
ಬಳ್ಳಾರಿ, 30 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಇಂದಿನ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣದ ಭರಾಟೆ ನಡುವೆಯು ಮುದ್ರಣ ಮಾಧ್ಯಮದ ಪತ್ರಿಕೆಗಳ ಪ್ರಸರಣ ಸಂಖ್ಯೆ ಹೆಚ್ಚಳವಾಗುತ್ತಿವೆ. ಸಮಾಜದಲ್ಲಿ ಅನ್ಯಾಯ ಕಷ್ಟ ಕಾರ್ಪಣ್ಯಗಳನ್ನು ತಿಳಿಸುವಲ್ಲಿ ಪತ್ರಿಕೆಗಳ ಪಾತ್ರ ಅಪಾರ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಎನ್ ಹೊಸಮನೆ ಅಭಿಪ್ರಾಯಪಟ್ಟರು.
ನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಂಡಿದ್ದ ರವಿ ವೀರಾಪುರ್ ಅವರ ಸಾರಥ್ಯದಲ್ಲಿ ಕಳೆದ 4 ವರ್ಷಗಳಿಂದ ಮೂಡಿ ಬರುತ್ತಿರುವ ಹೆಮ್ಮೆಯ ‘ಸುವರ್ಣ ವಾಹಿನಿ’ ಕನ್ನಡ ದಿನಪತ್ರಿಕೆ 4ನೇ ವರ್ಷದ ವಾರ್ಷಿಕ ಸಂಭ್ರಮ ಮತ್ತು 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಪತ್ರಕರ್ತರ ಮೇಲೆ ಸಾಮಾಜಿಕ ಜವಾಬ್ದಾರಿ ಸಾಕಷ್ಟಿದೆ, ಅದನ್ನು ಸಮರ್ಥವಾಗಿ ನಿಭಾಯಿಸಬೇಕು. ಸುಳ್ಳು-ಸುದ್ದಿ ಬೇಗ ಹೊರಬರಲಿದೆ. ಆದರೆ, ಸತ್ಯ ಹೊರ ಬಂದಾಗ ಯಾರಿಗೂ ಗೊತ್ತೇ ಆಗೋಲ್ಲ. ಆದಷ್ಟು ಸುಳ್ಳು ಸುದ್ದಿಯನ್ನು ಕೈಬಿಟ್ಟು, ವಸ್ತು ನಿಷ್ಠೆಯ ವರದಿಗಳನ್ನು ಸಮಾಜಕ್ಕೆ ನೀಡುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಪತ್ರಿಕೆಯ ಸಂಪಾದಕರಾದ ವಿ ರವಿ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಅವರು ಯಾವುದೇ ಸುದ್ದಿಗಳನ್ನು ಕಳುಹಿಸಿದಾಗ ಪತ್ರಿಕೆಯಲ್ಲಿ ಮುದ್ರಿಸುವಂತಹ ಅಪಾರ ಕಾಳಜಿ ಉಳ್ಳವಂತವರು ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಸುವರ್ಣ ವಾಹಿನಿ ಪತ್ರಿಕೆ ಸಂಪಾದಕ ಎಲ್ಲರಿಗಿಂತ ವಿಭಿನ್ನ, ಅತ್ಯಂತ ಸರಳ ವ್ಯಕ್ತಿ, ಸುದ್ದಿ ವಿಚಾರದಲ್ಲಿ ಯಾರದ್ದು ಮುಲಾಜಿಯೇ ಇಡದೇ ವಸ್ತು ನಿಷ್ಠೆಗೆ ಆದ್ಯತೆ ನೀಡಿ ಇತರರಿಗೆ ಮಾದರಿಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ಬಳ್ಳಾರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ವರದಿ ಮಾಡಿ ಎಂದು ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ರಮೇಶ್ ಡಾ. ರಮೇಶ್ ಬಾಬು ಮಾತನಾಡಿ, 2025 ರಲ್ಲಿ ಅಪಘಾತ ಸೇರಿದಂತೆ ವಿವಿಧ ಘಟನೆಗಳನ್ನು ಕಂಡಿದ್ದು 2026 ಹೊಸ ವರ್ಷ ಎಲ್ಲರಿಗೂ ಉತ್ತಮ ಅವಕಾಶಗಳನ್ನು ನೀಡಲಿ ಅದೇ ರೀತಿಯಲ್ಲಿ ಎಲ್ಲರಿಗೂ ಒಳಿತಾಗಲಿ ಎಂದು ಶುಭ ಹಾರೈಸಿದರು.
ಬಳ್ಳಾರಿ ಜಿಲ್ಲಾ ಶಾಸ್ತ್ರ ಚಿಕಿತ್ಸಾ ತಜ್ಞ ಡಾ. ಎನ್ ಬಸ ರೆಡ್ಡಿ ಮಾತನಾಡಿ, ಸಮಾಜದ ಕಣ್ಣು ಕಿವಿ ಪತ್ರಕರ್ತರಾಗಿದ್ದು, ಸಮಾಜದ ಧ್ವನಿ ಯಾಗಬೇಕು ಕೆಟ್ಟ ವಿಷಯಗಳು ಸಮಾಜದಲ್ಲಿ ಬೇಗನೆ ಜನರ ಬಳಿ ಸೇರುತ್ತಿದ್ದು ಆದರೆ ಒಳ್ಳೆಯದು ಮಾತ್ರ ಸೇರಲು ವಿಳಂಬವಾಗುತ್ತಿವೆ. ಪ್ರತಿಯೊಬ್ಬರಿಗೂ ಕಾರ್ಯಕ್ರಮಗಳು ಹಾಗೂ ಮಾಹಿತಿಗಳು ತಲುಪಿಸುವಲ್ಲಿ ಪತ್ರಿಕೆಗಳ ಪಾತ್ರ ಅಪಾರ ಎಂದು ತಿಳಿಸಿದರು ಕೋವಿಡ್ ಸಮಯದಲ್ಲಿ ಪತ್ರಕರ್ತರರು ಸೇವೆ ನೀಡುವಲ್ಲಿ ಅವರ ಪ್ರಮುಖವಾದ ಅನನ್ಯ ಹಾಗೂ ಸಾರ್ವಜನಿಕರಿಗೆ ಧೈರ್ಯ ತುಂಬುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ ಎಂದರು.
ಸರಳಾದೇವಿ ಡಿಗ್ರಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಕೆ.ಬಸಪ್ಪ ಮಾತನಾಡಿ, 2001 ಅಕ್ಟೋಬರ್ ತಿಂಗಳು ವಿಜಯದಶಮಿ ದಿನದಂದು ಉದಯವಾದ ಸುವರ್ಣ ವಾಹಿನಿ ಕನ್ನಡ ದಿನಪತ್ರಿಕೆ ಇಂದು 4ನೇ ವರ್ಷಕ್ಕೆ ಕಾಲಿಟ್ಟಿದೆ, ಮುಂದಿನ ದಿನಗಳಲ್ಲಿ ಈ ಪತ್ರಿಕೆ ರಾಜ್ಯದ ಜನರ ಮನೆ ಮಾತಾಗಲಿ ಎಂದು ಶುಭ ಹಾರೈಸಿದರು. ನಾಡು-ನುಡಿಗಾಗಿ ಸುವರ್ಣ ವಾಹಿನಿ ಪತ್ರಿಕೆ ಕೆಲಸ ಮಾಡುತ್ತಾ ಬಂದಿದೆ. ಜನಪರ ನಡುವೆ ಕೆಲಸ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಗಣ್ಯರು ಪೋಸ್ಟರ್, ಕ್ಯಾಲೆಂಡರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕಾರ್ಯನಿರ್ದ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್ ವೀರಭದ್ರಗೌಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನರಸಿಂಹಮೂರ್ತಿ ಕುಲಕರ್ಣಿ, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಯಾಲ್ಪಿ ವಲಿ ಭಾಷಾ, , ಬಳ್ಳಾರಿ ಕಿರಣ ಪತ್ರಿಕೆಯ ಅಬೂಬಕರ್ ಸಿದ್ದೀಕ್ ಸೇರಿದಂತೆ ಹಲವಾರು ಜನ ವರದಿಗಾರರು, ಪತ್ರಕರ್ತರು, ವಿವಿಧ ಸಂಘ ಸoಸ್ಥೆಯ ಮುಖ್ಯಸ್ಥರು, ಮಖಂಡರು ಸೇರಿದಂತೆ ಇತರರಿದ್ದರು .
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ವೆಂಕಟೇಶ್ ದೇಸಾಯಿ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಪಿ.ರಘುರಾಮ್ ವಂದಿಸಿದರು. ಪತ್ರಕರ್ತ ಹೇಮಂತರಾಜ್ ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್