ಬಳ್ಳಾರಿ : ತನಿಖೆ ನೆಪದಲ್ಲಿ ಪೊಲೀಸರ ಕಿರುಕುಳ ; ಜಿಲ್ಲಾಡಳಿತಕ್ಕೆ ಮನವಿ
ಬಳ್ಳಾರಿ, 04 ಫೆಬ್ರವರಿ (ಹಿ.ಸ.) : ಆ್ಯಂಕರ್ : ಚಿನ್ನ, ಬೆಳ್ಳಿ ಆಭರಣಗಳ ಕಳವು ಪ್ರಕರಣಗಳ ತನಿಖೆಯಲ್ಲಿ ಪೊಲೀಸರು ಬೆಳ್ಳಿ - ಬಂಗಾರದ ಆಭರಣಗಳ ಕೆಲಸಗಾರರನ್ನು ಗುರಿ ಮಾಡಿಕೊಂಡು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಚಿನ್ನ ಮತ್ತು ಬೆಳ್ಳಿ ಕೆಲಸಗಾರರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸೋಮವಾರ
ಬಳ್ಳಾರಿ : ತನಿಖೆ ನೆಪದಲ್ಲಿ ಪೊಲೀಸರ ಕಿರುಕುಳ : ಜಿಲ್ಲಾಡಳಿತಕ್ಕೆ ಮನವಿ


ಬಳ್ಳಾರಿ, 04 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಚಿನ್ನ, ಬೆಳ್ಳಿ ಆಭರಣಗಳ ಕಳವು ಪ್ರಕರಣಗಳ ತನಿಖೆಯಲ್ಲಿ ಪೊಲೀಸರು ಬೆಳ್ಳಿ - ಬಂಗಾರದ ಆಭರಣಗಳ ಕೆಲಸಗಾರರನ್ನು ಗುರಿ ಮಾಡಿಕೊಂಡು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಚಿನ್ನ ಮತ್ತು ಬೆಳ್ಳಿ ಕೆಲಸಗಾರರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸೋಮವಾರದಿಂದ ನಡೆಸಿದ್ದ ಎರೆಡು ದಿನಗಳ ಧರಣಿ ಸತ್ಯಾಗ್ರಹವು ಮಂಗಳವಾರ ಸಮಾರೋಪಗೊಂಡಿತು.

ಪ್ರತಿಭಟನಾಕಾರರ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಬಿ. ಶ್ರೀರಾಮುಲು ಅವರು, ಸುದ್ದಿಗಾರರ ಜೊತೆ ಮಾತನಾಡಿ, ಕಳ್ಳತನ ಮಾಡಿರುವ ಆರೋಪಿಗಳ ಮೌಖಿಕ ಹೇಳಿಕೆಗಳನ್ನು ಆಧರಿಸಿ, ತಮ್ಮನ್ನು ತನಿಖೆಗಾಗಿ ಪೊಲೀಸ್ ಠಾಣೆಗಳಿಗೆ ಕರೆಯುವ ಪೊಲೀಸರು, ವಿಚಾರಣೆಯ ನೆಪದಲ್ಲಿ ತಮ್ಮನ್ನು ಬೆದರಿಸಿ - ಹಿಂಸಿಸಿ, ವ್ಯಾಪಾರ ಮತ್ತು ವ್ಯಾಪಾರಿಗಳ ಕುರಿತು ಅವ್ಯಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ಪೊಲೀಸರು ತನಿಖೆ ನಡೆಸಲು ನಾವು ಸಂಪೂರ್ಣ ಸಹಕಾರ ನೀಡುತ್ತೇವೆ, ಆದರೆ, ತನಿಖೆಯ ಹೆಸರಲ್ಲಿ ಪೊಲೀಸರು ನೀಡುವ ಹಿಂಸೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು ಚಿನ್ನ - ಬೆಳ್ಳಿ ಆಭರಣಗಳ ತಯಾರಿಕರಿಗೆ ವಿನಾಕಾರಣ ಕಿರುಕುಳ ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು. ಜಿಲ್ಲಾಧಿಕಾರಿಗಳ ಮೂಲಕ ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande