ಕುವೆಂಪು ಜನ್ಮ ದಿನಾಚರಣೆಯ ಪ್ರಯುಕ್ತ ಕವನ ವಾಚನ ಸ್ಪರ್ಧೆ
ಕುವೆಂಪು ಜನ್ಮ ದಿನಾಚರಣೆಯ ಪ್ರಯುಕ್ತ ಕವನ ವಾಚನ ಸ್ಪರ್ಧೆ
ಕುವೆಂಪು ಜನ್ಮ ದಿನಾಚರಣೆಯ ಪ್ರಯುಕ್ತ ಕವನ ವಾಚನ ಸ್ಪರ್ಧೆ


ಕೋಲಾರ, ೩೦ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಕುವೆಂಪು ಜನ್ಮ ದಿನಾಚರಣೆಯ ಪ್ರಯುಕ್ತ ಜನವರಿ ೧೧ರಂದು ೨೦೨೬ರಂದು ಕೋಲಾರ ನಗರದ ನಚಿಕೇತನ ನಿಲಯದ ಬುದ್ದವಿಹಾರದಲ್ಲಿ ಯುವಕ, ಯುವತಿಯರಿಗೆ ಸ್ವಂತ ರಚಿಸಿರುವ ಕವಿತೆ ವಾಚನ ಮತ್ತು ಜನಪದ ಗೀತ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆಸಕ್ತ ಯುವಕ ಯುವತಿಯರು ಜನವರಿ ೧೦ ತಾರೀಖಿನೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾದಾನಕರ ಬಹುನವಿದ್ದು, ಭಾಗವಹಿಸಿದ ಎಲ್ಲಾ ಯುವಕ ಯುವತಿಯರಿಗೆ ಅಭಿನಂದನಾ ಪತ್ರವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಜನಪದ ಗಾಯಕ ಈನೆಲ ಈಜಲ ವೆಂಕಟಾಚಲಪತಿ ಮೊ. ೯೦೦೮೭೪೩೨೫೬, ಕುಡುವನಹಳ್ಳಿ ಗಣೇಶಪ್ಪ ಮೊ. ೯೪೪೯೪೦೪೮೭೩ ಸಂಪರ್ಕಿಸಲು ಕೋರಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande