ವಿಭಿನ್ನ ರುಚಿಯ ಸೌತೆಕಾಯಿ ಇಡ್ಲಿ
ಹುಬ್ಬಳ್ಳಿ, 29 ಜನವರಿ (ಹಿ.ಸ.) : ಆ್ಯಂಕರ್ : ಇಡ್ಲಿ ದಕ್ಷಿಣ ಭಾರತದ ಮನೆಮಾತಿನ ಉಪಾಹಾರ. ಸಾಮಾನ್ಯವಾಗಿ ಇಡ್ಲಿ ಎಂದರೆ ಉದ್ದಿನ ಬೇಳೆ–ಅಕ್ಕಿ ಹಿಟ್ಟಿನ ಇಡ್ಲಿಯೇ ನೆನಪಿಗೆ ಬರುತ್ತದೆ. ಆದರೆ ಆರೋಗ್ಯಕರವಾಗಿಯೂ, ವಿಭಿನ್ನ ರುಚಿಯಲ್ಲಿಯೂ ಇಡ್ಲಿ ತಯಾರಿಸಬಹುದು. ಅಂಥದೇ ಒಂದು ಹೊಸ ಪ್ರಯೋಗವೇ ಸೌತೆಕಾಯಿ ಇಡ
Idli


ಹುಬ್ಬಳ್ಳಿ, 29 ಜನವರಿ (ಹಿ.ಸ.) :

ಆ್ಯಂಕರ್ : ಇಡ್ಲಿ ದಕ್ಷಿಣ ಭಾರತದ ಮನೆಮಾತಿನ ಉಪಾಹಾರ. ಸಾಮಾನ್ಯವಾಗಿ ಇಡ್ಲಿ ಎಂದರೆ ಉದ್ದಿನ ಬೇಳೆ–ಅಕ್ಕಿ ಹಿಟ್ಟಿನ ಇಡ್ಲಿಯೇ ನೆನಪಿಗೆ ಬರುತ್ತದೆ. ಆದರೆ ಆರೋಗ್ಯಕರವಾಗಿಯೂ, ವಿಭಿನ್ನ ರುಚಿಯಲ್ಲಿಯೂ ಇಡ್ಲಿ ತಯಾರಿಸಬಹುದು. ಅಂಥದೇ ಒಂದು ಹೊಸ ಪ್ರಯೋಗವೇ ಸೌತೆಕಾಯಿ ಇಡ್ಲಿ. ಸುಲಭವಾಗಿ ತಯಾರಿಸಬಹುದಾದ ಈ ಇಡ್ಲಿ ರುಚಿಯ ಜೊತೆಗೆ ಪೋಷಕಾಂಶಗಳನ್ನೂ ಒಳಗೊಂಡಿದೆ.

ಬೇಕಾಗುವ ಸಾಮಗ್ರಿಗಳು

ಸೌತೆಕಾಯಿ, ಚಿರೋಟಿ ರವೆ, ತೆಂಗಿನಕಾಯಿ ತುರಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಗೂ ಅಗತ್ಯವಿರುವಷ್ಟು ನೀರು.

ತಯಾರಿಸುವ ವಿಧಾನ

ಮೊದಲು ಸೌತೆಕಾಯಿಯನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ತುರಿದುಕೊಳ್ಳಬೇಕು. ಇದಕ್ಕೆ ಚಿರೋಟಿ ರವೆ ಸೇರಿಸಿ ಚೆನ್ನಾಗಿ ಕಲಸಿ ಸ್ವಲ್ಪ ಹೊತ್ತು ನೆನೆಸಿಡಬೇಕು.

ನಂತರ ಮಿಕ್ಸರ್ ಜಾರಿಗೆ ತೆಂಗಿನಕಾಯಿ ತುರಿ ಹಾಗೂ ಹಸಿರು ಮೆಣಸಿನಕಾಯಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ಮಿಶ್ರಣವನ್ನು ಸೌತೆಕಾಯಿ–ರವೆ ಮಿಶ್ರಣಕ್ಕೆ ಸೇರಿಸಿ, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಬೇಕು.

ಅಗತ್ಯವಿದ್ದಷ್ಟು ನೀರು ಸೇರಿಸಿ ಇಡ್ಲಿ ಹಿಟ್ಟಿನ ದಟ್ಟತೆಯ ಮಿಶ್ರಣ ತಯಾರಿಸಬೇಕು. ಬಳಿಕ ಇಡ್ಲಿ ಪಾತ್ರೆಯಲ್ಲಿ ಹಿಟ್ಟನ್ನು ಹಾಕಿ ಸಾಮಾನ್ಯ ಇಡ್ಲಿಯಂತೆ ಬೇಯಿಸಬೇಕು.

ಚಟ್ನಿ ಅಥವಾ ಸಾಂಬಾರ್ ಜೊತೆ ಬಿಸಿ ಬಿಸಿಯಾದ ಸೌತೆಕಾಯಿ ಇಡ್ಲಿ ಸವಿದರೆ ದಿನದ ಆರಂಭವೇ ಖುಷಿಕರವಾಗುತ್ತದೆ.

ಆರೋಗ್ಯ ಮತ್ತು ರುಚಿಯನ್ನು ಒಟ್ಟಿಗೆ ನೀಡುವ ಈ ಸೌತೆಕಾಯಿ ಇಡ್ಲಿ, ವಿಶೇಷ ಉಪಾಹಾರಕ್ಕೆ ಉತ್ತಮ ಆಯ್ಕೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande