ದೇಶೀಯ ಎಂಆರ್‌ಒ ಸಾಮರ್ಥ್ಯ ಬಲಪಡಿಸುವುದು ಸರ್ಕಾರದ ಪ್ರಮುಖ ಆದ್ಯತೆ : ಮೋದಿ
ಅಂತಾರಾಷ್ಟ್ರೀಯ
Pm


ನವದೆಹಲಿ, 26 ನವೆಂಬರ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜಿಎಂಆರ್ ಏರೋಸ್ಪೇಸ್ ಮತ್ತು ಇಂಡಸ್ಟ್ರಿಯಲ್ ಪಾರ್ಕ್-ಎಸ್‌ಇಜೆಡ್‌ನಲ್ಲಿ ಸ್ಥಾಪಿಸಲಾದ ಸಫ್ರಾನ್ ಏರ್‌ಕ್ರಾಫ್ಟ್ ಎಂಜಿನ್ ಸರ್ವೀಸಸ್ ಇಂಡಿಯಾ ಸೌಲಭ್ಯವನ್ನು ಉದ್ಘಾಟಿಸಿದರು.

ಉದ್ಘಾಟನೆ ನಂತರ ಪ್ರಧಾನಮಂತ್ರಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಭಾರತದ ವಾಯುಯಾನ ಉದ್ಯಮವು ಇಂದು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.

ಸಫ್ರಾನ್‌ನ ಈ ಹೊಸ ಎಂಆರ್‌ಒ ಸೌಲಭ್ಯವು ಭಾರತವನ್ನು ಜಾಗತಿಕ ಕೇಂದ್ರವಾಗಿ ರೂಪಿಸುವಲ್ಲಿ ನೆರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ದೇಶೀಯ ಎಂಆರ್‌ಒ ಸಾಮರ್ಥ್ಯಗಳನ್ನು ಬಲಪಡಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಇದರಿಂದ ಸಮಯ ಮತ್ತು ವೆಚ್ಚ ಎರಡನ್ನೂ ಉಳಿಸಬಹುದೆಂದು ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ ಭಾರತದ ವಾಯುಯಾನ ವಲಯ ಅಭೂತಪೂರ್ವವಾಗಿ ವಿಸ್ತರಿಸಿದ್ದು, ಅದರೊಂದಿಗೆ ಎಂಆರ್‌ಒ ಸೇವೆಗಳ ಬೇಡಿಕೆಯೂ ಹೆಚ್ಚುತ್ತಿದೆ ಎಂದರು.

ಪ್ರಸ್ತುತ ಭಾರತದಲ್ಲಿ ಶೇ. 85ರಷ್ಟು ಎಂಆರ್‌ಒ ಕಾರ್ಯಗಳು ವಿದೇಶಗಳಲ್ಲಿ ನಡೆಯುತ್ತಿರುವುದರಿಂದ ಹೆಚ್ಚಿನ ವೆಚ್ಚ ಮತ್ತು ವಿಮಾನಗಳ ದೀರ್ಘ ಅವಧಿಯ ನಿಲುಗಡೆಯ ಸಮಸ್ಯೆಗಳು ಎದುರಾಗಿದ್ದವು, ಇದನ್ನು ಬದಲಾಯಿಸಲು ದೇಶೀಯ ಎಂಆರ್‌ಒ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande