
ಪೂರ್ವ ಚಂಪಾರಣ್, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಿಹಾರದ ಭಾರತ–ನೇಪಾಳ ಗಡಿಯ ರಕ್ಸೌಲ್‌ನಲ್ಲಿ ಪಂಜಾಬ್ ಪೊಲೀಸರ ರಾಜ್ಯ ವಿಶೇಷ ಕಾರ್ಯಾಚರಣೆ ಕೋಶ (SSOC) ಭಾರೀ ಮಾದಕ ದ್ರವ್ಯ–ಭಯೋತ್ಪಾದನಾ ಜಾಲವನ್ನು ಪತ್ತೆಹಚ್ಚಿದ್ದು, ಭಾರತೀಯ ಸೇನೆಯಿಂದ ಪರಾರಿಯಾಗಿದ್ದ ಮಾಜಿ ಸೈನಿಕ ರಾಜ್‌ಬೀರ್ ಸಿಂಗ್ ಅಲಿಯಾಸ್ ಫೌಜಿ ಸೇರಿದಂತೆ ಇಬ್ಬರನ್ನು ಬಂಧಿಸಿದೆ.
ಆರೋಪಿಯಿಂದ 500 ಗ್ರಾಂ ಹೆರಾಯಿನ್ ಹಾಗೂ ಹ್ಯಾಂಡ್ ಗ್ರೆನೇಡ್, ಸಹಚರ ಚಿರಾಗ್ನಿಂದ 407 ಗ್ರಾಂ ಹೆರಾಯಿನ್ ಮತ್ತು 9 ಎಂಎಂ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಇಬ್ಬರೂ ಪಾಕಿಸ್ತಾನಿ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದು, ಗ್ರೆನೇಡ್ ದಾಳಿ ಸಂಚು ಹಾಗೂ ಮಾದಕ ವಸ್ತು ಕಳ್ಳಸಾಗಣದಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್‌ಬೀರ್ 2011ರಲ್ಲಿ ಸೇನೆ ಸೇರಿ 2025ರಲ್ಲಿ ತೊರೆದಿದ್ದ. ಪ್ರಸ್ತುತ ಆತನನ್ನು ಪಂಜಾಬ್‌ಗೆ ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಕರೆತರಲು ಸಿದ್ಧತೆ ನಡೆಯುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa