ಡಿಸೆಂಬರ್ 26 ರಿಂದ ರೈಲು ಪ್ರಯಾಣ ದರದಲ್ಲಿ ಏರಿಕೆ
ನವದೆಹಲಿ, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರೈಲ್ವೆ ಇಲಾಖೆ ಡಿಸೆಂಬರ್ 26 ರಿಂದ ಪ್ರಯಾಣಿಕರ ದರಗಳಲ್ಲಿ ಅಲ್ಪ ಏರಿಕೆಯನ್ನು ಜಾರಿಗೆ ತರಲಿದೆ. ಹೊಸ ದರ ತಿದ್ದುಪಡಿ ಅನ್ವಯ, ನಾನ್-ಎಸಿ ಕೋಚ್‌ಗಳಲ್ಲಿ 500 ಕಿಲೋಮೀಟರ್ ವರೆಗೆ ಪ್ರಯಾಣಿಸುವವರು ಕೇವಲ ₹10 ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಸಾಮಾನ್ಯ
Railway fair


ನವದೆಹಲಿ, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರೈಲ್ವೆ ಇಲಾಖೆ ಡಿಸೆಂಬರ್ 26 ರಿಂದ ಪ್ರಯಾಣಿಕರ ದರಗಳಲ್ಲಿ ಅಲ್ಪ ಏರಿಕೆಯನ್ನು ಜಾರಿಗೆ ತರಲಿದೆ. ಹೊಸ ದರ ತಿದ್ದುಪಡಿ ಅನ್ವಯ, ನಾನ್-ಎಸಿ ಕೋಚ್‌ಗಳಲ್ಲಿ 500 ಕಿಲೋಮೀಟರ್ ವರೆಗೆ ಪ್ರಯಾಣಿಸುವವರು ಕೇವಲ ₹10 ಹೆಚ್ಚುವರಿ ಪಾವತಿಸಬೇಕಾಗುತ್ತದೆ.

ಸಾಮಾನ್ಯ ವರ್ಗದಲ್ಲಿ 215 ಕಿ.ಮೀ ಗಿಂತ ಹೆಚ್ಚು ಪ್ರಯಾಣಕ್ಕೆ ಪ್ರತಿ ಕಿಲೋಮೀಟರ್‌ಗೆ 1 ಪೈಸೆ, ಮೇಲ್/ಎಕ್ಸ್‌ಪ್ರೆಸ್ ನಾನ್-ಎಸಿ ಹಾಗೂ ಎಸಿ ವರ್ಗಗಳಲ್ಲಿ ಪ್ರತಿ ಕಿಲೋಮೀಟರ್‌ಗೆ 2 ಪೈಸೆ ದರ ಹೆಚ್ಚಳ ಮಾಡಲಾಗಿದೆ. ಉಪನಗರ ರೈಲುಗಳು ಹಾಗೂ ಮಾಸಿಕ ಸೀಸನ್ ಟಿಕೆಟ್‌ಗಳ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

ಹೆಚ್ಚಿದ ನಿರ್ವಹಣಾ ವೆಚ್ಚ ಮತ್ತು ಮಾನವಶಕ್ತಿ ಖರ್ಚನ್ನು ಸರಿದೂಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದ್ದು, ಇದರಿಂದ ಪ್ರಸಕ್ತ ವರ್ಷದಲ್ಲಿ ಸುಮಾರು ₹600 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande