
ಗದಗ, 26 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಪುರಷ್ಕೃತ ಅಮೃತ-2.0 ಅಭಿಯಾನದ “ಅಮೃತ್ ಮಿತ್ರ” ಕಾರ್ಯಕ್ರಮದ ತಾಂತ್ರಿಕೇತರ ಚಟುವಟಿಕೆಯಡಿ ಕಾರ್ಯಕ್ರಮದಡಿ ಮುಂಡರಗಿ ಪುರಸಭೆ ವ್ಯಾಪ್ತಿಯಲ್ಲಿನ ನೀರಿನ ಗುಣಮಟ್ಟ ಪರೀಕ್ಷೆ ಹಾಗೂ ಜಲ ಶುದ್ದೀಕರಣ ಘಟಕದ ಸೌಂದರ್ಯಕರಣ ನಿರ್ವಹಣೆ ಮಾಡಲು ಡೇ-ನಲ್ಮ್ ಅಭಿಯಾನದಡಿ ಅರ್ಹ ಮಹಿಳಾ ಸ್ವ ಸಹಾಯ ಸಂಘಗಳಿಂದ ಆಸಕ್ತಿ ಪಡಿಸುವಿಕೆ ಆಹ್ವಾನಿಸಲಾಗಿದೆ.
ಅಮೃತ್-2.0 ಯೋಜನೆಯು ಕೇಂದ್ರ ಪುರಷ್ಕೃತ್ ಯೋಜನೆಯಾಗಿದ್ದು, ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯ ಮುಖ್ಯ ಉದ್ದೇಶ ನಗರ ಪ್ರದೇಶಗಳಿಗೆ ಸುಸ್ಥಿರ ಮತ್ತು ಶುದ್ಧ ನೀರು ಪೂರೈಕೆ ಮತ್ತು ನಿರ್ವಹಣೆ ಮಾಡುವುದು
ಕೇಂದ್ರ ಸರ್ಕಾರವು ಅಮೃತ್-2.0 ಯೋಜನೆಯಡಿ “ಅಮೃತ್ ಮಿತ್ರ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದ್ದು, ಸದರಿ ಕಾರ್ಯಕ್ರಮದ ಮುಖ್ಯ ಉದ್ದೇಶ ಅಮೃತ್-2.0 ಅಭಿಯಾನದಡಿಯ ತಾಂತ್ರಿಕೇತರ ಚಟುವಟಿಕೆಗಳನ್ನು ಕೇಂದ್ರ ಪುರಷ್ಕೃತ್ ಯೋಜನೆಯಾದ ಡೇ-ನಲ್ಮ್ ಅಭಿಯಾನದಡಿ ಮುಂಡರಗಿ ಪುರಸಭೆ ವ್ಯಾಪ್ತಿಯಲ್ಲಿ ರಚಿಸಲಾಗಿರುವ ಮಹಿಳಾ ಸ್ವ ಸಹಾಯ ಸಂಘಗಳ ಮೂಲಕ ಸದರಿ ಚಟುವಟಿಕೆಗಳನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲು ಆಸಕ್ತಿ ಇರುವ ಮಹಿಳಾ ಸ್ವ ಸಹಾಯ ಸಂಘಗಳಿಂದ ಭಾಗವಹಿಸಬಹುದಾಗಿರುತ್ತದೆ.
ಆಸಕ್ತಿ ಹೊಂದಿದ ಮಹಿಳಾ ಸ್ವ ಸಹಾಯ ಸಂಘವು ಜನೆವರಿ 15 ರೊಳಗಾಗಿ ಮುಂಡರಗಿ ಪುರಸಭೆ ಕಾರ್ಯಾಲಯದಿಂದ ಅರ್ಜಿ ನಮೂನೆಯನ್ನು ಪಡೆದುಕೊಂಡು ಅರ್ಹ ಮತ್ತು ಆಸಕ್ತಿ ಇರುವ ಮಹಿಳಾ ಸ್ವ ಸಹಾಯ ಸಂಘಗಳು ತಮ್ಮ ಪ್ರಸ್ತಾವನೆಯನ್ನು ಮುಚ್ಚಿದ ಲಕೋಟೆಯಲ್ಲಿ ಮುಂಡರಗಿ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮುಂಡರಗಿ ಪುರಸಭೆ ಡೇ-ನಲ್ಮ್ ವಿಭಾಗವನ್ನು ಸಂಪರ್ಕಿಸಬಹುದು.
ಹಿಂದೂಸ್ತಾನ್ ಸಮಾಚಾರ್ / lalita MP