯಿವೆ. ಹೌದು ಲಕ್ಕುಂಡಿ ಚಿನ್ನದ ಸಂಪತ್ತು ಆಯ್ತು, ಈವಾಗ ಕಪ್ಪತ್ತಗುಡ್ಡದ ಚಿನ್ನದ ಗುಹೆಗಳ ರೋಚಕ ರಹಸ್ಯಗಳನ್ನು ಬಿಚ್ಚಿಡ್ತಾಯಿವೆ. ಕಪ್ಪತ್ತಗುಡ್ಡದ ಸಂಜೀವಿನಿ ಗುಡ್ಡದಲ್ಲಿ ಅಪಾರ ಸಂಪತ್ತು ಎನ್ನಲಾಗುತ್ತಿದೆ.. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ..

ಐತಿಹಾಸಿಕ ಲಕ್ಕುಂಡಿ ಗ್ರಾಮ, ಕಲ್ಯಾಣ ಚಾಲುಕ್ಯರು, ವಿಜಯನಗರ ಅರಸರು, ರಾಷ್ಟ್ರಕೂಟರು ಆಳಿದ ನಾಡು. ಇದೇ ಲಕ್ಕುಂಡಿಯಲ್ಲಿ ಸಂಪತ್ತಿನ ಖಜಾನೆಯೇ ಇದೆ. ಚಿನ್ನದ ನಾಣ್ಯ ಟಂಕಿಸುತ್ತಿದ್ದ ಲಕ್ಕುಂಡಿ. ಇದೇ ಲಕ್ಕುಂಡಿಯಲ್ಲಿ ಜನೇವರಿ 10 ಪ್ರಜ್ವಲ್ ರಿತ್ತಿ ಕುಟುಂಬಕ್ಕೆ 466 ಗ್ರಾಮ ಚಿನ್ನದ ನಿಧಿ ಸಿಕ್ಕಿದೆ. ಈ ಸಿಕ್ಕಿದ್ದೇ ತಡ ಐತಿಹಾಸಿಕ ಲಕ್ಕುಂಡಿಯ ಗತವೈಭ ರಹಸ್ಯಗಳು ನಿತ್ಯವೂ ಹೊರಬರ್ತಾಯಿವೆ. ಈಗ ಕಪ್ಪತ್ತಗುಡ್ಡದಲ್ಲಿ ಮತ್ತೊಂದು ಸಂಪತ್ತಿನ ಗುಹೆ ರಹಸ್ಯ ಬಯಲಾಗಿದೆ. ಕರಿಯಮ್ಮನ ಗುಡ್ಡದ ಈ ಗುಹೆಯೊಳಗಿನ ಸಂಪತ್ತಿನ ವಿಷಯ ಕೇಳಿದ್ರೆ ನೀವು ದಂಗಾಗಿ ಹೋಗ್ತೀರಾ. ಕಪ್ಪತ್ತಗುಡ್ಡದ ಸಂಜೀವಿನಿ ಗುಡ್ಡ ಅಂತಾ ಕರೆಸಿಕೊಳ್ಳುವ ರಹಸ್ಯ ಬಯಲಾಗಿದೆ. ಗದಗ ಜಿಲ್ಲೆಯ ಅತ್ತಿಕಟ್ಟಿ ಗ್ರಾಮದ ರವಿ ಚವ್ಹಾಣ, ವಿಷ್ಣು ನಾಯಕ್ ರೋಚಕ, ವಿಸ್ಮಯ, ಕೌತಕವಾದ ವಿಷಯಗಳು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಸಂಜೀವೀನಿ ಪರ್ವತದ ಗುಹೆಯೊಳಗೆ ನೂರಾರು ವರ್ಷಗಳಿಂದ ಋಷಿಮುನಿಯೊಬ್ರು ತಪಸ್ಸು ಮಾಡ್ತಾಯಿದ್ದಾರಂತೆ. ಬಂಗಾರದ ಶಿವಲಿಂಗಕ್ಕೆ ನಿತ್ಯ ಈ ಋಷಿಮುಗಳು ಪೂಜೆ ಪುನಸ್ಕಾರ ಮಾಡ್ತಾಯಿದ್ದಾರಂತೆ. ಸಂಜೀವಿನಿ ಪರ್ವದಲ್ಲಿರೋ ಈ ಗವಿಯೊಳಗೆ ಅಪಾರ ಶಕ್ತಿಯಿಂದೆಯಂತೆ. ನಿತ್ಯ ಪೂಜೆ ಮಾಡುವ ಋಷಿಮುನಿಗಳು ಲಿಂಗದಲ್ಲಿ ಬರುವ ಒಂಚೂರು ಸೂಸು ಮಣ್ಣು ತಿಂದ್ರೆ ನೂರು ವರ್ಷ ಆಯಸ್ಸು ಹೆಚ್ಚಾಗುತ್ತಂತೆ. ಆ ಮಣ್ಣು ತಿಂದೇ ನೂರಾರು ವರ್ಷ ಈ ಋಷಿಮುನಿಗಳು ತಪ, ಜಪ ಮಾಡ್ತಾಯಿದ್ದಾರೆ ಎಂದು ಸ್ಥಳೀಯರಾದ ರವಿ ಚವ್ಹಾಣ ತಿಳಿಸಿದ್ದಾರೆ.

ಈ ಗುಹೆಯೊಳಗಿನ ಚಿನ್ನ, ವಜ್ರ ವೈಢ್ಯೂರಗಳ ಸಂಪತ್ತಿನ ಬಗ್ಗೆ ಕೇಳಿದ್ರೆ ನೀವು ದಂಗಾಗಿ ಹೋಗ್ತೀರಾ. ಚಿನ್ನದ ಬೃಹತ ರಥ, ಚಿನ್ನದ ಎತ್ತುಗಳು, ಚಿನ್ನ, ವಜ್ರಖಚಿತ ದೇವಿಮೂರ್ತಿ ಸೇರಿ ದೇವಿಗೆ ಸೇರಿ ಅಪಾರ ಸಂಪತ್ತು ಇದೆ ಎನ್ನಲಾಗುತ್ತಿದೆ.. ಇನ್ನೂ ಹತ್ತು ವರ್ಷಗಳ ಹಿಂದೆ ಓರ್ವ ಸ್ವಾಮಿಜಿ ಬಂದು ಈ ಗವಿಯಲ್ಲಿ ತಪಸ್ಸು ಮಾಡಿದ್ರು. ಈ ಗವಿಯ ಒಳಗೆ ನೂರಾರು ವರ್ಷಗಳಿಂದ ಋಷಿಮುನಿಯೊಬ್ರು ವಾಸವಾಗಿದ್ದಾರಂತೆ. ನನ್ನ ತಪಸ್ಸಿನ ಶಕ್ತಿಯಿಂದ ಅವ್ರನ್ನ ಹೊರ ಕರೆದುಕೊಂಡು ಬರ್ತೀನಿ ಅಂತ ಸ್ವಾಮೀಜಿ ತಪಸ್ಸು ಕುಳಿತಿದ್ದನಂತೆ. ಕಾಡುಪ್ರಾಣಿಗಳ ವಾಸಸ್ಥಾನದ ಪ್ರದೇಶದಲ್ಲೇ ಒಂದು ತಿಂಗಳ ತಪಸ್ಸು ಮಾಡಿದ್ದನಂತೆ. ಇಂಥ ಗುಹೆಯಲ್ಲಿ ಆ ಸ್ವಾಮೀಜಿ ತಪಸ್ಸು ಮಾಡ್ತಾಯಿದ್ದ. ಆದ್ರೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕೆಲವು ಗ್ರಾಮಸ್ಥರು ಆ ಸ್ವಾಮೀಜಿ ಅಲ್ಲಿನ ಸಂಪತ್ತು ತೆಗೆದುಕೊಂಡು ಹೋಗಲು ಸಂಚು ರೂಪಿಸಿದ್ದಾರೆ ಎನ್ನುವ ಅನುಮಾನ ಬಂದಿದೆ.. ಹೀಗಾಗಿ ಆ ಸ್ವಾಮೀಜಿಯನ್ನು ಓಡಿಸಿದ್ದಾರೆ ಎಂದು ವಿಷ್ಣು ನಾಯಕ್ ತಿಳಿಸಿದ್ದಾರೆ.

ರಾಮಾಯಣ ಕಾಲದಲ್ಲಿ ಲಕ್ಷಣನ‌ ಪ್ರಾಣ ಉಳಿಸಲು ಸಂಜೀವಿನಿ ಪರ್ವತ ತೆಗೆದುಕೊಂಡು ಹೋಗುವ ವೇಳೆಯಲ್ಲಿ, ಕಪ್ಪತ್ತಗುಡ್ಡದಲ್ಲಿ ಒಂದು ಬಾಗ ಗುಡ್ಡ ಬಿದ್ದಿದೆ ಹೀಗಾಗಿ ಇದಕ್ಕೆ ಸಂಜೀವಿನಿ ಗುಡ್ಡ ಅಂತಾ ಹೆಸರು ಬಂದಿದೆ ಅಂತಾರೆ ಸ್ಥಳೀಯರು.. ಹೀಗಾಗಿ ಕಪ್ಪತ್ತಗುಡ್ಡದ ‌ಅಪಾರ ಪ್ರಮಾಣದ ವನಸ್ಪತಿ ಸಸ್ಯ ಸಂಪತ್ತು ಇರೋದು ಇದಕ್ಕೆ ಪುಷ್ಟಿ ನೀಡ್ತಾಯಿದೆ.. ಹೀಗಾಗಿ ಕಪ್ಪತ್ತಗುಡ್ಡದ ಮದ್ಯದಲ್ಲಿ ಇರೋ ಈ ಸಂಜೀವಿನಿ ಗುಡಕ್ಕೆ ತನ್ನದೆಯಾದ ಇತಿಹಾಸ ಇದೆ.. ಒಟ್ಟಿನಲ್ಲಿ ಕಪ್ಪತ್ತಗುಡ್ಡದಲ್ಲಿ ಅಪಾರ ಚಿನ್ನವಿದೆ. ಆದ್ರೆ, ಈವಾಗ ಸಂಜೀವಿನಿ ಗುಡ್ಡ ಮತ್ತೊಂದು ರೋಚಕ ರಹಸ್ಯ ಬಯಲಾಗಿದ್ದು, ಕೌತುಕ ಹೆಚ್ಚಳವಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande