
ಕೋಲಾರ, ಡಿ.೨೯ (ಹಿ.ಸ) :
ಆ್ಯಂಕರ್ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ೨೦೨೪-೨೫ ಸಾಲಿನ ಸ್ವಾವಲಂಬಿ ಸಾರಥಿ ಹಾಗೂ ಗಂಗಾ ಕಲ್ಯಾಣ ಯೋಜನೆಯ ಮೂಲಕ ಫಲಾನುಭವಿಗಳಿಗೆ ಟ್ಯಾಕ್ಸಿ, ಆಟೋ, ಕೊಳವೆಬಾವಿಗೆ ಯಂತ್ರೋಪಕರಣಗಳು ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ನಗರದ ಶಾಸಕರ ಕಛೇರಿ ಮುಂದೆ ಸೋಮವಾರ ವಿತರಿಸಲಾಯಿತು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಪ್ಸರ್ ಮಾತನಾಡಿ, ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆ ಹಾಗೂ ಅಭಿವೃದ್ಧಿ ನಿಗಮದಿಂದ ಶಾಸಕ ಕೊತ್ತೂರು ಮಂಜುನಾಥ್ ಮುಂದಾಳತ್ವದಲ್ಲಿ ಸೌಲಭ್ಯ ವಿತರಿಸಲಾಗಿದೆ ಎಂದರು.
ಕೋಲಾರ ತಾಲ್ಲೂಕಿನ ನಿರುದ್ಯೋಗಿ ನಾಲ್ವರು ಯುವಕರಿಗೆ ಟ್ಯಾಕ್ಸಿ, ಒಂದು ಆಟೋ ರಿಕ್ಷಾ, ಗಂಗಾ ಕಲ್ಯಾಣ ಯೋಜನೆಯಡಿ ಐದು ಮಂದಿ ಬಡ ರೈತರಿಗೆ ಕೊಳವೆ ಬಾವಿಗೆ ಯಂತ್ರೋಪಕರಣಗಳ ಸಾಮಗ್ರಿಗಳು ಹಾಗೂ ಅರಿವು ಸಾಲ ಯೋಜನೆಯ ೧ ಕೋಟಿ ಸಾಲ ಸೌಲಭ್ಯ ನೀಡಲಾಗಿದೆ ಜೊತೆಗೆ ಬಡವರು ಶಿಕ್ಷಣ ಮುಂದುವರಿಸಲು ಸಹಾಯ ಮಾಡಲಾಗಿದೆ ಎಂದು ತಿಳಿಸಿ ಇದರ ಸದುಪಯೋಗವನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾರ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕ ಅಬ್ದುಲ್ ಖಯ್ಯಾಮ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಕೋಮುಲ್ ನಿರ್ದೇಶಕ ಷಂಷೀರ್, ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ವೈ ಶಿವಕುಮಾರ್, ಟ್ಯಾಕ್ಟರ್ ಮುಸ್ತಫಾ, ಇಮ್ರಾನ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಕಾರ್ಯದರ್ಶಿ ವೀರೇಂದ್ರ ಪಾಟೀಲ್, ಮುಖಂಡರಾದ ಸೈಫ್ ಉಲ್ಲಾ ಷರೀಫ್, ಸಾಧೀಕ್, ಚಿನ್ನಾಪುರ ನಾರಾಯಣಸ್ವಾಮಿ, ನದೀಂ, ಮುಂತಾದವರು ಇದ್ದರು.
ಚಿತ್ರ ; ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಟ್ಯಾಕ್ಸಿ, ಆಟೋ, ಕೊಳವೆಬಾವಿಗೆ ಯಂತ್ರೋಪಕರಣಗಳು ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಕೋಲಾರ ನಗರದ ಶಾಸಕರ ಕಛೇರಿ ಮುಂದೆ ಸೋಮವಾರ ವಿತರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್