ವಿದ್ಯುತ್ ಕೃಷಿ ಟ್ರ್ಯಾಕ್ಟರ್‌ಗಳಿಗೆ ಹೊಸ ಭಾರತೀಯ ಮಾನದಂಡ ಬಿಡುಗಡೆ ಮಾಡಿದ ಪ್ರಹ್ಲಾದ ಜೋಶಿ
ನವದೆಹಲಿ, 28 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಗ್ರಾಹಕ ದಿನದ ಅಂಗವಾಗಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ ಅವರು ಭಾನುವಾರ ನವದೆಹಲಿಯ ಭಾರತ್ ಮಂಟಪದಲ್ಲಿ ವಿದ್ಯುತ್ ಕೃಷಿ ಟ್ರ್ಯಾಕ್ಟರ್‌ಗಳಿಗಾಗಿ ಹೊಸ ಭಾರತೀಯ ಮಾನದಂಡ IS 19262:202
Joshi


ನವದೆಹಲಿ, 28 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಗ್ರಾಹಕ ದಿನದ ಅಂಗವಾಗಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ ಅವರು ಭಾನುವಾರ ನವದೆಹಲಿಯ ಭಾರತ್ ಮಂಟಪದಲ್ಲಿ ವಿದ್ಯುತ್ ಕೃಷಿ ಟ್ರ್ಯಾಕ್ಟರ್‌ಗಳಿಗಾಗಿ ಹೊಸ ಭಾರತೀಯ ಮಾನದಂಡ IS 19262:2025 – ವಿದ್ಯುತ್ ಕೃಷಿ ಟ್ರ್ಯಾಕ್ಟರ್‌ಗಳ ಪರೀಕ್ಷಾ ಸಂಹಿತೆಯನ್ನು ಬಿಡುಗಡೆ ಮಾಡಿದರು.

ಭಾರತೀಯ ಮಾನದಂಡಗಳ ಬ್ಯೂರೋ ರೂಪಿಸಿರುವ ಈ ಮಾನದಂಡವು ವಿದ್ಯುತ್ ಚಾಲಿತ ಕೃಷಿ ಟ್ರ್ಯಾಕ್ಟರ್‌ಗಳ ಪರೀಕ್ಷೆಯನ್ನು ಏಕರೂಪ, ಪಾರದರ್ಶಕ ಹಾಗೂ ವೈಜ್ಞಾನಿಕ ರೀತಿಯಲ್ಲಿ ನಡೆಸುವ ಉದ್ದೇಶ ಹೊಂದಿದೆ. ಇದರ ಮೂಲಕ ರೈತರು ಮತ್ತು ತಯಾರಕರಿಗೆ ವಿಶ್ವಾಸಾರ್ಹ ಹಾಗೂ ಸ್ಪಷ್ಟ ಪರೀಕ್ಷಾ ಚೌಕಟ್ಟು ಲಭ್ಯವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

IS 19262:2025 ಮಾನದಂಡವು PTO ಶಕ್ತಿ, ಡ್ರಾಬಾರ್ ಶಕ್ತಿ, ಬೆಲ್ಟ್-ಪುಲ್ಲಿ ಕಾರ್ಯಕ್ಷಮತೆ, ಕಂಪನ ಪರೀಕ್ಷೆ ಹಾಗೂ ಟ್ರ್ಯಾಕ್ಟರ್‌ನ ವಿವಿಧ ಘಟಕಗಳ ಪರಿಶೀಲನೆಗೆ ಅಗತ್ಯವಾದ ಪರೀಕ್ಷಾ ವಿಧಾನಗಳನ್ನು ಒಳಗೊಂಡಿದೆ. ಇದಲ್ಲದೆ, ವಿದ್ಯುತ್ ಟ್ರ್ಯಾಕ್ಟರ್‌ಗಳ ಪರೀಕ್ಷೆಗೆ ಸಂಬಂಧಿಸಿದ ಏಕರೂಪದ ಪರಿಭಾಷೆ ಮತ್ತು ಸರಳ ಮಾರ್ಗಸೂಚಿಗಳನ್ನು ಇದು ಒದಗಿಸುತ್ತದೆ.

ಡೀಸೆಲ್ ಚಾಲಿತ ಟ್ರ್ಯಾಕ್ಟರ್‌ಗಳಿಗಿಂತ ವಿದ್ಯುತ್ ಟ್ರ್ಯಾಕ್ಟರ್‌ಗಳು ಕಡಿಮೆ ಹೊಗೆ ಉಳಿತಾಯ, ಕಡಿಮೆ ಶಬ್ದ ಹಾಗೂ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವುದು ಪ್ರಮುಖ ಲಾಭವಾಗಿದೆ. ಕಡಿಮೆ ಚಲಿಸುವ ಭಾಗಗಳಿರುವುದರಿಂದ ದುರಸ್ತಿ ಅಗತ್ಯವೂ ಕಡಿಮೆಯಾಗುತ್ತದೆ. ಇದರಿಂದ ದೀರ್ಘಕಾಲ ಹೊಲಗಳಲ್ಲಿ ಕೆಲಸ ಮಾಡುವ ರೈತರಿಗೆ ಇದು ಪರಿಸರ ಸ್ನೇಹಿ ಮತ್ತು ಆರೋಗ್ಯಕರ ಆಯ್ಕೆಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ಕೃಷಿ ಸಚಿವಾಲಯದ ಮನವಿಯ ಮೇರೆಗೆ ಈ ಮಾನದಂಡವನ್ನು ಬಿಐಎಸ್ ಆದ್ಯತೆಯ ಆಧಾರದಲ್ಲಿ ಅಭಿವೃದ್ಧಿಪಡಿಸಿದ್ದು, ವಿದ್ಯುತ್ ಟ್ರ್ಯಾಕ್ಟರ್ ತಯಾರಿಕಾ ಕಂಪನಿಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಕೃಷಿ ಎಂಜಿನಿಯರಿಂಗ್ ತಜ್ಞರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಐಸಿಎಆರ್–ಕೇಂದ್ರ ಕೃಷಿ ಎಂಜಿನಿಯರಿಂಗ್ ಸಂಸ್ಥೆ (ಭೋಪಾಲ್), ಕೇಂದ್ರ ಕೃಷಿ ಯಂತ್ರೋಪಕರಣ ಪರೀಕ್ಷಾ ಮತ್ತು ತರಬೇತಿ ಸಂಸ್ಥೆ (ಬುಡ್ನಿ), ಟ್ರ್ಯಾಕ್ಟರ್ ಮತ್ತು ಯಾಂತ್ರೀಕರಣ ಸಂಘ (ನವದೆಹಲಿ), ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಪುಣೆ) ಹಾಗೂ ಆಲ್ ಇಂಡಿಯಾ ಫಾರ್ಮರ್ಸ್ ಅಲೈಯನ್ಸ್ ಮುಂತಾದ ಸಂಸ್ಥೆಗಳು ಮಹತ್ವದ ಕೊಡುಗೆ ನೀಡಿವೆ.

ಪ್ರಸ್ತುತ ಈ ಮಾನದಂಡವು ಸ್ವಯಂಪ್ರೇರಿತವಾಗಿದ್ದರೂ, ಇದರ ಅನುಷ್ಠಾನದಿಂದ ದೇಶದಲ್ಲಿ ವಿದ್ಯುತ್ ಕೃಷಿ ಟ್ರ್ಯಾಕ್ಟರ್‌ಗಳ ಬಳಕೆ ಹೆಚ್ಚಾಗಿ, ಹೊಸ ತಂತ್ರಜ್ಞಾನಗಳ ಅಳವಡಿಕೆ ವೇಗ ಪಡೆಯುವುದರೊಂದಿಗೆ ಕೃಷಿ ಕ್ಷೇತ್ರದಲ್ಲಿನ ಮಾಲಿನ್ಯ ಕಡಿತಕ್ಕೆ ಮಹತ್ವದ ಸಹಕಾರ ದೊರೆಯಲಿದೆ ಎಂದು ಸರ್ಕಾರ ಹಾಗೂ ಬಿಐಎಸ್ ವಿಶ್ವಾಸ ವ್ಯಕ್ತಪಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande