
ಕೋಲಾರ, ಡಿ.೨೯ (ಹಿ.ಸ) :
ಆ್ಯಂಕರ್ : ನಗರದಲ್ಲಿ ಪ್ರಸನ್ನಾನಂದ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕೋಲಾರ ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸೋಮವಾರ ರಾಜನಹಳ್ಳಿಯ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ೮ ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಯಿತು.
ಮುಂದಿನ ವರ್ಷ ಫೆ. ೮ ಮತ್ತು ೯ ರಂದು ಎರಡು ದಿನಗಳ ಕಾಲ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ರಾಜನಹಳ್ಳಿ ಗ್ರಾಮದಲ್ಲಿ ನಡೆಯುವ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಕರಪತ್ರವನ್ನು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪರಮಪೂಜ್ಯ ಜಗದ್ಗುರು ಪ್ರಸನ್ನಾನಂದ ಮಹಾಸ್ವಾಮೀಜಿ ಬಿಡುಗಡೆ ಮಾಡಿದರು.
ಈ ಸಂದರ್ಭ ಮಾತನಾಡಿದ ಸ್ವಾಮೀಜಿ, ರಾಜನಹಳ್ಳಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯ ೮ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆ ನಡೆಯಲಿದ್ದು, ಕೋಲಾರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ರಾಜ್ಯಾದ್ಯಂತ ವಾಲ್ಮೀಕಿ ಸಮುದಾಯದ ಸಮಸ್ಯೆಗಳು ಇದ್ದು ಅವುಗಳ ಪರಿಹಾರಕ್ಕೆ ಸಮುದಾಯ ಒಗ್ಗಟ್ಟು ಮುಖ್ಯವಾಗಿದೆ ಆಳುವ ಸರ್ಕಾರಗಳು ಚುನಾವಣೆಯಲ್ಲಿ ಮಾತ್ರ ಸಮುದಾಯವನ್ನು ಪರಿಗಣಿಸಲಾಗುತ್ತದೆ ಆದರೆ ಅಧಿಕಾರ ಸಿಕ್ಕ ನಂತರ ನಿರ್ಲಕ್ಷ್ಯ ತೋರಿದ್ದಾರೆ ಒಗ್ಗಟ್ಟನ್ನು ಪ್ರದರ್ಶಿಸಿ ನಮ್ಮ ಹಕ್ಕುಗಳನ್ನು ಪಡೆಯಬೇಕಾಗಿದೆ ಜೊತೆಗೆ ನಕಲಿ ಜಾತಿ ಪ್ರಮಾಣಪತ್ರ ಸಂಖ್ಯೆ ಜಿಲ್ಲೆಯಲ್ಲಿ ೪ ಸಾವಿರ ಇದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುತ್ತದೆ ಜನಾಂಗದ ಸಮಸ್ಯೆ ಬಂದಾಗ ಸ್ವಪ್ರತಿಷ್ಠೆ ಬಿಟ್ಟು ಎಲ್ಲರೂ ಒಗ್ಗಟ್ಟಾಗಬೇಕು ನಮ್ಮ ನಡೆಯನ್ನು ಸರ್ಕಾರಗಳು ಗಮನಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡ ಹಾಗೂ ನಗರಸಭೆ ಸದಸ್ಯ ಎನ್.ಅಂಬರೀಷ್ ಮಾತನಾಡಿ ಜಿಲ್ಲೆಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವರ ಸಂಖ್ಯೆ ಹೆಚ್ಚಾಗಿದೆ ಜೊತೆಗೆ ಕುರುಬರನ್ನು ಎಸ್ಟಿಗೆ ಸೇರ್ಪಡೆಗೆ ಮತ್ತೆ ಪ್ರಯತ್ನಗಳು ನಡೆದಿವೆ ಇದಕ್ಕೆ ವಿರೋಧ ವ್ಯಕ್ತಪಡಿಸಬೇಕು ಸಮುದಾಯದ ಪರವಾಗಿ ಬೇಡಿಕೆಗಳನ್ನು ಈಡೇರಿಸಲು ನಾವು ಹೋರಾಟ ಮಾಡಬೇಕು ಆದರೆ ಅದರ ಫಲವನ್ನು ಮಾತ್ರ ಅಧಿಕಾರಿ ವರ್ಗದವರು ಪಡೆಯುತ್ತಾರೆ. ಅದರಿಂದಾಗಿ ಸಮುದಾಯದ ಅಭಿವೃದ್ಧಿಗೆ ಸಹಕಾರ ಇಲ್ಲವಾಗಿದೆ ಅವಣಿಯಲ್ಲಿ ಸುಮಾರು ೧೦ ಎಕರೆ ಜಾಗದಲ್ಲಿ ಇಂಜಿನಿಯರ್ ಕಾಲೇಜು ಜೊತೆಗೆ ನಗರದಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಒತ್ತಾಯಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಗುರುಪೀಠದ ಜಾತ್ರೆಗೆ ತಾಲೂಕು ಪ್ರತಿನಿಧಿಗಳಾಗಿ ಕೋಲಾರದಿಂದ ಎಂ.ಬಾಲಗೋವಿಂದ್, ಮುಳಬಾಗಿಲು ಜಯಪ್ರಕಾಶ್, ಶ್ರೀನಿವಾಸಪುರ ನರೇಶ್ ನಾಯಕ್, ಮಾಲೂರು ನಾರಾಯಣಸ್ವಾಮಿ, ಬಂಗಾರಪೇಟೆ ಕಾಮಾಂಡಹಳ್ಳಿ ನಾರಾಯಣಸ್ವಾಮಿ, ಕೆಜಿಎಫ್ ರಮೇಶ್ ನಾಯಕ್ ಅವರನ್ನು ನೇಮಕ ಮಾಡಿ ಇವರ ನೇತೃತ್ವದಲ್ಲಿ ಜಾತ್ರಗೆ ಸಂಬಂಧಿಸಿದ ಜವಾಬ್ದಾರಿ ವಹಿಸಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗುರುಪೀಠದ ಜಿಲ್ಲಾ ಧರ್ಮದರ್ಶಿ ಮಾಲೂರು ವೆಂಕಟರಾಮ್, ಮುಖಂಡರಾದ ಕುಡುವನಹಳ್ಳಿ ಆನಂದ್, ಕೋಟೆ ಶ್ರೀನಿವಾಸ್, ಮಂಜುಳಾ ಶ್ರೀನಿವಾಸ್, ಬೈರಕೂರು ರಾಮಾಂಜಿ, ಬೈರಂಡಹಳ್ಳಿ ನಾಗೇಶ್, ಅವಣಿ ಸುಬ್ರಮಣಿ, ವಗಳಗೆರೆ ಅಂಜಿ, ಬೆಳ್ಳೂರು ತಿರುಮಲೇಶ್, ಕಲ್ವಮಂಜಲಿ ರವಿ, ಅಮ್ಮೇರಹಳ್ಳಿ ಚಲಪತಿ, ಮಾಲೂರು ದೇವೇಂದ್ರ ಮುಂತಾದವರು ಇದ್ದರು.
ಚಿತ್ರ ; ಕೋಲಾರ ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸೋಮವಾರ ರಾಜನಹಳ್ಳಿಯ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ೮ ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್