
ನವದೆಹಲಿ, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿದೇಶಿ ದೇಣಿಗೆ ಮತ್ತು ಮಾಧ್ಯಮ ಪ್ರಭಾವ ಜಾಲಗಳಿಗೆ ಸಂಬಂಧಿಸಿದ ಆರೋಪಗಳು ಸಂಪೂರ್ಣವಾಗಿ ಸುಳ್ಳು ಹಾಗೂ ದುರುದ್ದೇಶಪೂರಿತವೆಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರ ಪತ್ನಿ ಹಾಗೂ ಲೇಖಕಿ ಕೋಟಾ ನೀಲಿಮಾ ಸ್ಪಷ್ಟಪಡಿಸಿದ್ದಾರೆ.
ತಮ್ಮ ಖ್ಯಾತಿಗೆ ಹಾನಿ ಮಾಡುವ ಉದ್ದೇಶದಿಂದ ಸುಳ್ಳು ಕಥನ ಹರಡಲಾಗುತ್ತಿದ್ದು, ಆರೋಪಗಳನ್ನು ಮಾಡಿದವರು ಹಾಗೂ ಪ್ರಚಾರ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಅವರು, ತನಿಖೆಯ ಹೆಸರಿನಲ್ಲಿ ಹರಡಿರುವ ಎಲ್ಲಾ ಆರೋಪಗಳು ಅಸತ್ಯವಾಗಿದ್ದು, ಸಂಬಂಧಪಟ್ಟ ಲೇಖಕರು, ಪ್ರಕಾಶಕರು ಮತ್ತು ಪ್ರವರ್ತಕರ ವಿರುದ್ಧ ಕಾನೂನು ಕ್ರಮ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa