ಹಿಂದೂ ರಾಷ್ಟ್ರದ ಐತಿಹಾಸಿಕ ಅಸ್ಮಿತೆಯ ಕುರಿತು ಚರ್ಚೆ
ಗದಗ, 30 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಭಾರತ ದೇಶದ ಇತಿಹಾಸದ ಪುಟಗಳನ್ನು ಇತಿಹಾಸಕಾರರು ತಿರುವಿ ಹಾಕಿ ನೋಡಿದಾಗ, ಭಾರತವು ಹಿಂದೂ ರಾಷ್ಟ್ರ, ಹಿಂದೂಸ್ಥಾನ ಎಂಬ ಹೆಸರಿನಿಂದಲೇ ವಿಶ್ವಕ್ಕೆ ಪರಿಚಿತವಾಗಿರುವುದು ಸ್ಪಷ್ಟವಾಗುತ್ತದೆ. ಹೀಗಾಗಿ ಹಿಂದೂ ಎಂಬುದು ಕೇವಲ ಮತವಾಚಕವೂ ಅಲ್ಲ, ಧರ್ಮವಾಚಕವೂ ಅಲ್ಲ;
ಫೋಟೋ


ಗದಗ, 30 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭಾರತ ದೇಶದ ಇತಿಹಾಸದ ಪುಟಗಳನ್ನು ಇತಿಹಾಸಕಾರರು ತಿರುವಿ ಹಾಕಿ ನೋಡಿದಾಗ, ಭಾರತವು ಹಿಂದೂ ರಾಷ್ಟ್ರ, ಹಿಂದೂಸ್ಥಾನ ಎಂಬ ಹೆಸರಿನಿಂದಲೇ ವಿಶ್ವಕ್ಕೆ ಪರಿಚಿತವಾಗಿರುವುದು ಸ್ಪಷ್ಟವಾಗುತ್ತದೆ. ಹೀಗಾಗಿ ಹಿಂದೂ ಎಂಬುದು ಕೇವಲ ಮತವಾಚಕವೂ ಅಲ್ಲ, ಧರ್ಮವಾಚಕವೂ ಅಲ್ಲ; ಅದು ರಾಷ್ಟ್ರವಾಚಕ, ರಾಷ್ಟ್ರ ಸೂಚಕವಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಯೋಜಕರಾದ ಜಗದೀಶ ಕಾರಂತ ಹೇಳಿದರು.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನದಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಗುರುತಿಸುವುದಕ್ಕಿಂತ ಮುಂಚೆಯೇ ಜಗತ್ತು ಭಾರತವನ್ನು ಹಿಂದೂ ರಾಷ್ಟ್ರವೆಂದೇ ಗುರುತಿಸಿದೆ.

ದೇಶದ ವಿವಿಧ ಜಮಾತೆ ಇಸ್ಲಾಂ ಸಂಘಟನೆಗಳು ತಮ್ಮ ಹೆಸರನ್ನು ‘ಜಮಾತೆ ಇಸ್ಲಾಂ ಹಿಂದ್’ ಎಂದು ಕರೆಯುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.

ನಮ್ಮ ವಿರೋಧ ಇರುವುದು ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ನೆಲೆಸಿರುವವರ ಬಗ್ಗೆ ಮಾತ್ರ. ಅವರು ಮರಳಿ ತಮ್ಮ ದೇಶಕ್ಕೆ ತೆರಳಬೇಕು ಎನ್ನುವುದು ನಮ್ಮ ಸ್ಪಷ್ಟ ನಿಲುವಾಗಿದೆ. ಆರ್‌ಎಸ್‌ಎಸ್ ನೂರು ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ, ದೇಶದ ರಕ್ಷಣೆಯ ದೃಷ್ಟಿಯಿಂದ ಜಾತಿ–ಮತಗಳ ಭೇದಭಾವ ಮೀರಿ ಎಲ್ಲರೂ ಒಂದಾಗಿ ನಿಲ್ಲಬೇಕಾದ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮಾಜದಲ್ಲಿ ಸಮರಸವಾಗಿ ಬದುಕುವುದನ್ನು ಕಲಿತು, ಮುಂದಿನ ದಿನಗಳಲ್ಲಿ ದೇಶ ಎದುರಿಸಬಹುದಾದ ಅನೇಕ ಸವಾಲುಗಳನ್ನು ಒಟ್ಟಾಗಿ ಎದುರಿಸುವ ಮನೋಭಾವ ಬೆಳೆಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಸಂಜೀವ ರಿತ್ತಿ ಮಾಡಿದರು. ಭಾರತದ ಕಲ್ಯಾಣವೇ ಪ್ರಪಂಚದ ಕಲ್ಯಾಣ ಎಂಬ ತತ್ವದಡಿ ಹಿಂದೂ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಸಮ್ಮೇಳನದ ಅಂಗವಾಗಿ ದೇವಸ್ಥಾನದಿಂದ ವಿವಿಧ ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭಾರತಾಂಬೆಯ ಭಾವಚಿತ್ರವನ್ನು ಮುಂಚೂಣಿಯಲ್ಲಿ ಇಟ್ಟುಕೊಂಡು ಭವ್ಯ ಶೋಭಾಯಾತ್ರೆ ಜರುಗಿತು. ಶೋಭಾಯಾತ್ರೆಯಲ್ಲಿ ನೂರಾರು ಮಂದಿ ಪಾಲ್ಗೊಂಡು ಘೋಷಣೆಗಳನ್ನು ಕೂಗುತ್ತಾ ಸಮ್ಮೇಳನದ ಉತ್ಸಾಹವನ್ನು ಹೆಚ್ಚಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ, ಡಂಬಳ ಗ್ರಾಮ ಪಂಚಾಯತ್ ಅಧ್ಯಕ್ಷ ಅಂದಪ್ಪ ಹಾರೂಗೇರಿ, ಹಿಂದೂ ಸಮ್ಮೇಳನದ ಅಧ್ಯಕ್ಷ ಮಲ್ಲೇಶ ಮಠದ, ಉಪಾಧ್ಯಕ್ಷ ಹನುಮಪ್ಪ ಹಾದಿಮನಿ, ಬಾಬು ರಾಠೋಡ, ಡಿ. ಪ್ರಸಾದ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಹರ್ಲಾಪೂರದ ಡಾ. ಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಈ ವೇಳೆ ಮಾತನಾಡಿದ ಡಾ. ಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಒಂದು ಸಮಾಜವೆಂದರೆ ದ್ವಾರಬಾಗಿಲು ಇದ್ದಂತೆ. ಹಿಂದೂ ಸಮಾಜವು ಜಾತಿ–ಮತಗಳ ಭೇದವಿಲ್ಲದೆ ನಾವೆಲ್ಲ ಬಂಧುಗಳು ಎಂಬ ಭಾವನೆಯಿಂದ ಎಲ್ಲರನ್ನು ಅಪ್ಪಿಕೊಳ್ಳುವ ಸಂಸ್ಕೃತಿಯನ್ನು ಹೊಂದಿದೆ. ಜಾತ್ಯಾತೀತವಾಗಿ ಧೈರ್ಯದಿಂದ ಹಿಂದೂಗಳೆಂದು ಹೇಳಿಕೊಳ್ಳುವುದು ಅಗತ್ಯವಾಗಿದ್ದು, ಇದು ಸಮಾಜದಲ್ಲಿ ಭ್ರಾತೃತ್ವ ಮತ್ತು ಏಕತೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಸಮ್ಮೇಳನದಲ್ಲಿ ಕರಿಗಾರ, ನಾಗರಾಜ ಕಾಟ್ರಳ್ಳಿ, ಈಶ್ವರಗೌಡ ಪಾಟೀಲ, ಸಮಿತಿಯ ಪ್ರಮುಖರಾದ ಬೀರಪ್ಪ ಬಂಡಿ, ವೆಂಕನಗೌಡ ಪಾಟೀಲ, ಮುದಿಲಿಂಗಪ್ಪ ಕೊರ್ಲಹಳ್ಳಿ, ಕುಬೇರಪ್ಪ ಬಂಡಿ, ಕೃಷ್ಣ ಬಂಡಿ, ಪ್ರಭು ಕರಮುಡಿ, ದೇವಪ್ಪ ಇಟಗಿ, ಶರಣಪ್ಪ ಕೊಂಬಳಿ, ಮಹಾದೇವಪ್ಪ ತೋಟಪ್ಪನವರ, ಬಸವರಾಜ ಚನ್ನಳ್ಳಿ, ಪಕ್ಕಣನಗೌಡರ ರಡ್ಡೇರ, ರಮೇಶ ತುರಕಾಣಿ, ಪ್ರಕಾಶ ಕೋಂತಬ್ರಿ, ಶಿವಾನಂದ, ಪಾಂಡಪ್ಪ ರಾಠೋಡ, ಲಕ್ಷಣ ರಾಠೋಡ, ಬಸವಂತಪ್ಪ ಬಡಿಗೇರ, ಬಾಬಣ್ಣ ರಾಠೋಡ, ಸಿದ್ದನಗೌಡ ಪಾಟೀಲ, ನಿಂಗಣಗೌಡ ಹರ್ತಿ, ಮಂಜುನಾಥ ರಾಮೇನಳ್ಳಿ, ಈಶಪ್ಪ ರಂಗಪ್ಪನವರ, ಮಿತ್ತಯ್ಯಜ್ಜ ಹರ್ತಿಮಠ, ದೇವಪ್ಪ ಕಲಿವಾಳ, ವಾಸುದೇವ ಪಾಟೀಲ, ಮುದಕಪ್ಪ ಮುಳಗುಂದ, ಮುತ್ತು ಚಿನ್ನಪ್ಪಗೌಡರ, ಮಂಜುನಾಥ ಇಟಗಿ, ರವಿ ಕರಿಗಾರ, ಸೋಮಶೇಖರಯ್ಯ ಹಿರೇಮಠ, ಲಕ್ಷಣ ಬೂದಿಹಾಳ, ಯಲ್ಲಪ್ಪ ಮುದಗಣ್ಣನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande