ಉಧಂಪುರ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರಿಗಾಗಿ ಶೋಧ
ಜಮ್ಮು, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜಮ್ಮು–ಕಾಶ್ಮೀರದ ಉಧಂಪುರ ಜಿಲ್ಲೆಯ ಮಜಲ್ಟಾ ಪ್ರದೇಶದ ಚೋರ್ ಮೋಟು ಗ್ರಾಮದಲ್ಲಿ ಮನೆಯಿಂದ ಆಹಾರ ಪಡೆದು ಕಾಡಿಗೆ ಪರಾರಿಯಾದರೆನ್ನಲಾದ ಭಯೋತ್ಪಾದಕರಿಗಾಗಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ. ಪೊಲೀಸರ ಹಾಗೂ ಅರೆಸೈನಿಕ ಪಡೆಗಳ ಜಂಟಿ ತಂಡಗಳು ಚೋ
Search operation


ಜಮ್ಮು, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜಮ್ಮು–ಕಾಶ್ಮೀರದ ಉಧಂಪುರ ಜಿಲ್ಲೆಯ ಮಜಲ್ಟಾ ಪ್ರದೇಶದ ಚೋರ್ ಮೋಟು ಗ್ರಾಮದಲ್ಲಿ ಮನೆಯಿಂದ ಆಹಾರ ಪಡೆದು ಕಾಡಿಗೆ ಪರಾರಿಯಾದರೆನ್ನಲಾದ ಭಯೋತ್ಪಾದಕರಿಗಾಗಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ.

ಪೊಲೀಸರ ಹಾಗೂ ಅರೆಸೈನಿಕ ಪಡೆಗಳ ಜಂಟಿ ತಂಡಗಳು ಚೋರ್ ಮೋಟು ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಸುತ್ತುವರಿಸಿ ಶೋಧ ನಡೆಸುತ್ತಿವೆ.

ಶನಿವಾರ ಸಂಜೆ ಇಬ್ಬರು ಅಪರಿಚಿತ ಭಯೋತ್ಪಾದಕರು ಗ್ರಾಮಸ್ಥನೊಬ್ಬರ ಮನೆಗೆ ಬಂದು ಆಹಾರ ಸೇವಿಸಿದ್ದರೆಂಬ ಗುಪ್ತಚರ ಮಾಹಿತಿ ದೊರೆತಿತ್ತು.

ಮಾಹಿತಿ ಆಧರಿಸಿ ಕಾರ್ಯಾಚರಣೆ ಆರಂಭಿಸಲಾದರೂ, ಅವರು ಕಾಡಿನೊಳಗೆ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande