ವಂಚನೆ ಕೊಲೆ ಆರೋಪಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
ವಂಚನೆ ಕೊಲೆ ಆರೋಪಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
ಡಾ.ಡಿ.ಎ.ಕಲ್ಪಜ


ಕೋಲಾರ, 30 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿಶ್ವವಿದ್ಯಾಲಯದ ಡಾಕ್ಟರೇಟ್‌ಗಳನ್ನು ಪಡೆಯಲು ಲಾಭಿ ನಡೆಸಬೇಕು. ಖಾಸಗಿ ವಿಶ್ವವಿದ್ಯಾಲಯಗಳು, ಕಾಸುಕೊಟ್ಟವರಿಗೆಲ್ಲಾ ಗೌರವ ಡಾಕ್ಟರೇಟ್ ನೀಡುತ್ತವೆ. ಇತರ ವಿಶ್ವವಿದ್ಯಾಲಯಗಳು ಒತ್ತಡಕ್ಕೆ ಮಣಿದು ಅನರ್ಹರಿಗೂ ಗೌರವ ಡಾಕ್ಟರೇಟ್ ನೀಡುತ್ತದೆ. ಕೋಲಾರದ ಉತ್ತರ ವಿಶ್ವವಿದ್ಯಾಲಯ ವಂಚನೆ, ಪೋರ್ಜರಿ ಹಾಗೂ ಕೊಲೆ ಆರೋಪ ಎದುರಿಸುತ್ತಿರುವ ಬೆಂಗಳೂರಿನ ವೈಟ್‌ಫೀಲ್ಡ್ ವೈದೇಹಿ ವೈದ್ಯಕೀಯ ಕಾಲೇಜಿನ ಅಧ್ಯಕ್ಷೆ ಡಾ. ಡಿ.ಎ.ಕಲ್ಪಜಾರವರಿಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ ವಿಶ್ವವಿದ್ಯಾಲಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ.

ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ನೀಡುತ್ತಿರುವ ಗೌರವ ಡಾಕ್ಟರೇಟ್‌ಗಳ ವಿಶ್ವಾರ್ಹತೆಯನ್ನು ಪ್ರಶ್ನಿಸುವಂತಾಗಿದೆ. ಹಣ ಬಲ ಮತ್ತು ರಾಜಕೀಯ ಪ್ರಭಾವ ಉಳ್ಳವರಿಗೆ ಡಾಕ್ಟರೇಟ್ ಪ್ರದಾನ ಮಾಡುವ ಪರಂಪರೆಯನ್ನು ವಿಶ್ವವಿದ್ಯಾಲಯ ಬೆಳೆಸಿಕೊಂಡು ಬಂದಿದೆ. ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಏಳು ವರ್ಷಗಳು ಕಳೆದಿವೆ. ಆದರೆ ವಿಶ್ವವಿದ್ಯಾಲಯ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದೆ. ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ರಾಜಕೀಯ ಪ್ರಭಾವಹೊಂದಿರುವ ಬೆಂಗಳೂರಿನ ವೈಟ್‌ಫೀಲ್ಡ್ನಲ್ಲಿರುವ ವೈದೇಹಿ ವೈದ್ಯಕೀಯ ಕಾಲೇಜಿನ ಅಧ್ಯಕ್ಷೆ ಡಾ.ಡಿ.ಏ ಕಲ್ಪಜಾರವರಿಗೆ ಕಳೆದ ೨೦೨೪ ರಲ್ಲಿ ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು. ಗೌರವ ಡಾಕ್ಟರೇಟ್ ಪ್ರದಾನ ಮಾಡಿದಾಗ ಆಕೆಯ ವಿರುಧ್ದ ಕೊಲೆ ಕ್ರಿಮಿನಲ್ ಸಂಚು ವಂಚನೆ ಹಾಗು ಸಾಕ್ಷಾಧಾರಗಳನ್ನು ನಾಶಪಡಿಸಿದ ಗುರುತರ ಆರೋಪಗಳಿದ್ದವು.

ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆಗೆ ಸಂಚು ಮಾಡಿದ ಆರೋಪದ ಮೇಲೆ ಅವರ ವಿರುಧ್ದ ಬೆಂಗಳೂರಿನ ಸಿ.ಬಿಐನಲ್ಲಿ ೨೦೨೨ರಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ವೈದ್ಯಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ವಿಶಿಷ್ಠ ಸೇವೆಯನ್ನು ಗುರುತಿಸಿ ಗೌರವ ಡಾ.ಕ್ಟರೇಟ್ ನೀಡುತ್ತಿರುವುದಾಗಿ ವಿಶ್ವವಿದ್ಯಾಲಯ ಸಮರ್ಥಿಸಿಕೊಂಡಿತ್ತು. ಡಾ.ಡಿ.ಎ.ಕಲ್ಪಜ ಚಿತ್ತೂರಿನ ಸಂಸತ್ ಸದಸ್ಯರಾಗಿದ್ದ ಆದಿಕೇಶವಲು ನಾಯ್ಡು ರವರ ಪುತ್ರಿಯಾಗಿದ್ದಾರೆ. ಆದಿಕೇಶವಲು ನಾಯ್ಡು ಕರ್ನಾಟಕ ಮತ್ತು ಆಂದ್ರ ಪ್ರದೇಶದಲ್ಲಿ ಉದ್ಯಮಿ ಹಾಗು ರಾಜಕಾರಣಿಯಾಗಿದ್ವರು. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಹಾಗು ವೈದೇಹಿ ಸಮೂಹ ವೈದ್ಯಕೀಯ ಸಂಸ್ಥೆಗಳನ್ನು ನಡೆಸುತ್ತಿದ್ದರು. ಅವರ ನಿಧನದನಂತರ ಪುತ್ರಿ ಡಾ.ಡಿ.ಎ.ಕಲ್ಪಜ ವೈದೇಹಿ ವೈದ್ಯಕೀಯ ಸಂಸ್ಥೆಗಳ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಆದಿಕೇಶವಲು ನಾಯ್ಡು ರವರು ಜೀವಂತವಾಗಿದ್ದಾಗ ಬೇನಾಮಿ ಹೆಸರಗಳಲ್ಲಿ ಬೆಂಗಳೂರಿನಲ್ಲಿ ಆಸ್ಥಿಗಳನ್ನು ಖರೀದಿ ಮಾಡಿದ್ದರು. ಅವರ ನಿಕಟವರ್ತಿಯಾಗಿದ್ದ ಮತ್ತೊಬ್ಬ ರಿಯಲ್ ಎಸ್ಟೇಟ್ ಉದ್ಯಮಿ ರಘುನಾಥ್ ಎಂಬುವರ ಹೆಸರಿನಲ್ಲಿ ತೆರಿಗೆ ವಂಚನೆ ಮಾಡುವ ಉಧ್ಧೇಶದಿಂದ ಆಸ್ಥಿ ಖರೀದಿ ಮಾಡಿದ್ದರು. ಆದಿಕೇಶವಲು ನಿಧನದನಂತರ ಬೇನಾಮಿ ಆಸ್ಥಿ ಹಿಂತುರುಗಿಸುವ0ತೆ ರಘುವರ ಮೇಲೆ ಒತ್ತಡ ಹೇರಲಾಗಿತ್ತು. ಆದಿಕೇಶವಲು ಕುಟುಂಬದ ಒತ್ತಡಕ್ಕೆ ಮಣಿಯದ ರಘುನಾಥ್ ಆಸ್ಥಿ ಹಿಂತುರುಗಿಸಲು ನಿರಾಕರಿಸಿದರು. ಇದರಿಂದ ಕುಪಿತಗೊಂಡ ಆದಿಕೇಶವಲು ನಾಯ್ಡುರವರ ಪುತ್ರ ಡಿ.ಎ.ಶ್ರೀನಿವಾಸ್ ಹಾಗು ಅವರ ಸೋದರಿ ಡಾ.ಡಿ.ಎ.ಕಲ್ಪಜ ಹಾಗು ಇತರರು ಸೇರಿ ಕಳೆದ ೪ ಮೇ ೨೦೧೯ ರಂದು ಬೆಂಗಳೂರಿನ ವೈಟ್ ಫೀಲ್ಡ್ನಲ್ಲಿರುವ ಆದಿಕೇಶವಲು ಕುಟುಂಬಕ್ಕೆ ಸೇರಿದ ಅತಿಥಿ ಗೃಹಕ್ಕೆ ರಿಯಲ್ ಎಸ್ಟೇಟ್ ಉದ್ಯಮಿ ರಘುರವರನ್ನು ಕರೆಸಿಕೊಂಡು ಆಸ್ಥಿ ಹಿಂತುರುಗಿಸುವ0ತೆ ಒತ್ತಡ ಹೇರಿದ್ದರು.ರಘು ನಿರಾಕರಣೆ ಮಾಡಿದ ಕಾರಣ ಅವರನ್ನು ಕೊಲೆ ಮಾಡಲಾಗಿತ್ತು. ಆದರೆ ಹೆಚ್.ಎ.ಎಲ್ ಪೋಲೀಸರು ಇದೊಂದು ಆತ್ಮಹತ್ಯೆ ಸಾವು ಎಂಬ ನಿರ್ಣಯಕ್ಕೆ ಬಂದು ಕೊಲೆ ತನಿಖೆಯನ್ನು ಸಮಾಪ್ತಿಗೊಳಿಸಿದ್ದರು. ರಾಜಕೀಯ ಮತ್ತು ಹಣದ ಆಮಿಷದಿಂದ ತನಿಖೆ ನಡೆಸದೆ ಪೋಲೀಸರು ಕೊಲೆ ಪ್ರಕರಣವನ್ನು ಮುಚ್ಚಿಹಾಕಿದ್ದರು. ಮೃತ ರಘುರವರ ಪತ್ನಿ ಮಂಜುಳ ಅನುಮಾನಗೊಂಡು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ವೈಟ್‌ಫೀಲ್ಡ್ ಪೋಲೀಸರು ನಿಷ್ಪಕ್ಷಪಾತದಿಂದ ತನಿಖೆ ನಡೆಸಿಲ್ಲ. ಕೊಲೆ ನಡೆದಿದ್ದರು ಸಹ ಅಸಹಜ ಸಾವು ಎಂಬುವ0ತೆ ಬಿಂಬಿಸಿದ್ದಾರೆ. ಸ್ಥಳೀಯ ಪೋಲೀಸರು ಪ್ರಭಾವಕ್ಕೆ ಮಣಿದಿದ್ದಾರೆ. ತನಿಖೆಯನ್ನು ಸಿ.ಬಿ.ಐ.ಗೆ ಒಪಪ್ಪಿಸುವಂತೆ ಕೋರಿ ರಿಟ್ ಅರ್ಜಿಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಸಿದ ಹೈಕೋರ್ಟ್ ಸಿ.ಬಿ.ಐ ತನಿಖೆಗೆ ಆದೇಶಮಾಡಿತ್ತು. ಹೈಕೋರ್ಟ್ ಆದೇಶದ ವಿರುದ್ದ ಡಿ.ಎ.ಶ್ರೀನಿವಾಸಲು ಹಾಗೂ ಅವರ ಸೋದರಿ ಡಿ.ಎ. ಡಾ. ಕಲ್ಪಜ ಸುಪ್ರಿಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ಏಪ್ರಿಲ್ ತಿಂಗಳಿನಲ್ಲಿ ಸುಪ್ರಿಂ ಕೋರ್ಟ್ ಮೇಲ್ಮನವಿಯನ್ನು ತಿರಸ್ಕರಿಸಿ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯಿತು. ಹೈಕೋರ್ಟ್ ನಿರ್ದೇಶನದ ಮೇರೆಗೆ ಸಿ .ಬಿ.ಐ ತನಿಖೆಯನ್ನು ಆರಂಭಿಸಿತು. ಕೊಲೆ ,ಕೊಲೆಗೆ ಸಂಚು ಮತ್ತು ಸಾಕ್ಷಾಧಾರಗಳನ್ನು ನಾಶಪಡಿಸಿದ ಆರೋಪದ ಮೇಲೆ ಡಿಸೆಂಬರ್ ೨೨ ರಂದು ಡಿ.ಎ.ಶ್ರೀನಿವಾಸ್ ಅವರ ಸೋದರಿ ಡಾ.ಡಿ.ಎ ಕಲ್ಪಜ ಹಾಗು ವೈಟ್‌ಫಿಲ್ಡ್ನಲ್ಲಿ ಪೋಲೀಸ್ ಅಧಿಕಾರಿಯಾಗಿದ್ದ ಎಸ್ .ಎ.ಮೋಹನ್‌ರವರನ್ನು ಸಿ.ಬಿ.ಐ.ಪೋಲೀಸರು ಬಂಧಿಸಿದ್ದಾರೆ.

ಬಂಧಿತ ಪೋಲೀಸ್ ಅಧಿಕಾರಿ ಮೋಹನ್ ಕೋಲಾರದ ಮೂಲದವರಾಗಿದ್ದು ರಾಜ್ಯ ಮಾನವ ಹಕ್ಕುಗಳ ಡಿ.ವೈ.ಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಕೋಲಾರ ಟೌನ್ ಪೋಲೀಸ್ ಠಾಣೆಯಲ್ಲಿ ಅಧಿಕಾರಿಯಾಗಿದ್ದಾಗ ಮೋಹನ್ ರೈಸ್ ಪುಲ್ಲಿಂಗ್ ಕೇಸ್‌ನಲ್ಲಿ ಆರೋಪಿಯಿಂದ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಅಮಾನತ್ತುಗೊಂಡಿದ್ದರು.ಅವರ ತಂದೆ ಯಲ್ಲಪ್ಪ ಕೋಲಾರ ತಾಲ್ಲೂಕಿನ ಶಿಲ್ಲಂಗರೆ ಗ್ರಾಮದಲ್ಲಿ ನಡೆದ ಕೊಲೆ ಕೇಸ್‌ನಲ್ಲಿ ಬಂಧಿತರಾಗಿದ್ದರು. ಉದ್ಯಮಿ ಆದಿಕೇಶವಲು ಕಳೆದ ೨೦೧೩ ರಲ್ಲಿ ಮೃತಪಟ್ಟಿದ್ದರು.ಆನಂತರ ಆರೋಪಿಗಳಾದ ಡಿ.ಎ.ಶ್ರೀನಿವಾಸ್ ಹಾಗು ಅವರ ಸೋದರಿ ಡಿ.ಎ. ಡಾ.ಕಲ್ಪಜ ಕೆ.ರಘುನಾಥ್ ತಮ್ಮ ತಂದೆಯ ಹಣದಿಂದ ರಘುನಾಥ್ ಆಸ್ಥಿ ಖರೀದಿ ಮಾಡಿದ್ದು ವಾಪಸ್ ನೀಡುವಂತೆ ಒತ್ತಾಯ ಮಾಡುತ್ತಿದ್ದರು.ಆದರೆ ರಘುನಾಥ್ ಆಸ್ಥಿ ವಾಪಸ್ ನೀಡಲು ನಿರಾಕರಿಸಿದ್ದರು. ರಘುನಾಥ್ ಜೀವಂತವಿರುವಾಗ ಆಸ್ಥಿಯ ವಿಲ್ ತಮ್ಮ ಪತ್ನಿಯ ಹೆಸರಿಗೆ ಬರೆದಿದ್ದರು. ಆರೋಪಿಗಳು ರಘುನಾಥ್‌ರವರನ್ನು ವೈಟ್‌ಫಿಲ್ಡ್ನಲ್ಲಿರುವ ಅತಿಥಿ ಗೃಹಕ್ಕೆ ಕರೆಸಿಕೊಂಡು ಕೂಡಿ ಹಾಕಿ ಕೊಲೆ ಮಾಡಿದ್ದರು.ಸೀಲಿಂಗ್ ಫಾನ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸೃಷ್ಠಿ ಮಾಡಿದ್ದರು. ರಘುನಾಥ್ ಹೆಸರಿನಲ್ಲಿದ್ದ ಆಸ್ಥಿಗೆ ಧಾಖಲೆಗಳನ್ನು ಸೃಷ್ಢಿ ಮಾಡಿದ್ದರು. ಸರ್ಕಾರಿ ಸೀಲ್ ಸ್ಟಾಂಪ್ ಪೇಪರ್ ಸೇರಿದಂತೆ ಧಾಖಲೆಗಳನ್ನು ಸೃಷ್ಠಿ ಮಾಡಿದ್ದರು. ಡಿ.ವೈ.ಎಸ್ಪಿ ಎಸ್.ವೈ ಮೋಹನ್ ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದ. ಡಿ.ಎ.ಕಲ್ಪಜ ವಿರುಧ್ಧ ಸಿ.ಬಿ.ಐ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದರು ಸಹ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಪೂರ್ವಾಪರಗಳನ್ನು ಪರಿಶೀಲಿಸದೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಕಳೆದ ೨೦೦೨೪ರಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ಗಳನ್ನು ಪ್ರಕಟಿಸಿದಾಗ ಪತ್ರರ್ಕರು ವಿವರಗಳನ್ನು ಕೇಳಿದಾಗ ವಿಶ್ವವಿದ್ಯಾಲಯದ ಕುಲಪತಿ ನಿರಂಜನ ವಾನಳ್ಳಿ ಉತ್ತರ ನೀದೆ ನುಣುಚಿಕೊಂಡಿದ್ದರು.

ಚಿತ್ರ : ಡಾ.ಡಿ.ಎ.ಕಲ್ಪಜ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande