
ಕೋಲಾರ, ೨೬ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಕೋಲಾರ ತಾಲೂಕಿನ ಹರಟಿ ಗ್ರಾಮದ ಸರ್ವೆ ನಂಬರ್ ೩೧ ರಲ್ಲಿ ಇಂದು ರೈತರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಸ್ವಚ್ಛ ಮಾಡುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ರೈತರ ಮೇಲೆ ದೌರ್ಜನ್ಯಕ್ಕೆ ಮುಂದಾದಾಗ ರೈತರು ನಿಮ್ಮ ದಾಖಲೆಗಳನ್ನು ತೋರಿಸಿ ಎಂದು ಹೇಳಲಾಗಿ ನಿಮಗೆ ಯಾವ ದಾಖಲೆಗಳು ತೋರಿಸುವ ಅವಶ್ಯಕತೆ ಇಲ್ಲ ಎಂದಾಗ ಇಬ್ಬರ ನಡುವೆ ವಾಗ್ದಾಳಿ ನಡೆಯಿತು.
ಕರ್ನಾಟಕ ಪ್ರಾಂತ್ಯ ರೈತ ಸಂಘ ಮತ್ತು ಕಾರ್ಮಿಕ ಹಿತ ರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಆರ್ ಶ್ರೀನಿವಾಸನ್ ಅಧಿಕಾರಿಗಳನ್ನು ಪ್ರಶ್ನಿಸಿ ನಮ್ಮ ಜಮೀನುಗಳನ್ನು ದೌರ್ಜನ್ಯದಿಂದ ದಿನಾಂಕ ೨೬-೩-೨೦೨೫ ರಂದು ಏಕಾಏಕಿ ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ಕೋಟ್ಯ0ತರ ರು ಬೆಳೆಗಳನ್ನು ನೀರಾವರಿಯನ್ನು ನಾಶಪಡಿಸಿದ್ದೀರಿ ಯಾವ ಆಧಾರದ ಮೇಲೆ ನೀವು ನೋಟಿಸ್ ನೀಡಿದ್ದೀರಾ? ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಎಂದಾಗ ನಾವು ನಿಮಗೆ ತೋರಿಸುವ ಅಗತ್ಯವಿಲ್ಲವೆಂದು ಉದ್ದಂಡತನದಿಂದ ವರ್ತಿಸಿರುತ್ತಾರೆ ಎಂದು ಆರೋಪಿಸಿದರು.
ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಒಕ್ಕೊರಲಿನಿಂದ ಯಾವುದೇ ರೈತರ ಭೂಮಿಗಳಲ್ಲಿ ಅತಿಕ್ರಮ ಪ್ರವೇಶ ಮಾಡಬಾರದು ಅವರ ಬೆಳೆಗಳನ್ನು ನಾಶ ಮಾಡಬಾರದು ಒಟ್ಟಾರೆಯಾಗಿ ಒಕ್ಕಲೆಬ್ಬಿಸಬಾರದು ಎಂಬ ತೀರ್ಮಾನವನ್ನು ಕೆಡಿಪಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಹಾಗೆಯೇ ಸರ್ಕಾರವು ೨೦೧೫ ರಲ್ಲಿ ೩ ಎಕರೆಗಿಂತ ಕಡಿಮೆ ಇರುವ ಯಾವುದೇ ರೈತರ ಜಮೀನುಗಳನ್ನು ಒಕ್ಕಲೆಬ್ಬಿಸಬಾರದು ಎಂಬ ಆದೇಶವಿದ್ದರೂ ಸಹ ತಾವು ಇಂತಹ ಜಮೀನುಗಳನ್ನೇ ತಾವು ಒಕ್ಕಲೆಬ್ಬಿಸಿ ಸರ್ವನಾಶ ಮಾಡಿದ್ಧು ಸರ್ಕಾರದ ಆದೇಶಗಳು ಸುತ್ತೋಲೆಗಳು ಜನಪ್ರತಿನಿಧಿಗಳ ಆದೇಶಗಳು ಗಳನ್ನು ತಾವು ಪಾಲಿಸದೆ ಎಂದು ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಈ ಅನರ್ಥಕ್ಕೆ ಕಾರಣರಾಗಿದ್ದೀರಿ ಎಂದು ದೂರಲಾಯಿತು.
ಪೂರ್ಣ ಪ್ರಮಾಣದಲ್ಲಿ ಅರಣ್ಯ ಭೂಮಿಯನ್ನು ಅರಣ್ಯೇತೇರ ಉದ್ದೇಶಗಳಿಗಾಗಿ ಕಂದಾಯ ಇಲಾಖೆ ಮಂಜೂರು ಮಾಡಿದ್ದರೆ ಅವುಗಳನ್ನು ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದು ಅಷ್ಟೇ ಆದರೆ ಕೋಲಾರ ತಾಲೂಕು ಹುತ್ತೂರು ಹೋಬಳಿ ಶಿಳ್ಳೆಂಗೆರೆ, ಹರಟಿ ಮಲ್ಲಂಡಳ್ಳಿ, ಕೋಟಿಗಾನಹಳ್ಳಿ, ಅಬ್ಬಿಣಿ, ಅರಳಕುಂಟೆ ಗ್ರಾಮಗಳು ಕಂದಾಯ ಇಲಾಖೆಯ ಗೋಮಾಳ ಎಂಬುದನ್ನು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಲಾಯಿತು
ಇದು ಎಸ್ಐಟಿಗೆ ಬರುವುದಿಲ್ಲ ಈಗಾಗಲೇ ಜಂಟಿ ಸರ್ವೆ ಮುಗಿದಿದ್ದು ೧೯೪೧ ಆದೇಶದಂತೆ ಸೆಟಲ್ಮೆಂಟ್ ಆದೇಶದ ಪ್ರಕಾರ ಈ ಮೇಲ್ಕಂಡ ಗ್ರಾಮಗಳ ಯಾವುದೇ ಜಮೀನುಗಳು ಅರಣ್ಯ ಇಲಾಖೆಗೆ ಸಂಬಂಧ ಇಲ್ಲ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ದಾಖಲೆಗಳು ರೈತರ ಪರವಾಗಿರುವುದರಿಂದ ಅರಣ್ಯ ಇಲಾಖೆಯವರು ಅನವಶ್ಯಕವಾಗಿ ತೊಂದರೆ ನೀಡಬಾರದು ಎಂದು ಮನವಿ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ಸಹ ಬಂದು ರೈತರ ವೇದನೆಯನ್ನು ಆಲಿಸಿ ಅರಣ್ಯ ಇಲಾಖೆಯವರನ್ನು ಕರೆದುಕೊಂಡು ಹೊರಟರು.
ಈ ಸಂದರ್ಭದಲ್ಲಿ ಬಟ್ರಳ್ಳಿ ಮಂಜುನಾಥ್, ಶ್ರೀನಿವಾಸ್, ಆನಂದ್, ವೆಂಕಟಸ್ವಾಮಿ, ವೆಂಕಟರಮಣಪ್ಪ, ಸುನಂದಮ್ಮ, ಜಯಶೀಲ, ಹನುಮಕ್ಕ, ಗೋಪಾಲಪ್ಪ, ಕಿರಣ್, ಪ್ರಬಲ್ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ ; ಕೋಲಾರ ತಾಲೂಕಿನ ಹರಟಿ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ರೈತರ ನಡುವೆ ಜಟಾಪಟಿ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್