ಕವಯತ್ರಿ ಜೆಸಿಂತಾ ಕೆರ್ಕೆಟ್ಟಾ ಮತ್ತು ಶಿಕ್ಷಣ ತಜ್ಞ ಪ್ರಭಾಶಂಕರ ಪ್ರೇಮಿ ‘ಶಬ್ದ್’ ಪ್ರಶಸ್ತಿಗಳಿಗೆ ಭಾಜನ
ಬೆಂಗಳೂರು, 28 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದಕ್ಷಿಣ ಭಾರತದ ಪ್ರಸಿದ್ಧ ಸಾಹಿತ್ಯ ಸಂಸ್ಥೆ ‘ಶಬ್ದ್’ ಭಾನುವಾರ ತನ್ನ 28ನೇ ವಾರ್ಷಿಕ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವೈಭವದಿಂದ ನಡೆಸಿತು. ಈ ಸಂದರ್ಭದಲ್ಲಿ ಖ್ಯಾತ ಕವಯತ್ರಿ ಜೆಸಿಂತಾ ಕೆರ್ಕೆಟ್ಟಾ ಅವರಿಗೆ ಒಂದು ಲಕ್ಷ ರೂಪಾಯಿ ನಗದು ಬ
Shabda samman


ಬೆಂಗಳೂರು, 28 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದಕ್ಷಿಣ ಭಾರತದ ಪ್ರಸಿದ್ಧ ಸಾಹಿತ್ಯ ಸಂಸ್ಥೆ ‘ಶಬ್ದ್’ ಭಾನುವಾರ ತನ್ನ 28ನೇ ವಾರ್ಷಿಕ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವೈಭವದಿಂದ ನಡೆಸಿತು. ಈ ಸಂದರ್ಭದಲ್ಲಿ ಖ್ಯಾತ ಕವಯತ್ರಿ ಜೆಸಿಂತಾ ಕೆರ್ಕೆಟ್ಟಾ ಅವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಹೊಂದಿದ ‘ಅಗ್ಯೇಯ ಶಬ್ದ ಸೃಜನ್ ಸಮ್ಮಾನ್’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಇದೇ ವೇಳೆ ಬೆಂಗಳೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಖ್ಯಾತ ಶಿಕ್ಷಣ ತಜ್ಞ ಡಾ. ಟಿ.ಜಿ. ಪ್ರಭಾಶಂಕರ ಪ್ರೇಮಿ ಅವರಿಗೆ 25 ಸಾವಿರ ರೂಪಾಯಿ ಮೌಲ್ಯದ ‘ದಕ್ಷಿಣ ಭಾರತ ಶಬ್ದ ಹಿಂದಿ ಸೇವಿ ಸಮ್ಮಾನ್’ ನೀಡಿ ಗೌರವಿಸಲಾಯಿತು. ಪ್ರಶಸ್ತಿಗಳೊಂದಿಗೆ ಅಂಗವಸ್ತ್ರ, ಸ್ಮರಣಿಕೆ, ಪ್ರಶಂಸಾ ಫಲಕ ಹಾಗೂ ಪುಷ್ಪಗುಚ್ಛವನ್ನು ಸಹ ನೀಡಲಾಯಿತು.

ಅಗ್ಯೇಯ ಶಬ್ದ ಸೃಜನ್ ಸಮ್ಮಾನ್’ ಸ್ವೀಕರಿಸಿ ಮಾತನಾಡಿದ ಜೆಸಿಂತಾ ಕೆರ್ಕೆಟ್ಟಾ, ಒಬ್ಬ ಸೃಷ್ಟಿಕರ್ತನಿಗೆ, ವಿಶೇಷವಾಗಿ ಮಹಿಳೆಗೆ, ತನ್ನ ಸಂಸ್ಕೃತಿ, ಗುರುತು ಮತ್ತು ಅದರ ಮೇಲಿನ ಹೆಮ್ಮೆಯ ಭಾವನೆ ಅತ್ಯಗತ್ಯ. ಈ ಪ್ರಶಸ್ತಿಯ ಮೂಲಕ ಬುಡಕಟ್ಟು ಗುರುತಿಗೂ ಅಂಚಿನಲ್ಲಿರುವ ಸಮುದಾಯಗಳ ಕಾವ್ಯಕ್ಕೂ ಗೌರವ ಸಲ್ಲಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.

ದಕ್ಷಿಣ ಭಾರತ ಶಬ್ದ ಹಿಂದಿ ಸೇವಿ ಸಮ್ಮಾನ್’ ಸ್ವೀಕರಿಸಿದ ಡಾ. ಪ್ರಭಾಶಂಕರ ಪ್ರೇಮಿ, ಇಂದಿನ ಸಾಂಸ್ಕೃತಿಕ ಘರ್ಷಣೆಗಳ ಯುಗದಲ್ಲಿ ಪ್ರೀತಿ ಹಾಗೂ ಪರಸ್ಪರ ಗೌರವವನ್ನು ಬೆಳೆಸುವುದು ನಮ್ಮ ಹೊಸ ನಾಗರಿಕ ಕರ್ತವ್ಯವಾಗಿದೆ. ಸಂಸ್ಕೃತಿ ಭಾಷೆಯಲ್ಲಿ ಜೀವಂತವಾಗಿರುತ್ತದೆ. ಭಾರತದ ಬಹುಭಾಷಾವಾದವು ವೈವಿಧ್ಯತೆಯಲ್ಲಿನ ಏಕತೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು.

ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಖ್ಯಾತ ಚಿಂತಕ ಹಾಗೂ ಯುನೆಸ್ಕೋದ ಮಾಜಿ ಭಾರತೀಯ ಸಾಂಸ್ಕೃತಿಕ ರಾಯಭಾರಿ ಚಿರಂಜೀವ್ ಸಿಂಗ್ ಮಾತನಾಡಿ ಸಾಹಿತ್ಯ ಜೀವನದ ಬೆಳಕು, ಕಾವ್ಯವು ಮಾನವ ನಾಗರಿಕತೆಯ ಭವ್ಯ ಸಾಹಸಗಾಥೆ. ನಿಜವಾದ ಸಾಹಿತ್ಯದಲ್ಲಿ ಜೀವನ ಮಿಡಿಯುತ್ತದೆ. ಅದಕ್ಕಾಗಿಯೇ ಚೈತನ್ಯಶೀಲ ರಾಷ್ಟ್ರಗಳು ತಮ್ಮ ಕವಿಗಳನ್ನು ಗೌರವಿಸುತ್ತವೆ ಎಂದು ಹೇಳಿದರು.

ಸ್ವಾಗತ ಭಾಷಣದಲ್ಲಿ ‘ಶಬ್ದ್’ ಅಧ್ಯಕ್ಷ ಡಾ. ಶ್ರೀನಾಯರಣ್ ಸಮೀರ್ ಮಾತನಾಡಿ ಸಾಹಿತ್ಯ ಮತ್ತು ಬರಹಗಾರರನ್ನು ಸಾಮಾಜಿಕ ಚಿಂತನೆಯ ಮುಂಚೂಣಿಗೆ ತರುವುದೇ ‘ಶಬ್ದ್’ ಪ್ರಶಸ್ತಿಗಳ ಉದ್ದೇಶ. ದಕ್ಷಿಣದಲ್ಲಿ ಆರಂಭವಾದ ಈ ಪ್ರಯತ್ನ ಉತ್ತರದಲ್ಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಅಗ್ಯೇಯ ಶಬ್ದ ಸೃಜನ್ ಸಮ್ಮಾನ್’ ಅನ್ನು ಸಾಮಾಜಿಕ ಕಾರ್ಯಕರ್ತ ಹಾಗೂ ಅಗ್ಯೇಯ ಸಾಹಿತ್ಯದ ಅಭಿಜ್ಞ ಬಾಬುಲಾಲ್ ಗುಪ್ತಾ ಪ್ರತಿಷ್ಠಾನದ ಸೌಜನ್ಯದಿಂದ, ಮತ್ತು ‘ದಕ್ಷಿಣ ಭಾರತ ಶಬ್ದ ಹಿಂದಿ ಸೇವಿ ಸಮ್ಮಾನ್’ ಅನ್ನು ಬೆಂಗಳೂರು–ಚೆನ್ನೈಯಿಂದ ಪ್ರಕಟವಾಗುವ ‘ದಕ್ಷಿಣ ಭಾರತ ರಾಷ್ಟ್ರಮತ್’ ಪತ್ರಿಕಾ ಸಮೂಹದ ಸೌಜನ್ಯದಿಂದ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ‘ಶಬ್ದ್’ ಸದಸ್ಯ ಹಾಗೂ ಯುವ ಕವಿ ದೀಪಕ್ ಸೊಪೋರಿ ಅವರ “ಪೀಧಿಯೋಂಕಿ ಪೀರ್” ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮವನ್ನು ಶಬ್ದ್ ಕಾರ್ಯದರ್ಶಿ ಡಾ. ಉಷಾರಾಣಿ ರಾವ್ ನಿರ್ವಹಿಸಿದರು. ಕಾರ್ಯಕ್ರಮ ಸಂಯೋಜಕ ಶ್ರೀಕಾಂತ್ ಶರ್ಮಾ ಅವರು ಧನ್ಯವಾದ ಅರ್ಪಿಸಿದರು.

ಸಮಾರಂಭದ ಎರಡನೇ ಅಧಿವೇಶನದಲ್ಲಿ ಗೀತರಚನೆಕಾರ ಆನಂದಮೋಹನ್ ಝಾ ಅವರ ಅಧ್ಯಕ್ಷತೆಯಲ್ಲಿ, ಗಜಲ್ ಬರಹಗಾರ ವಿದ್ಯಾಕೃಷ್ಣ ಅವರ ನಿರೂಪಣೆಯಲ್ಲಿ ನಡೆದ ಕಾವ್ಯವಾಚನ ಕಾರ್ಯಕ್ರಮವು ಪ್ರೇಕ್ಷಕರ ಮನಸೂರೆಗೊಂಡಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande