ಡಿ. 29–30ರಂದು ಪುದುಚೇರಿ, ಕೇರಳ ಹಾಗೂ ತಮಿಳುನಾಡುಗಳಿಗೆ ಉಪರಾಷ್ಟ್ರಪತಿ ಭೇಟಿ
ನವದೆಹಲಿ, 28 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಡಿಸೆಂಬರ್ 29 ಮತ್ತು 30 ರಂದು ಪುದುಚೇರಿ, ಕೇರಳ ಹಾಗೂ ತಮಿಳುನಾಡಿಗೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಉಪರಾಷ್ಟ್ರಪತಿಗಳ ಸಚಿವಾಲಯ ತಿಳಿಸಿದೆ. ಡಿಸೆಂಬರ್ 29ರಂದು ಉಪರಾಷ್ಟ್ರಪತಿಗಳು ಮೊದಲಿಗೆ ಪುದುಚೇರಿ
Vice President


ನವದೆಹಲಿ, 28 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಡಿಸೆಂಬರ್ 29 ಮತ್ತು 30 ರಂದು ಪುದುಚೇರಿ, ಕೇರಳ ಹಾಗೂ ತಮಿಳುನಾಡಿಗೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಉಪರಾಷ್ಟ್ರಪತಿಗಳ ಸಚಿವಾಲಯ ತಿಳಿಸಿದೆ.

ಡಿಸೆಂಬರ್ 29ರಂದು ಉಪರಾಷ್ಟ್ರಪತಿಗಳು ಮೊದಲಿಗೆ ಪುದುಚೇರಿಗೆ ಆಗಮಿಸಲಿದ್ದು, ಅಲ್ಲಿ ನಾಗರಿಕ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮಹಾನ್ ಕವಿ ಸುಬ್ರಹ್ಮಣ್ಯ ಭಾರತಿಯಾರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುವುದರ ಜೊತೆಗೆ, ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ನಿರ್ಮಿಸಲಾದ ವಸತಿ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಇದೇ ದಿನ ಪುದುಚೇರಿ ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಅದೇ ದಿನ ಸಂಜೆ ಅವರು ಕೇರಳಕ್ಕೆ ತೆರಳಿ, ತಿರುವನಂತಪುರಂನಲ್ಲಿ ನಡೆಯಲಿರುವ ‘ತಿರುವನಂತಪುರಂ ಫೆಸ್ಟ್–2025’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಡಿಸೆಂಬರ್ 30ರಂದು ಉಪರಾಷ್ಟ್ರಪತಿಗಳು ಕೇರಳದ ವರ್ಕಲಾದಲ್ಲಿ ನಡೆಯಲಿರುವ 93ನೇ ಶಿವಗಿರಿ ತೀರ್ಥಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ತಿರುವನಂತಪುರಂನ ಮಾರ್ ಇವಾನಿಯೋಸ್ ಕಾಲೇಜಿನ ಪ್ಲಾಟಿನಂ ಜುಬಿಲಿ ಸಮಾರೋಪ ಸಮಾರಂಭದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಲಿದ್ದಾರೆ.

ತಮ್ಮ ಭೇಟಿ ಕಾರ್ಯಕ್ರಮದ ಅಂತಿಮ ಹಂತದಲ್ಲಿ, ಉಪರಾಷ್ಟ್ರಪತಿಗಳು ತಮಿಳುನಾಡಿನ ರಾಮೇಶ್ವರಂಗೆ ಪ್ರಯಾಣ ಬೆಳೆಸಿ, ‘ಕಾಶಿ–ತಮಿಳು ಸಂಗಮ 4.0’ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande