
ಕೋಲಾರ, ೨೮ ಡಿಸೆಂಬರ್ (ಹಿ.ಸ) :
ಆ್ಯಂಕರ್ : ವೈಕುಂಠ ಏಕಾದಶಿ ಹಾಗೂ ಮುಕ್ಕೋಡಿ ದ್ವಾದಶಿ ಅಂಗವಾಗಿ ನಗರದ ಅಮ್ಮವಾರಿಪೇಟೆಯ ಶ್ರೀವರದರಾಜಸ್ವಾಮಿ ದೇವಾಲಯದಲ್ಲಿ ಡಿ.೩೦ ಹಾಗೂ ಡಿ.೩೧ ರಂದು ಅಯೋಧ್ಯ ಶ್ರೀರಾಮನವಿಶೇಷ ಅಲಂಕಾರ ಹಾಗೂ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕರಾದ ಮುರಳಿರಾಮಾನುಜಂ ತಿಳಿಸಿದ್ದಾರೆ.
ಡಿ.೩೦ರ ಮಂಗಳವಾರ ವೈಕುಂಠ ಏಕಾದಶಿ ಅಂಗವಾಗಿ ಬೆಳಗ್ಗೆ ಸ್ವಾಮಿಗೆ ವಿಶೇಷ ಅಲಂಕಾರ, ವೈಕುಂಠ ದ್ವಾರ ಪೂಜೆ ಸೇರಿದಂತೆ ವಿಶೇಷತೆ ಇದ್ದು, ಡಿ.೩೧ರ ಬುಧವಾರ ಬೆಳಗ್ಗೆ ೪-೩೦ಕ್ಕೆ ಮುಕ್ಕೋಟಿ ದ್ವಾದಶಿ ಪ್ರಯುಕ್ತ ಮಹಾಮಂಗಲಾರತಿ, ತೀರ್ಥಪ್ರಸಾದ ವಿನಿಯೋಗ, ಸರ್ವದರ್ಶನದ ವ್ಯವಸ್ಥೆ ಮಾಡಿದ್ದು, ಈ ವರ್ಷ ಅಯೋಧ್ಯ ಶ್ರೀರಾಮನ ಅಲಂಕಾರ ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್