ಸಿಂಧನೂರು : ಅದ್ದೂರಿಯಾಗಿ ನಡೆದ ವಳಬಳ್ಳಾರಿ ಚನ್ನಬಸವೇಶ್ವರ ರಥೋತ್ಸವ
ಸಿಂಧನೂರು, 04 ಫೆಬ್ರವರಿ (ಹಿ.ಸ.) : ಆ್ಯಂಕರ್ : ಸಿಂಧನೂರು ತಾಲೂಕಿನ ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಲಿಂ. ಚನ್ನಬಸವ ಶಿವಯೋಗಿಗಳವರ 42ನೇ ಜಾತ್ರ ಅಂಗವಾಗಿ ಭಕ್ತ ಸಾಗರದ ನಡುವೆ ಮಂಗಳವಾರ ಸಂಜೆ ಜನಸಾಗರ ಮಧ್ಯೆ ಅದ್ದೂರಿ ರಥೋತ್ಸವ ನಡೆಯಿತು. ಬೆಳಗ್ಗೆ ಲಿಂ.ಚನ್ನಬಸವ ಶಿವಯೋಗಿಯ ಕತೃ ಗದ್ದುಗೆ ರುದ
ಸಿಂಧನೂರು: ಅದ್ದೂರಿಯಾಗಿ ನಡೆದ ವಳಬಳ್ಳಾರಿ ಚನ್ನಬಸವೇಶ್ವರ ರಥೋತ್ಸವ


ಸಿಂಧನೂರು, 04 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಸಿಂಧನೂರು ತಾಲೂಕಿನ ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಲಿಂ. ಚನ್ನಬಸವ ಶಿವಯೋಗಿಗಳವರ 42ನೇ ಜಾತ್ರ ಅಂಗವಾಗಿ ಭಕ್ತ ಸಾಗರದ ನಡುವೆ ಮಂಗಳವಾರ ಸಂಜೆ ಜನಸಾಗರ ಮಧ್ಯೆ ಅದ್ದೂರಿ ರಥೋತ್ಸವ ನಡೆಯಿತು.

ಬೆಳಗ್ಗೆ ಲಿಂ.ಚನ್ನಬಸವ ಶಿವಯೋಗಿಯ ಕತೃ ಗದ್ದುಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಬೆಳಗ್ಗೆ ಸ್ವರಪ್ರವಚನ ಸೇರಿದಂತೆ ಅನೇಕ ಕಾರ್ಯಕ್ರಮ ನಡೆದವು. ಕಲ್ಯಾಣ ಕರ್ನಾಟಕ ಭಾಗದ ನಾನಾ ಕಡೆಯಿಂದ ಭಕ್ತರು ಜಾತ್ರೆಗೆ ಆಗಮಿಸಿದ್ದರು.

ರಥ ಮುಂದಕ್ಕುರುಳಿತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಮಹಾರಥೋತ್ಸವದ ಬಳಿಕ ಮುಖ್ಯವೇದಿಕೆಯಲ್ಲಿ ಧರ್ಮಸಭೆ ನಡೆಯಿತು.

ಶ್ರೀಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ನೇತೃತ್ವದಲ್ಲಿ ಬಳ್ಳಾರಿ, ಹೊಸಪೇಟೆ, ಹಾಲಕೇರಿಯ ಕೊಟ್ಟೂರೇಶ್ವರ ಸಂಸ್ಥಾನಮಠದ ಜಗದ್ಗುರು ಬಸವಲಿಂಗ ಮಹಾಸ್ವಾಮಿಗಳು ಸನ್ನಿಧಾನವಹಿಸಿದ್ದರು.

ನಂದವಾಡಗಿ ಅಳಂದ ಶ್ರೀ ಮಹಾಂತಲಿಮನಗ ಶಿವಾಚಾರ್ಯರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ಹಡಗಲಿ ನಿಡಗುಂದಿಯ ಶ್ರೀ ರುದ್ರಮುನಿ ಶಿವಾಚಾರ್ಯ, ಮಸ್ಕಿ ಗಚ್ಚಿನ ಮಠ ವರರುದ್ರಮುನಿ ಶಿವಾಚಾರ್ಯರು, ಅಡವಿ ಅಮರೇಶ್ವರದ ಶ್ರೀ ಶಾಂತಮಲ್ಲ ಶಿವಾಚಾರ್ಯರು, ಯದ್ದಲದೊಡ್ಡಿ ವಿರಕ್ತಮಠದ ಶ್ರೀ ಮಹಾಲಿಂಗ ಮಹಾಸ್ವಾಮೀಜಿ, ಘನಮಠ ಸಂತೆಕಲ್ಲೂರಿನ ಶ್ರೀ ಗುರುಬಸವ ಮಹಾಸ್ವಾಮಿ, ಕರೇಗುಡ್ಡ ಮಹಾಂತ ಸ್ವಾಮೀಜಿ, ಪಂಚಮ ಸಿದ್ಧಲಿಂಗ ಸ್ವಾಮೀಜಿ, ಬೈಲಹೊಂಗಲ ಪ್ರಭುನೀಲಕಂಠ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಸಿದ್ದಬಸವ ಸ್ವಾಮೀಜಿ, ಮೈಸೂರು ನಿರಂಜನ ದೇವರು, ಬನವಾಸಿ ಶಿವಲಿಂಗ ಸ್ವಾಮೀಜಿ, ಶ್ರೀಮಠದ ಕಿರಿಯ ಸ್ವಾಮೀಜಿ ಬಸವಲಿಂಗ ಮಹಾಸ್ವಾಮಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಶಾಸಕ ಹಂಪನಗೌಡ, ಎಂಎಲ್ ಸಿ ಬಸನಗೌಡ ಬಾದರ್ಲಿ, ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ, ಕೆಓಎಫ್ ರಾಜ್ಯಾಧ್ಯಕ್ಷ ವೆಂಕಟರಾವ್ ನಾಡಗೌಡ, ಸಿರುಗುಪ್ಪಾ ಮಾಜಿ ಶಾಸಕ ಚಂದ್ರಶೇಖರಯ್ಯ, ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಜಿ.ಪಂ.ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ರಾಜ್ಯ ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ್, ಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಟಿಎಪಿಸಿಎಂಎಸ್ ನ ಅಧ್ಯಕ್ಷ ಶರಣಪ್ಪ ರಡ್ಡೇರ್ ಕೆ.ಜೊಸಳ್ಳಿ, ಮಾಜಿ ಅಧ್ಯಕ್ಷರಾದ ಮಲ್ಲನಗೌಡ ಬಾದರ್ಲಿ, ವೆಂಕಟರೆಡ್ಡಿ ಗಾಳಿ, ಮುಖಂಡರಾದ ದೊಡ್ಡಬಸನಗೌಡ ಬಾದರ್ಲಿ, ಉದಯಗೌಡ ಶರಣಪ್ಪ ತೆಂಗಿನಕಾಯಿ, ಸೂಗೂರಯ್ಯಸ್ವಾಮಿ, ಸತ್ಯನಗೌಡ ವಳಬಳ್ಳಾರಿ ಸೇರಿದಂತೆ ಅನೇಕರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande